1 ಶತಕೋಟಿ ದಾಟಿದ ಫೇಸ್‌ಬುಕ್ ಒಡೆತನದ ವಾಟ್ಸ್ಆಪ್ ಬಳಕೆದಾರರು
ಪ್ರಸಿದ್ದ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಮಾಲೀಕತ್ವದ ಮೊಬೈಲ್ ಸಂದೇಶ ಸೇವೆ ನೀಡುವ ವಾಟ್ಸ್ಆಪ್ ಈಗ 1 ಶತಕೋಟಿ ಬಳಕೆದಾರರನ್ನು...

ನ್ಯೂಯಾರ್ಕ್: ಪ್ರಸಿದ್ದ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಮಾಲೀಕತ್ವದ ಮೊಬೈಲ್ ಸಂದೇಶ ಸೇವೆ ನೀಡುವ ವಾಟ್ಸ್ಆಪ್ ಈಗ 1 ಶತಕೋಟಿ ಬಳಕೆದಾರರನ್ನು ಹೊಂದಿದೆ ಎಂದು ಸಿಇಒ ಮಾರ್ಕ್ ಜುಗರ್ಬರ್ಗ್ ಮಂಗಳವಾರ ಪ್ರಕಟಿಸಿದರು.
ಪ್ರತಿದಿನ 4200 ಕೋಟಿ ಸಂದೇಶಗಳು ವಾಟ್ಸ್ಆಪ್ನಲ್ಲಿ ವಿನಿಮಯವಾಗುತ್ತಿದ್ದು, 100 ಕೋಟಿ ಜನರು ಈಗ ವಾಟ್ಸ್ ಆಪ್ನನ್ನು ಬಳಸುತ್ತಿದ್ದಾರೆ. ಶತಕೋಟಿ ಜನರನ್ನು ಸಂರ್ಪಸುವ ಕೆಲವೇ ಕೆಲವು ಸೇವೆಗಳಿವೆ. ಇಡೀ ಜಗತ್ತನ್ನು ಪರಸ್ಪರ ಸಂರ್ಪಸುವ ನಿಟ್ಟಿನಲ್ಲಿ ಇದು ಅತ್ಯಂತ ಮಹತ್ವದ ಮೈಲುಗಲ್ಲು ಎಂದು ಅವರು ಫೇಸ್‌ಬುಕ್ ನಲ್ಲಿ ಬರೆದಿದ್ದಾರೆ.
ಪ್ರತಿದಿನ ವಾಟ್ಸ್ ಆಪ್ನಲ್ಲಿ 160 ಕೋಟಿ ಫೋಟೋಗಳು ಮತ್ತು 2500 ಲಕ್ಷ ವಿಡಿಯೋಗಳು 53 ಭಾಷೆಗಳಲ್ಲಿ ವಿನಿಮಯಗೊಳ್ಳುತ್ತಿವೆ ಎಂದು ಮಾರ್ಕ್ ಜುಗರ್ಬರ್ಗ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


