ಚೆನ್ನೈ-ಬೆಂಗಳೂರು ಕೇವಲ 30 ನಿಮಿಷದ ಪ್ರಯಾಣ!: ಹೈಪರ್ ಲೂಪ್ ಸಾರಿಗೆ ವ್ಯವಸ್ಥೆಗೆ ಯುಎಸ್ ಸಂಸ್ಥೆಯ ಪ್ರಸ್ತಾವನೆ
ಚೆನ್ನೈ ನಿಂದ ಬೆಂಗಳೂರಿಗೆ ಕೇವಲ 30 ನಿಮಿಷ ಪ್ರಯಾಣ!, ತಮಾಷೆಯ ಮಾತಲ್ಲ. ಇದು ಅಮೆರಿಕಾದ ಸಂಸ್ಥೆಯೊಂದರ ಪ್ರಸ್ತಾವಿತ ಯೋಜನೆ.

Published On :
ನವದೆಹಲಿ: ಚೆನ್ನೈ ನಿಂದ ಬೆಂಗಳೂರಿಗೆ ಕೇವಲ 30 ನಿಮಿಷ ಪ್ರಯಾಣ!, ತಮಾಷೆಯ ಮಾತಲ್ಲ. ಇದು ಅಮೆರಿಕಾದ ಸಂಸ್ಥೆಯೊಂದರ ಪ್ರಸ್ತಾವಿತ ಯೋಜನೆ.
ಅಮೆರಿಕದ ಎಲೋನ್ ಮುಸ್ಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಹೈಪರ್ ಲೂಪ್ ಮಾದರಿಯ ಸಾರಿಗೆ ವ್ಯವಸ್ಥೆಯ ಮೂಲಕ ಚೆನ್ನೈ ನಿಂದ ಬೆಂಗಳೂರಿಗೆ ಕೇವಲ 30 ನಿಮಿಷದಲ್ಲಿ ಪ್ರಯಾಣಿಸಬಹುದಾಗಿದೆ. ಪಾಡ್ ಅಥವಾ ಟ್ರೈನ್ ಮಾದರಿಯಲ್ಲಿರುವ ಹೈಪರ್ ಲೂಪ್ ಸಾರಿಗೆ ವ್ಯವಸ್ಥೆ ಗಂಟೆಗೆ 1,200 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದು, ಇದನ್ನು ಬೆಂಗಳೂರು-ಚೆನ್ನೈ ನ ಮಾರ್ಗದಲ್ಲಿ ಪ್ರಯೋಗಿಸಲು ಎಲೋನ್ ಮುಸ್ಕ್ ಸಂಸ್ಥೆ ಮುಂದಾಗಿದೆ.
ಹೈಪರ್ ಲೂಪ್ ಸಾರಿಗೆ ವ್ಯವಸ್ಥೆ ಕ್ಯಾಪ್ಸೂಲ್ ರೀತಿಯ ವಾಹನವಾಗಿದ್ದು ವಾಯುಚಾಲಿತ ಟನಲ್ ಒಳಗೆ ಸಂಚರಿಸುವ ಯಾಂತ್ರಿಕ ವ್ಯವಸ್ಥೆ ಹೊಂದಿದೆ. ಈ ಮಾದರಿಯ ಸಾರಿಗೆ ವ್ಯವಸ್ಥೆಯನ್ನು ಪರಿಚಯಿಸಲು ಆಯ್ಕೆಮಾಡಿಕೊಳ್ಳಲು ಉದ್ದೇಶಿಸಲಾಗಿರುವ ಮಾರ್ಗಗಳ ಬಗ್ಗೆ ಎಲೋನ್ ಮುಸ್ಕ್ ಸಂಸ್ಥೆ ಟ್ವೀಟ್ ಮಾಡಿದ್ದು, ಬೆಂಗಳೂರು-ಚೆನ್ನೈ, ಬೆಂಗಳೂರು ತಿರುವನಂತಪುರಂ, ನವದೆಹಲಿ-ಮುಂಬೈ, ಚೆನ್ನೈ-ಮುಂಬೈ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುವ ಉತ್ಸಾಹ ತೋರಿದೆ.
ಈ ಕುರಿತು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯಕ್ಕೆ ಎಲೋನ್ ಮುಸ್ಕ್ ಸಂಸ್ಥೆ ಪತ್ರ ಬರೆದಿದ್ದು, ಯೋಜನೆಯನ್ನು ಭಾರತದಲ್ಲಿ ಅನುಷ್ಠಾನಗೊಳಿಸುವ ಇಂಗಿತ ವ್ಯಕ್ತಪಡಿಸಿದೆ. ಎಲೋನ್ ಮುಸ್ಕ್ ಸಂಸ್ಥೆ ಆಯ್ಕೆ ಮಾಡಿಕೊಳ್ಳಲು ಉದ್ದೇಶಿಸಿರುವ ಮಾರ್ಗಗಳಲ್ಲಿ ಬುಲೆಟ್ ರೈಲುಗಳನ್ನು ಪರಿಚಯಿಸುವ ಯೋಜನೆ ಸಹ ಇದ್ದು, ಇದಕ್ಕಾಗಿ ಜಪಾನ್ ಹಾಗೂ ಚೀನಾದ ತಂಡಗಳು ಚೆನ್ನ-ಬೆಂಗಳೂರು ಮಾರ್ಗವನ್ನು ಪರಿಶೀಲಿಸುತ್ತಿದ್ದಾರೆ.
