ರೆಡ್ ಸೀನಲ್ಲಿ ಹೊಸ ಪ್ರಕಾಶಮಾನ ಜೀವರಾಶಿ ಪತ್ತೆ
'ರೆಡ್ ಸೀ' ಸಮುದ್ರದಲ್ಲಿ ಜೀವಶಾಸ್ತ್ರಜ್ಞರ ಅಂತರಾಷ್ಟ್ರೀಯ ತಂಡವೊಂದು ಪ್ರಕಾಶಮಾನ ಜೀವಿಯ ಹೊಸ ಜೀವರಾಶಿಯನ್ನು ಪತ್ತೆ ಹಚ್ಚಿದೆ.

ಮಾಸ್ಕೋ: 'ರೆಡ್ ಸೀ' ಸಮುದ್ರದಲ್ಲಿ ಜೀವಶಾಸ್ತ್ರಜ್ಞರ ಅಂತರಾಷ್ಟ್ರೀಯ ತಂಡವೊಂದು ಪ್ರಕಾಶಮಾನ ಜೀವಿಯ ಹೊಸ ಜೀವರಾಶಿಯನ್ನು ಪತ್ತೆ ಹಚ್ಚಿದೆ.
ಒಂದೇ ರೀತಿಯ ದೇಹ ಹೊಂದಿರುವ ಈ ಜೀವಿಗಳಲ್ಲಿ ದೇಹದ ವಿವಿಧ ಭಾಗಗಳು ಪ್ರಕಾಶಿಸುವುದರ ಆಧಾರದ ಮೇಲೆ ಈ ಜೀವರಾಶಿಯ ವಿವಿಧ ಜೀವಿಗಳನ್ನು ಪ್ರತ್ಯೇಕಿಸಬಹುದಾಗಿ ಸಂಶೋಧಕರು ತಿಳಿಸಿದ್ದಾರೆ.
ರೆಡಿ ಸೀ ದಕ್ಷಿಣ ಭಾಗದ ಹವಳ ಬಂಡೆಗಳ ಜೀವ ವೈವಿಧ್ಯವನ್ನು ಸಂಶೋಧಿಸುವಾಗ ಜೀವಶಾಸ್ತ್ರಜ್ಞರು ಈ 'ಹೊಳೆಯುವ ಲಾಟೀನು' ಎಂದು ಹೆಸರಿಸಲಾಗಿರುವ ಜೀವಿಯನ್ನು ಪತ್ತೆ ಹಚ್ಚಿದ್ದಾರೆ.
ಇವುಗಳ ಹತ್ತಿರದ ಸಂಬಂಧದ ಜೀವಿಗಳು ತಿಳಿ ನೀರಿನಲ್ಲಿ ಏಕಾಂಗಿಯಾಗಿ ವಾಸಿಸಿದರೆ ನೂತನವಾಗಿ ಕಂಡುಹಿಡಿಯಲಾಗಿರುವ ಈ ರೆಡ್ ಸೀ ಜೀವಿಗಳು ವಸಾಹತನ್ನು ನಿರ್ಮಿಸಿ ಹಸಿರು ಬಣ್ಣದಿಂದ ಕಂಗೊಳಿಸುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ.
'ಪ್ಲಸ ಒನ್' ಜರ್ನಲ್ ನಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


