ವಿಜ್ಞಾನ-ತಂತ್ರಜ್ಞಾನ

ಫೇಸ್​ಬುಕ್​ ನಿಮ್ಮ ಆಧಾರ್ ಮಾಹಿತಿ ಸಂಗ್ರಹಿಸುವುದಿಲ್ಲ: ಸಾಮಾಜಿಕ ತಾಣ ಸಂಸ್ಥೆಯಿಂದ ಸ್ಪಷ್ಟನೆ

ಪೇಸ್ ಬುಕ್ ಖಾತೆಗೆ ಲಾಗ್ ಇನ್ ಆಗುವ ಹೊಸ ಸದಸ್ಯರಿಗೆ ತಮ್ಮ ಆಧಾರ್ ದಾಖಲೆಗಳಲ್ಲಿರುವಂತೆ ಹೆಸರು ನೊಂದಾಯಿಸಲು ಫೇಸ್ ಬುಕ್ ಸೂಚಿಸುತ್ತಿದೆ ಎಂದು ........

ಫೇಸ್​ಬುಕ್​ ನಿಮ್ಮ ಆಧಾರ್ ಮಾಹಿತಿ ಸಂಗ್ರಹಿಸುವುದಿಲ್ಲ: ಸಾಮಾಜಿಕ ತಾಣ ಸಂಸ್ಥೆಯಿಂದ ಸ್ಪಷ್ಟನೆ
ಫೇಸ್ ಬುಕ್
Published On :
ನವದೆಹಲಿ: ಪೇಸ್ ಬುಕ್ ಖಾತೆಗೆ ಲಾಗ್ ಇನ್ ಆಗುವ ಹೊಸ ಸದಸ್ಯರಿಗೆ ತಮ್ಮ ಆಧಾರ್ ದಾಖಲೆಗಳಲ್ಲಿರುವಂತೆ ಹೆಸರು ನೊಂದಾಯಿಸಲು ಫೇಸ್ ಬುಕ್ ಸೂಚಿಸುತ್ತಿದೆ ಎಂದು ಕೆಲವು ಮಾದ್ಯಮಗಳು ವರದಿ ಮಾಡಿದ್ದ ಬೆನ್ನಲ್ಲೇ ಫೇಸ್ ಬುಕ್ ಸ್ಪಷ್ಟನೆ ನೀಡಿದೆ. ಫೇಸ್ ಬುಕ್ ಸಂಸ್ಥೆ ಯಾವ ಕಾರಣಕ್ಕೂ ಭಾರತೀಯ ಬಳಕೆದಾರರಿಂದ ಆಧಾರ್ ಮಾಹಿತಿ ಸಂಗ್ರಹಿಸುತ್ತಿಲ್ಲ ಎಂದು ಅದು ಹೇಳಿಕೊಂಡಿದೆ.
"ಹೊಸ ಬಳಕೆದಾರರು ತಮ್ಮ ನೈಜ ಹೆಸರಿನೊಂದಿಗೆ ಸಾಮಾಜಿಕ ಜಾಲತಾಣಕ್ಕೆ ಹೇಗೆ ಸೈನ್ ಅಪ್ ಆಗಬಹುದು ಮತ್ತು ಅದರ ಮುಖೇನ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹೇಗೆ ಸಂಪರ್ಕ ಸಾಧಿಸಲು ಸಾದ್ಯವಿದೆ ಎನ್ನುವುದನ್ನು ತಿಳಿಸಲು ಫೇಸ್ ಬುಕ್ ಸಣ್ಣ ಪರೀಕ್ಷೆ ನಡೆಸಿದೆ. ಕೆಲವರು ಈ ಪರೀಕ್ಷೆಯನ್ನು ಜನರ ಆಧಾರ್ ಮಾಹಿತಿಗಾಗಿ ಫೇಸ್ ಬುಕ್ ವಿನಂತಿಸಿದೆ ಎಂದು ತಪ್ಪಾಗಿ ವ್ಯಾಖ್ಯಾನಿಸಿದ್ದಾರೆ" ಎಂದು ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
"ಈ ಪರೀಕ್ಷೆಯು ಈಗ ಮುಗಿದಿದ್ದು, ಕೇವಲ ಫೇಸ್ ಬುಕ್ ಖಾತೆಯ ಸೈನ್-ಅಪ್ ಪುಟದಲ್ಲಿ ಹೆಚ್ಚುವರಿ ಸಂದೆಶವೊಂದು ಕಾಣಿಸಿಕೊಳ್ಳುತ್ತಿತ್ತು, ಆ ಸಂದೇಶದನುಸಾರ ಆಧಾರ್ ದಾಖಲೆಯಲ್ಲಿರುವಂತೆ  ಹೆಸರು ಬಳಸಿಕೊಂಡು ಕುಟುಂಬ ಮತ್ತು ಸ್ನೇಹಿತರು ನಿಮ್ಮನ್ನು ಶೀಘ್ರವಾಗಿ ಗುರುತಿಸಲು ಸಹಕರಿಸಿ ಎಂದು ಸಂದೇಶದ ಮೂಲಕ ತಿಳಿಸಲಾಗಿತ್ತು" ಎಂದು ಹೇಳಿಕೆ ತಿಳಿಸಿದೆ.
ಖಾತೆಯ ಸೈನ್-ಅಪ್ ಪುಟದಲ್ಲಿ, ಪರೀಕ್ಷೆಯ ಭಾಗವಾಗಿ ಬಳಕೆದಾರರಿಗೆ "ನಿಮ್ಮ ಆಧಾರ್ ದಾಖಲೆಯಲ್ಲಿರುವಂತೆ ಹೆಸರನ್ನು ಬಳಸಿ ಸ್ನೇಹಿತರು ನಿಮ್ಮನ್ನು ಗುರುತಿಸಲು ನೆರವಾಗಿ" ಎಂಬ ಸಂದೇಶ ನಿನ್ನೆಯೆಲ್ಲಾ ಫೇಸ್ ಬುಕ್ ಪುಟದಲ್ಲಿ ಕಾಣುತ್ತಿತ್ತು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.