ಆದರೆ ಬಸ್ ಪ್ರಯಾಣದ ದರದಲ್ಲಿಯೇ ಹೈಪರ್ ಲೂಪ್ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ಭರವಸೆ ನೀಡಿರುವ ಎಲೋನ್ ಮುಸ್ಕ್ ಸಂಸ್ಥೆ, ಕಡಿಮೆ ಪ್ರಯಾಣ ದರದಲ್ಲಿ ಕಡಿಮೆ ಸಮಯದಲ್ಲಿ ಬೆಂಗಳೂರಿನಿಂದ ಚೆನ್ನೈ ಗೆ ತಲುಪುವ ಸಾರಿಗೆ ವ್ಯವಸ್ಥೆಯನ್ನು ಪರಿಚಯಿಸುವುದಾಗಿ ಹೇಳಿದೆ.
ಈಗಾಗಲೇ ಸಿದ್ಧಪಡಿಸಲಾಗಿರುವ ಕೊಳವೆಗಳನ್ನು ಪಿಲ್ಲರ್ ಗಳ ಮೇಲೆ ಅಳವಡಿಸುವ ಮೂಲಕ ಹೈಪರ್ ಲೂಪ್ ಟ್ರ್ಯಾಕ್ ನಿರ್ಮಾಣದ ಸಮಯವನ್ನೂ ಕಡಿಮೆ ಮಾಡಬಹುದು, ಅಷ್ಟೇ ಅಲ್ಲದೇ, ಕಾರ್ಯನಿರ್ವಹಣೆಯ ಖರ್ಚನ್ನು ಕಡಿಮೆ ಮಾಡಲು ಕೊಳವೆಗಳ ಮೇಲೆ ವಿಂಡ್ ಮಿಲ್ (ಗಾಳಿ ಯಂತ್ರ) ಹಾಗೂ ಸೋಲಾರ್ ಪ್ಯಾನಲ್ ಗಳನ್ನು ಅಳವಡಿಕೆ ಮಾಡಲಾಗುವುದು, ಎಲೆಕ್ಟ್ರೋ ಮ್ಯಾಗ್ನೆಟಿಕ್ ಸಸ್ಪೆನ್ಷನ್ ಸಹಾಯದಿಂದ ಚಲಿಸುವ ಪಾಡ್ ಚಲನೆಯ ಪ್ರಾರಂಭದಲ್ಲಿ ಮಾತ್ರ ಯಾವುದಾದರೊಂದು ರೀತಿಯ ಶಕ್ತಿಯನ್ನು ಅವಲಂಬಿಸುತ್ತದೆ ಎಂದು ಎಲೋನ್ ಮುಸ್ಕ್ ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದೆ.
ಹೈಪರ್ ಲೂಪ್ ಸಾರಿಗೆ ವ್ಯವಸ್ಥೆ ವಿಶ್ವದಲ್ಲೇ ಮೊದಲ ಬಾರಿಗೆ ದುಬೈ-ಅಬುಧಾಬಿ ಮಾರ್ಗದಲ್ಲಿ ಕಾರ್ಯನಿರ್ವಹಣೆ ಮಾಡಲಿದ್ದು, ಐದು ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ. ಹೈಪರ್ ಲೂಪ್ ಸಾರಿಗೆ ವ್ಯವಸ್ಥೆಯಲ್ಲಿ ದುಬೈ-ಅಬುಧಾಮಿಗೆ ಕೇವಲ 12 ನಿಮಿಷಗಳಲ್ಲಿ ಪ್ರಯಾಣಿಸಬಹುದಾಗಿದೆ.
ಎಲೋನ್ ಮುಸ್ಕ್ ಸಂಸ್ಥೆಯ ಯೋಜನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೈಲ್ವೆ ಅಧಿಕಾರಿ, ಯಾವುದೇ ರೀತಿಯ ಹೈಸ್ಪೀಡ್ ಕನೆಕ್ಟಿವಿಟಿ ಉತ್ತಮವಾದ ಯೋಜನೆ. ಆದರೆ ಹಲವಾರು ಕಾರಣಗಳಿಂದ ಯೋಜನೆ ಪ್ರಾರಂಭವಾಗುವುದಕ್ಕೆ ಇನ್ನೂ 10 ವರ್ಷಗಳು ಬೇಕಾಗಬಹುದು ಎಂದು ಹೇಳಿದ್ದಾರೆ.
1 ಕಿಮೀ ಹೈಸ್ಪೀಡ್ ಲೈನ್ ಗೆ ಸುಮಾರು 300 ಕೋಟಿ ರೂ ವೆಚ್ಚವಾಗಲಿದೆ, ಆದರೆ ಸ್ಯಾನ್ ಫ್ರಾನ್ಸಿಸ್ಕೋ- ಲಾಸ್ ಏಂಜಲೀಸ್ ನಡುವಿನ ಮಾರ್ಗದ ವೆಚ್ಚವನ್ನು ಆಧಾರದಲ್ಲಿಟ್ಟುಕೊಂಡು ಪ್ರತಿ ಕಿಮೀ ನಿರ್ಮಾಣಕ್ಕೆ 72 ಕೋಟಿ ರೂ ವೆಚ್ಚವಾಗಲಿದೆ ಎಂದು ಎಲೋನ್ ಮುಸ್ಕ್ ಸಂಸ್ಥೆ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Hyperloop Transportation SystemChennai to Bengaluru30 minutes Journeyಹೈಪರ್ ಲೂಪ್ ಸಾರಿಗೆ ವ್ಯವಸ್ಥೆಬೆಂಗಳೂರು-ಚೆನ್ನೈ30 ನಿಮಿಷಗಳ ಪ್ರಯಾಣ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


