ವಿಜ್ಞಾನ-ತಂತ್ರಜ್ಞಾನ

2030ರ ವೇಳೆಗೆ ಚಂದ್ರನಿಂದಲೇ ಭಾರತಕ್ಕೆ ಇಂಧನ: ಇಸ್ರೋದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ

ಏಕಕಾಲಕ್ಕೆ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ದಾಖಲೆ ಬರೆದಿದ್ದ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಐತಿಹಾಸಿಕ ಯೋಜನೆಯೊಂದನ್ನು ಕೈಗೆತ್ತಿಕೊಂಡಿದ್ದು, 2030ರ ವೇಳೆಗೆ ಭಾರತಕ್ಕೆ ಅಗತ್ಯವಿರುವ ಸಂಪೂರ್ಣ ಪ್ರಮಾಣದ ಇಂಧನವನ್ನು ಚಂದ್ರನಿಂದ ತರಿಸಿಕೊಳ್ಳಲು ಯೋಜನೆ ರೂಪಿಸಿದೆ.

2030ರ ವೇಳೆಗೆ ಚಂದ್ರನಿಂದಲೇ ಭಾರತಕ್ಕೆ ಇಂಧನ: ಇಸ್ರೋದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ
ಸಂಗ್ರಹ ಚಿತ್ರ
Published On :

ನವದೆಹಲಿ: ಏಕಕಾಲಕ್ಕೆ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ದಾಖಲೆ ಬರೆದಿದ್ದ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಐತಿಹಾಸಿಕ ಯೋಜನೆಯೊಂದನ್ನು ಕೈಗೆತ್ತಿಕೊಂಡಿದ್ದು, 2030ರ ವೇಳೆಗೆ  ಭಾರತಕ್ಕೆ ಅಗತ್ಯವಿರುವ ಸಂಪೂರ್ಣ ಪ್ರಮಾಣದ ಇಂಧನವನ್ನು ಚಂದ್ರನಿಂದ ತರಿಸಿಕೊಳ್ಳಲು ಯೋಜನೆ ರೂಪಿಸಿದೆ.

ಈ ಹಿಂದೆ ಅತ್ಯಂತ ಕಡಿಮೆ ದರದಲ್ಲಿ ಚಂದ್ರನ ಕಕ್ಷೆಗೆ ಉಪಗ್ರಹ ಕಳುಹಿಸಿದ್ದ ಇಸ್ರೋ ಅದೇ ಹುಮ್ಮಸ್ಸಿನಲ್ಲಿ ಚಂದ್ರ ಮೇಲ್ಮೈ ಮೇಲೆ ಗಣಿ ಯಂತ್ರಗಳನ್ನು ಇಳಿಸುವ ಮೂಲಕ ಅಲ್ಲಿರುವ ಅಪಾರ ಪ್ರಮಾಣದ ಹೀಲಿಯಂ-3  ಇಂಧನವನ್ನು ಭಾರತಕ್ಕೆ ರವಾನಿಸುವ ಮಹತ್ವಾಕಾಂಕ್ಷಿ ಯೋಜನೆ ರೂಪಿಸಿದೆ. ಇಸ್ರೋದ ಈ ಐತಿಹಾಸಿಕ ಯೋಜನೆ ಯಶಸ್ವಿಯಾಗಿದ್ದೇ ಆದರೆ 2030ರ ವೇಳೆಗೆ ಭಾರತ ತನಗೆ ಅಗತ್ಯವಿರುವ ಅಷ್ಟೂ ಪ್ರಮಾಣದ ಇಂಧನವನ್ನು  ಅತ್ಯಂತ ಕಡಿಮೆ ದರದಲ್ಲಿ ಚಂದ್ರನಿಂದ ಪಡೆಯಲಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಇಸ್ರೋದ ಪ್ರಾಧ್ಯಾಪಕ ಮತ್ತು ಬ್ರಹ್ಮೋಸ್ ಏರೋಸ್ಪೇಸ್ ಯೋಜನೆಯ ಮುಖ್ಯಸ್ಥರೂ ಆಗಿರುವ ಶಿವತಾನು ಪಿಳ್ಳೈ ಅವರು, ಭಾರತಕ್ಕೆ ಅಗತ್ಯವಿರುವ ಸಂಪೂರ್ಣ ಪ್ರಮಾಣದ  ಇಂಧನದ ಕೊರೆತೆಯನ್ನು ಚಂದ್ರ ನೀಗಿಸಲಿದ್ದು, ಈ ಕುರಿತ ಯೋಜನೆ ಈಗಾಗಲೇ ಪ್ರಗತಿಯಲ್ಲಿದೆ. ಬಹುಶಃ ಎಲ್ಲವೂ ಅಂದುಕೊಂಡಂತೆ ನಡೆದರೆ 2030ರ ವೇಳೆಗೆ ಭಾರತಕ್ಕೆ ಅಗತ್ಯವಾದ ಇಂಧನವನ್ನು ಚಂದ್ರನಿಂದ  ತರಿಸಿಕೊಳ್ಳಬಹುದು. ಚಂದ್ರನ ಮೇಲ್ಮೈಯಲ್ಲಿ ಅಪಾರ ಪ್ರಮಾಣದ ಹೀಲಿಯಂ-3 ಇದೆ. ಇದನ್ನು ಬೃಹತ್ ಯಂತ್ರಗಳ ಮೂಲಕ ತೋಡಿ ಭಾರತಕ್ಕೆ ರವಾನಿಸಬಹುದು. ವಿಶ್ವದ ನಾನಾ ದೇಶಗಳು ಈ ಬಗ್ಗೆ ಕಾರ್ಯ ಪ್ರವೃತ್ತವಾಗಿದ್ದು,  ಭಾರತ ಕೂಡ ಈ ಯೋಜನೆ ಸಂಬಂಧ ಕೆಲಸ ಆರಂಭಿಸಿದೆ ಎಂದು ಅವರು ತಿಳಿಸಿದರು.

ದೆಹಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಇಸ್ರೋದ ಮುಂದಿನ ಕಾರ್ಯಕ್ರಮಗಳ ಕುರಿತು ವಿವರಣೆ ನೀಡಿದ ಶಿವತಾನು ಪಿಳ್ಳೈ ಅವರು, ‘ಚಂದ್ರನ ಮೇಲಿರುವ ಹೀಲಿಯಂ-3ನಿಂದ ಭಾರತದ ಸಂಪೂರ್ಣ ಇಂಧನ  ಅಗತ್ಯೆತೆಯನ್ನು ಪೂರೈಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. 2030ರ ವೇಳೆ ಈ ಗುರಿ ಮುಟ್ಟಲಿದ್ದೇವೆ. ಚಂದ್ರನಲ್ಲಿ ಅಗಾಧ ಹೀಲಿಯಂ-3 ಇದೆ. ಇದನ್ನು ತೆಗೆದು, ತರುವ ಯೋಜನೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಇತರ ದೇಶಗಳು  ಈ ಪ್ರಯತ್ನವನ್ನು ನಡೆಸುತ್ತಿವೆ. ವಿವಿದೋದ್ದೇಶ ಹಾಗೂ ಮರು ಬಳಕೆ ಮಾಡಬಹುದಾದ ಉಪಗ್ರಹಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶವನ್ನೂ ಹೊಂದಲಾಗಿದೆ. ಈ ತಂತ್ರಜ್ಞಾನ ಅಭಿವೃದ್ಧಿಯಾದರೆ ಬಾಹ್ಯಾಕಾಶ  ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ದೊರೆಯಲಿದೆ’ ಎಂದು ಹೇಳಿದ್ದಾರೆ.

ಇಸ್ರೋಗೆ ಮೊದಲ ಜಯ
ಇನ್ನು ಈಗಾಗಲೇ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮರುಬಳಕೆ ಮಾಡಬಹುದಾದ ರಾಕೆಟ್ (RLV-TD)ಗಳನ್ನು ಪರೀಕ್ಷೆ ನಡೆಸಿದ್ದು, ಅದು ಅಭೂತಪೂರ್ವ ಯಶಸ್ಸು ಸಾಧಿಸಿತ್ತು. ಅಲ್ಲದೆ ಹೆಚ್ಚು ಇಂಧನ ಬಳಸದ ಮತ್ತು  ವಾತಾವರಣದಲ್ಲಿನ ಇಂಧನವನ್ನೇ ಬಳಸಿಕೊಳ್ಳುವ ಸ್ಕ್ರಾಮ್ ಜೆಟ್ ತಂತ್ರಜ್ಞಾನವನ್ನೂ ಕೂಡ ಇಸ್ರೋ ಸಂಶೋಧನೆ ಮಾಡಿತ್ತು. ಈ ಎಲ್ಲ ಯೋಜನೆಗಳು ಚಂದ್ರಯಾನ ಯೋಜನೆಗೆ ಪೂರಕವಾಗಲಿವೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.