ವಿಜ್ಞಾನ-ತಂತ್ರಜ್ಞಾನ

ಜಿಯೋನಿ ಪಯೋನಿರ್ ಪಿ7 ಹೊಸ ಮೊಬೈಲ್ ಬಿಡುಗಡೆ

ಮೊಬೈಲ್ ಉತ್ಪಾದನೆ ಮತ್ತು ವಿನ್ಯಾಸದಲ್ಲಿ ಜಾಗತಿಕ ಮಟ್ಟದ ನಾಯಕನಾಗಿರುವ ಜಿಯೋನಿ ಸಂಸ್ಥೆ ಭಾರತದಲ್ಲಿ ತನ್ನ ಹೊಸ ಮೊಬೈಲ್ ಪಯೋನಿರ್ ಪಿ7 ಬಿಡುಗಡೆ ಮಾಡಿದೆ.

ಜಿಯೋನಿ ಪಯೋನಿರ್ ಪಿ7 ಹೊಸ ಮೊಬೈಲ್ ಬಿಡುಗಡೆ
ಜಿಯೋನಿ ಪಿ7
Published On :

ಬೆಂಗಳೂರು: ಮೊಬೈಲ್ ಉತ್ಪಾದನೆ ಮತ್ತು ವಿನ್ಯಾಸದಲ್ಲಿ ಜಾಗತಿಕ ಮಟ್ಟದ ನಾಯಕನಾಗಿರುವ ಜಿಯೋನಿ ಸಂಸ್ಥೆ ಭಾರತದಲ್ಲಿ ತನ್ನ ನೂತನ ಮೊಬೈಲ್ ಪಯೋನಿರ್ ಪಿ7 ಬಿಡುಗಡೆ ಮಾಡಿದೆ.

5 ಇಂಚಿನ ಎಚ್‍ಡಿ ಎಪಿಎಸ್ ಡಿಸ್‍ಪ್ಲೇ 4GVoLTE ಮತ್ತು ಸಿಡಿಎಮ್‍ಎ ಸ್ಮಾರ್ಟ್ ಪೋನ್ ಆಗಿದ್ದು ಇದು ಗ್ರಾಹಕ ಬಜೆಟ್ ಸ್ನೇಹಿ ಎನಿಸಿಕೊಂಡಿದೆ.  

ಜಿಯೋನಿ ಪಿ7 1.3GHz  ಕ್ವಾಡ್ ಕೋರ್ ಪ್ರೋಸೆಸರ್, 2 ಜಿಬಿ ರಾಮ್ ಮತ್ತು 16 ಜಿಬಿ ಮೆಮೋರಿ (128 ಜಿಬಿ ಎಕ್ಸ್‍ಪಾಂಡೇಬಲ್), 5 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಜೊತೆಗೆ ಪ್ಲಾಶ್ ಕೂಡ ಇದ್ದು ಅಪರೂಪದ ಸೆಲ್ಫೀ ತೆಗೆಯುವ ಅವಕಾಶ ಈ ವೊಬೈಲ್ ನಿಮಗೆ ಒದಗಿಸುತ್ತದೆ. 8 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೊಂದಿದೆ.

2300 ಎಂಎಎಚ್ ