ವಿಜ್ಞಾನ-ತಂತ್ರಜ್ಞಾನ

ಬಗ್ಗಿಸಬಲ್ಲ ಸ್ಮಾರ್ಟ್ ಫೋನ್ ಉತ್ಪಾದನೆಯಲ್ಲಿ ಕ್ಸಯೋಮಿ ಮುಂಚೂಣಿ?

ಬಗ್ಗಿಸಬಲ್ಲ-ಮಡಚಬಲ್ಲ ಸ್ಮಾರ್ಟ್ ಫೋನ್ ವಿನ್ಯಾಸ ಮತ್ತು ಉತ್ಪಾದನೆಯ ಸ್ಪರ್ಧೆಯಲ್ಲಿ ಚೈನಾದ ಸ್ಮಾರ್ಟ್ ಫೋನ್ ಅಭಿವೃದ್ಧಿ ಸಂಸ್ಥೆ ಕ್ಸಯೋಮಿ ಅಂತಹ ಫೋನ್ ಅಭಿವೃದ್ಧಿಪಡಿಸುವತ್ತ ಮುಂದುವರೆದಿದೆ

ಬಗ್ಗಿಸಬಲ್ಲ ಸ್ಮಾರ್ಟ್ ಫೋನ್ ಉತ್ಪಾದನೆಯಲ್ಲಿ ಕ್ಸಯೋಮಿ ಮುಂಚೂಣಿ?
ಸಾಂದರ್ಭಿಕ ಚಿತ್ರ
Published On :
ಮನಿಲಾ: ಬಗ್ಗಿಸಬಲ್ಲ-ಮಡಚಬಲ್ಲ ಸ್ಮಾರ್ಟ್ ಫೋನ್ ವಿನ್ಯಾಸ ಮತ್ತು ಉತ್ಪಾದನೆಯ ಸ್ಪರ್ಧೆಯಲ್ಲಿ ಚೈನಾದ ಸ್ಮಾರ್ಟ್ ಫೋನ್ ಅಭಿವೃದ್ಧಿ ಸಂಸ್ಥೆ ಕ್ಸಯೋಮಿ ಅಂತಹ ಫೋನ್ ಅಭಿವೃದ್ಧಿಪಡಿಸುವತ್ತ ಮುಂದುವರೆದಿದೆ ಎಂದು ವರದಿಯೊಂದು ತಿಳಿಸಿದೆ. 
ಇನ್ಕ್ವಿರರ್ ಪ್ರಕಾರ ಕಳೆದ ವಾರ ಅಂತರ್ಜಾಲದಲ್ಲಿ ತೇಲಿಬಿಟ್ಟ ವಿಡಿಯೋವೊಂದರ ಮೂಲಕ ಈ ಕ್ಸಯೋಮಿ ಫೋನ್ ಸಾರ್ವಜನಿಕ ಪಾದಾರ್ಪಣೆ ಮಾಡಿದೆಯಂತೆ. 
ಮಡಚಬಲ್ಲ, ಬಗ್ಗಿಸಬಲ್ಲ ಸ್ಮಾರ್ಟ್ ಫೋನ್ಗಳು ಭವಿಷ್ಯ ಎಂದು ಕರೆಯಲಾಗುತ್ತಿದ್ದು ಮತ್ತೊಂದು ಚೈನಾದ ತಂತ್ರಜ್ಞಾನ ದೈತ್ಯ ಲೆನೋವಾ, ಇಂತಹ ಭವಿಷ್ಯದ ಸ್ಮಾರ್ಟ್ ಫೋನ್ ಗಳ ವಿನ್ಯಾಸ ಮತ್ತು ಅಭಿವೃದ್ಧಿಯ ಮೇಲೆ ಕೆಲಸ ಮಾಡುತ್ತಿರುವುದಾಗಿ ಘೋಷಿಸಿತ್ತು. 
ಲೆನೋವಾ ಅಲ್ಲದೆ ಕೊರಿಯಾದ ಸ್ಮಾರ್ಟ್ ಫೋನ್ ಉತ್ಪಾದಕ ಸ್ಯಾಮಸಂಗ್ ಕೂಡ 2017 ರ ಹೊತ್ತಿಗೆ ಬೆಂಡ್ ಮಾಡಬಲ್ಲ ಫೋನ್ ಗಳನ್ನೂ ಬಿಡುಗಡೆ ಮಾಡುವ ಸಾಧ್ಯತೆ ಇದೆ. 
ಆಪಲ್ ಸಂಸ್ಥೆ ಕೂಡ ಇಂತಹ ಫೋನ್ ಗಳ ವಿನ್ಯಾಸಕ್ಕೆ ಪೇಟೆಂಟ್ ಗಾಗಿ ಅರ್ಜಿ ಸಲ್ಲಿಸಿದೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.