ಐಆರ್ ಎನ್ಎಸ್ಎಸ್-1 ಸಿ ಉಪಗ್ರಹ ಉಡಾವಣೆ ಯಶಸ್ವಿ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ( ಇಸ್ರೋ) 5 ನೇ ನೌಕಾಯಾನ ಉಪಗ್ರಹ ಐಆರ್ ಎನ್ಎಸ್ಎಸ್-1 ಸಿ ಯನ್ನು ಬುಧವಾರ(ಜ.20 ) ರಂದು ಯಶಸ್ವಿಯಾಗಿ ಉಡಾವಣೆ ನಡೆಸಿದೆ.

ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ( ಇಸ್ರೋ) 5 ನೇ ನೌಕಾಯಾನ ಉಪಗ್ರಹ ಐಆರ್ ಎನ್ಎಸ್ಎಸ್-1 ಸಿ ಯನ್ನು ಬುಧವಾರ(ಜ.20 ) ರಂದು ಯಶಸ್ವಿಯಾಗಿ ಉಡಾವಣೆ ನಡೆಸಿದೆ.
ಐಆರ್ ಎನ್ಎಸ್ಎಸ್-1 ಸಿ ಉಪಗ್ರಹವನ್ನು ಹೊತ್ತೊಯ್ದಿರುವ ಉಪಗ್ರಹ ವಾಹಕ ಪಿಎಸ್ಎಲ್ ವಿ- ಸಿ 31 , ಅದನ್ನು ಭೂಸ್ಥಾಯಿ ಕಕ್ಷೆಗೆ ಸೇರಿಸಲಿದ್ದು, ಏಳು ಸರಣಿ ಉಪಗ್ರಹಗಳು ಮ್ಯಾಪಿಂಗ್ ಹಾಗೂ ಟ್ರ್ಯಾಕಿಂಗ್ ಜೊತೆಗೆ ರಸ್ತೆ, ವಾಯು ಮತ್ತು ಸಮುದ್ರ ಸಂಚಾರಕ್ಕೆ ಸಂಬಂಧಿಸಿದ ಸೇವೆಗಳನ್ನು ವಿಸ್ತರಿಸಲು ನೆರವಾಗಲಿದೆ.
ಈಗಾಗಲೇ ಅಂತರಿಕ್ಷದಲ್ಲಿ ಕಾರ್ಯಾಚರಣೆಯಲ್ಲಿರುವ ಇತರ ನಾಲ್ಕು ಉಪಗ್ರಹಗಳಿಗೆ ಪೂರಕವಾಗಿ ಪಿಎಸ್ ಎಲ್ ವಿ-ಸಿ 31 ಕೆಲಸ ಮಾಡಲಿದೆ. ಈ ವರ್ಷ ಇಸ್ರೋ ಕೈಗೊಳ್ಳುತ್ತಿರುವ ಮೊದಲ ಉಪಗ್ರಹ ಉಡಾವಣಾ ಅಭಿಯಾನ ಪಿಎಸ್ ಎಲ್ ವಿ-ಸಿ 31 ಆಗಿದೆ. ಇನ್ನೆರಡು ಉಪಗ್ರಹಗಳನ್ನು ಈ ವರ್ಷ ಮಾರ್ಚ್ ಅಂತ್ಯದ ವೇಳೆಗೆ ಉಡಾಯಿಸಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


