ಅನ್ಯಗ್ರಹ ಜೀವಿಗಳ ಬಗ್ಗೆ ರಹಸ್ಯ ಕಡತಗಳನ್ನು ಬಿಡುಗಡೆ ಮಾಡಲಿದೆ ಬ್ರಿಟನ್
ಏಲಿಯನ್( ಅನ್ಯ ಗ್ರಹ ಜೀವಿ) ಗಳಿವೆಯಾ? ಎಂಬ ಪ್ರಶ್ನೆ ಹಲವು ದಶಕಗಳಿಂದ ನಮ್ಮನ್ನು ಕಾಡುತ್ತಿದೆ. ಈ ಪ್ರಶ್ನೆಗೆ ಉತ್ತರ ಸಿಗಬಹುದಾದ ನಿರೀಕ್ಷೆ ಮೂಡಿಸಿದೆ ಬ್ರಿಟನ್ ಸರ್ಕಾರ ಕೈಗೊಂಡಿರುವ ನಿರ್ಧಾರ.

ನವದೆಹಲಿ: ಏಲಿಯನ್( ಅನ್ಯಗ್ರಹ ಜೀವಿ) ಗಳಿವೆಯಾ? ಎಂಬ ಪ್ರಶ್ನೆ ಹಲವು ದಶಕಗಳಿಂದ ನಮ್ಮನ್ನು ಕಾಡುತ್ತಿದೆ. ಈ ಪ್ರಶ್ನೆಗೆ ಉತ್ತರ ಸಿಗಬಹುದಾದ ನಿರೀಕ್ಷೆ ಮೂಡಿಸಿದೆ ಬ್ರಿಟನ್ ಸರ್ಕಾರ ಕೈಗೊಂಡಿರುವ ನಿರ್ಧಾರ.
ಮಾರ್ಚ್ ತಿಂಗಳಲ್ಲಿ ಬ್ರಿಟನ್ ಸರ್ಕಾರ ಅನ್ಯಗ್ರಹ ಜೀವಿಗಳ ಅಸ್ತಿತ್ವ, ಯುಎಫ್ಒಗೆ ಸಂಬಂಧಿಸಿದಂತೆ ಕೆಲವು ಪುರಾವೆಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಅನ್ಯಗ್ರಹ ಜೀವಿಗಳ ಬಗ್ಗೆ ಸುಮಾರು 18 ರಹಸ್ಯ ಕಡತಗಳು ಬಿಡುಗಡೆಯಾಗಲಿದೆ ಆದರೆ ಅವುಗಳನ್ನು ಸಾರ್ವಜನಿಕಗೊಳಿಸಲಾಗುವುದಿಲ್ಲ ಎಂದು ಬ್ರಿಟನ್ ಸರ್ಕಾರ ಹೇಳಿದೆ.
ಸಾರ್ವಜನಿಕಗೊಳಿಸದಿರುವುದಕ್ಕೆ ಸೂಕ್ಷ್ಮ ವಿಷಯಗಳ ಕಾರಣ ನೀಡಿರುವ ಬ್ರಿಟನ್ ಸರ್ಕಾರ, 18 ಕಡತಗಳ ಪೈಕಿ ಕನಿಷ್ಠ 2 ಕಡತಗಳು ಅತಿ ಸೂಕ್ಷ್ಮ ಮಾಹಿತಿಗಳನ್ನು ಒಳಗೊಂಡಿದೆ ಎಂದು ತಿಳಿಸಿದೆ. ಅನ್ಯಗ್ರಹ ಜೀವಿಗಳ ಬಗ್ಗೆ ಕಳೆದ 30 ವರ್ಷಗಳಿಂದ ವೈಜ್ಞಾನಿಕ ಸಂಶೋಧನೆ ನಡೆಸುತ್ತಿರುವುದಾಗಿ 2005 ರಲ್ಲಿ ಬ್ರಿಟನ್ ಸರ್ಕಾರ ಒಪ್ಪಿಕೊಂಡಿತ್ತು.
ಸರ್ಚ್ ಫಾರ್ ಎಕ್ಸ್ಟ್ರಾ ಟೆರೆಸ್ಟ್ರಿಯಲ್ ಇಂಟಲಿಜೆನ್ಸ್ ( ಎಸ್ ಇ ಟಿ ಐ) ಗೆ ಸಂಬಂಧಿಸಿದ ಮಾಹಿತಿಗಳು ಬ್ರಿಟನ್ ಸರ್ಕಾರ ಬಿಡುಗಡೆ ಮಾಡಲಿರುವ ಕಡತಗಳಲ್ಲಿದೆ ಎಂದು ನಿರೀಕ್ಷಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


