ಅತ್ಯಾಧುನಿಕ ಹವಾಮಾನ ಉಪಗ್ರಹ ಉಡಾವಣೆಗೆ ಸಜ್ಜಾದ ಇಸ್ರೋ!
ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಅತ್ಯಾಧುನಿಕ ಮತ್ತು ಮುಂದುವರೆದ ಹವಾಮಾನ ಉಪಗ್ರಹ ಇನ್ಸಾಟ್ 3ಡಿಆರ್ ಉಡಾವಣೆಗೆ ಸಜ್ಜಾಗಿದ್ದು, ಗುರುವಾರ ಉಡಾವಣೆಗೆ ಸಮಯ ನಿಗದಿಪಡಿಸಲಾಗಿದೆ.

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಅತ್ಯಾಧುನಿಕ ಮತ್ತು ಮುಂದುವರೆದ ಹವಾಮಾನ ಉಪಗ್ರಹ ಇನ್ಸಾಟ್ 3ಡಿಆರ್ ಉಡಾವಣೆಗೆ ಸಜ್ಜಾಗಿದ್ದು, ಗುರುವಾರ ಉಡಾವಣೆಗೆ ಸಮಯ ನಿಗದಿಪಡಿಸಲಾಗಿದೆ.
ಈ ಅತ್ಯಾಧುನಿಕ ಉಪಗ್ರಹವು ಇನ್ಸಾಟ್ ಸರಣಿ ಉಪಗ್ರಹಗಳಲ್ಲಿ ಒಂದಾಗಿದ್ದು, ಈ ಹಿಂದೆ 2013ರಲ್ಲಿ ಇದೇ ಸರಣಿಯ ಇನ್ಸಾಟ್-3ಡಿ ಉಪಗ್ರಹವನ್ನು ಫ್ರಾನ್ಸ್ ನ ಗಯಾನದಿಂದ ಉಡಾವಣೆ ಮಾಡಲಾಗಿತ್ತು. ಇದಾದ ಬಳಿಕ 2015ರ ಆಗಸ್ಟ್ ನಲ್ಲಿ ಜಿಸ್ಯಾಟ್-6 ಉಪಗ್ರಹವನ್ನು ಜಿಎಸ್ ಎಲ್ ವಿ-ಡಿ6 ಉಡಾವಣಾ ವಾಹಕದ ಮೂಲಕ ಇದೇ ಶ್ರೀಹರಿಕೋಟಾದಿಂದ ಉಡಾವಣೆ ಮಾಡಿ ಇಸ್ರೋ ಯಶಸ್ಸು ಸಾಧಿಸಿತ್ತು. ಇದರ ಮುಂದುವರೆದ ಭಾಗವಾಗಿ ನಾಳೆ ಇನ್ಸಾಟ್ 3ಡಿಆರ್ ಉಪಗ್ರಹವನ್ನು ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲು ಇಸ್ರೋ ಸಕಲ ಸಿದ್ಧತೆ ಪೂರ್ಣಗೊಳಿಸಿದೆ.
ಸ್ಕಾಟ್‍ಸ್ಯಾಟ್ ದೇಶೀಯವಾಗಿ ಅಭಿವೃದ್ಧಿಪಡಿಸಿದ ಹವಾಮಾನ ಮುನ್ಸೂಚನೆ ನೀಡುವ ಉಪಗ್ರಹವಾಗಿದೆ. ಸಾಗರದ ಮೇಲ್ಭಾಗದಲ್ಲಿ ಬೀಸುವ ಮಾರುತಗಳನ್ನು ವೀಕ್ಷಿಸುವ ಮೂಲಕ ಚಂಡಮಾರುತವನ್ನು ಮೊದಲೇ ಗ್ರಹಿಸಿ ಎಚ್ಚರಿಕೆ ನೀಡುತ್ತದೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ. ಸ್ಕಾಟ್‍ಸ್ಯಾಟ್ ಉಪಗ್ರಹವನ್ನು ಅಲ್ಜೇರಿಯಾದ ಉಪಗ್ರಹದ ಜತೆ ಉಡಾವಣೆ ಮಾಡಲು ಉದ್ದೇಶಿಸಲಾಗಿದ್ದು, ಜಿಎಸ್ಎಲ್ ವಿ ಎಫ್ 05 ಉಡಾವಣಾ ವಾಹಕ 2, 211 ಕೆಜೆ ತೂಕವಿರುವ ಈ ಉಪಗ್ರಹ ಸೇರಿದಂತೆ ಈ ಅಲ್ಜೇರಿಯಾ ಉಪಗ್ರಹವನ್ನು ಹೊತ್ತು ಕಕ್ಷೆಗೆ ಸಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


