ವಿಜ್ಞಾನ-ತಂತ್ರಜ್ಞಾನ

ನಾಳೆ ಸಂಪೂರ್ಣ ಸೂರ್ಯಗ್ರಹಣ: ಭಾರತದಲ್ಲೂ ಗೋಚರ

ಮಾರ್ಚ್ 9 ರಂದು ಈ ವರ್ಶದ ಮೊಟ್ಟಮೊದಲ ಸೂರ್ಯ ಗ್ರಹಣ ಸಂಭವಿಸಲಿದೆ. ಬುಧವಾರ ನುಸುಕಿನ ಜಾವ 5.46ಕ್ಕೆ ಆರಂಭವಾಗುವ ಗ್ರಹಣ ಬೆಳಗಿನ ಜಾವ 6.47ಕ್ಕೆ ಮುಗಿಯಲಿದೆ....

ನಾಳೆ ಸಂಪೂರ್ಣ ಸೂರ್ಯಗ್ರಹಣ: ಭಾರತದಲ್ಲೂ ಗೋಚರ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಮಾರ್ಚ್ 9 ರಂದು ಈ ವರ್ಷದ ಮೊಟ್ಟಮೊದಲ ಸೂರ್ಯ ಗ್ರಹಣ ಸಂಭವಿಸಲಿದೆ. ಬುಧವಾರ ನುಸುಕಿನ ಜಾವ  5.46ಕ್ಕೆ ಆರಂಭವಾಗುವ ಗ್ರಹಣ ಬೆಳಗಿನ ಜಾವ 6.47ಕ್ಕೆ ಮುಗಿಯಲಿದೆ.

ಪೂರ್ವಾಭಾದ್ರಾ ನಕ್ಷತ್ರ ಕುಂಭ ರಾಶಿಯಲ್ಲಿ ಕೇತುಗ್ರಹಣವು ಸಂಭವಿಸುತ್ತಿದ್ದು, ದೇಶದ ನಾನಾ ದೇವಾಲಯಗಳಲ್ಲಿ ವಿಶೇಷ ಪೂಜೆಗೆ ವ್ಯವಸ್ಥೆ ಮಾಡಲಾಗಿದೆ. ಆಗ್ನೇಯ ಏಷ್ಯಾದಲ್ಲಿ ಖಗ್ರಾಸ ಗ್ರಹಣ ಸಂಭವಿಸುತ್ತಿದ್ದು, ಪೆಸಿಫಿಕ್ ದ್ವೀಪದಲ್ಲಿ ಪೂರ್ಣ ಗ್ರಹಣ ದರ್ಶನವಾಗಲಿದೆ.

ಸೂರ್ಯಗ್ರಹಣದ ಭಾಗಶಃ ಬೆಂಗಳೂರಿನಲ್ಲಿ ಕಾಣಿಸಿಕೊಳ್ಳಲಿದೆ. ಬೆಂಗಳೂರಿನಲ್ಲಿ ಬೆಳಗ್ಗೆ 6.30 ಕ್ಕೆ ಸೂರ್ಯೋದಯವಾಗಲಿದ್ದು, ಬೆಂಗಳೂರಿಗರು ಸುಮಾರು 17 ನಿಮಿಷಗಳ ಕಾಲ ವೀಕ್ಷಿಸಬಹುದಾಗಿದೆ.

ಇಂಡೋನೇಶಿಯಾ, ಸುಮಾತ್ರ, ಕಳಿಮಂತನ್, ಖುಲವೇಶಿ ಗಳಲ್ಲಿ ಭಾಗಶಃ ಗೋಚರಿಸಲಿದೆ. ಬರಿಗಣ್ಣಿನಿಂದ ಸೂರ್ಯಗ್ರಹಣ ನೋಡಬಾರದು ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಸುಮಾರು 1 ಗಂಟೆ ಕಾಲ ಸೂರ್ಯಗ್ರಹಣ ಸಂಭವಿಸಲಿದೆ.

2015 ರ ಮಾರ್ಚ್ ನಲ್ಲಿ ಸೂರ್ಯ ಗ್ರಹಣ ಸಂಭವಿಸಿತ್ತು. ನಂತರ 2012 ರ ನವೆಂಬರ್ ನಲ್ಲಿ ಸಂಪೂರ್ಣ ಸೂರ್ಯಗ್ರಹಣವಾಗಿತ್ತು, ಅದಾದ ನಂತರ 2016 ಮಾರ್ಚ್ 9 ಅಂದರೆ ನಾಳೆ ಸಂಪೂರ್ಣ ಸೂರ್ಯ ಗ್ರಹಣ ಸಂಭವಿಸಲಿದೆ.

ಈ ವರ್ಷದಲ್ಲಿ ಒಟ್ಟು 5 ಗ್ರಹಣ ಹಿಡಿಯಲಿದೆ. ಪೂರ್ಣ ಸೂರ್ಯಗ್ರಹಣದ ಅಪರೂಪ ಹಾಗೂ ನಯನ ಮನೋಹರ ದೃಶ್ಯಾವಳಿಗಳನ್ನು ಪ್ರಸಾರ ಮಾಡಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ `ನಾಸಾ’ ತೀರ್ಮಾನಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.