ಸಿ ಇ ಆರ್ ಎನ್ ವಿಜ್ಞಾನ ಪ್ರಯೋಗಾಲಯದ ಸಹ ಸದಸ್ಯನಾಗಲಿರುವ ಭಾರತ
'ಪಾರ್ಟಿಕಲ್ ಫಿಸಿಕ್ಸ್' (ಕಣ ಭೌತಶಾಸ್ತ್ರ)ನ ಅತಿ ದೊಡ್ಡ ಪ್ರಯೋಗಾಲಯ ಸಿ ಇ ಆರ್ ಎನ್ ನ ಸಹ ಸದಸ್ಯನಾಗಿ ಭಾರತ ಮುಂದಿನ ಕೆಲವು ತಿಂಗಳುಗಳಲ್ಲಿ ಸೇರಿಕೊಳ್ಳಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ

Published On :
ಕೋಲ್ಕತ್ತಾ: 'ಪಾರ್ಟಿಕಲ್ ಫಿಸಿಕ್ಸ್' (ಕಣ ಭೌತಶಾಸ್ತ್ರ)ನ ಅತಿ ದೊಡ್ಡ ಪ್ರಯೋಗಾಲಯ ಸಿ ಇ ಆರ್ ಎನ್ ನ ಸಹ ಸದಸ್ಯನಾಗಿ ಭಾರತ ಮುಂದಿನ ಕೆಲವು ತಿಂಗಳುಗಳಲ್ಲಿ ಸೇರಿಕೊಳ್ಳಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿ ಎಸ್ ಟಿ) ಅಧಿಕಾರಿ ಮಂಗಳವಾರ ತಿಳಿಸಿದ್ದಾರೆ.
"ಸಹ ಸದಸ್ಯತ್ವಕ್ಕಾಗಿ ಭಾರತ ಸಲ್ಲಿಸಿದ ಅರ್ಜಿಯನ್ನು ಸೆಪ್ಟೆಂಬರ್ ನಲ್ಲಿ ಸಿ ಇ ಆರ್ ಎನ್ ಮಂಡಳಿ ಅನುಮೋದಿಸಿದೆ ಮತ್ತು ಈಗ ಎಲ್ಲ ಒಪ್ಪಂದ ಮತ್ತು ಸಹಿ ಮಾಡುವ ಪ್ರಕ್ರಿಯೆ ಸಂಪೂರ್ಣಗೊಂಡ ಮೇಲೆ ಭಾರತ ಸಿ ಇ ಆರ್ ಎನ್ ನ ಸಹ ಸದ್ಯಸ್ಯನಾಗಲಿದೆ" ಎಂದು ಡಿ ಎಸ್ ಟಿ ಅಧಿಕಾರಿ ಹೇಳಿದ್ದಾರೆ.
ಮುಂದಿನ ಕೆಲವು ತಿಂಗಳುಗಳಲ್ಲಿ ಈ ಪ್ರಕ್ರಿಯೆ ಸಂಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಈ ಬೆಳವಣಿಗೆಯ ಬಗ್ಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಷನ್ ಕೂಡ ಟ್ವೀಟ್ ಮಾಡಿದ್ದರು.
ಸ್ವಿಟ್ಸರ್ ಲ್ಯಾಂಡ್ ನಲ್ಲಿರುವ ಈ ಪ್ರಖ್ಯಾತ ಸಿ ಇ ಆರ್ ಎನ್ ಪ್ರಯೋಗಾಲಯದಲ್ಲಿ ಇತ್ತೀಚಿಗೆ ಹಿಗ್ಸ್ ಬೊಸೊನ್ ಕಣ (ದೇವಾ ಕಣ) ಸಂಶೋಧನೆ ಮಾಡಿದ್ದು ಭಾರಿ ಸುದ್ದಿಯಾಗಿತ್ತು.
ಸಹ ಸದಸ್ಯನಾದ ನಂತರ ಈ ಪ್ರಯೋಗಾಲಯದ ಹಲವು ಸಭೆಗಳು ಮತ್ತು ಕಾರ್ಯಕ್ರಮಗಳಲ್ಲಿ ಭಾಗಿಯಾವಾಗುವ ಸವಲತ್ತು ಭಾರತಕ್ಕೆ ಸಿಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


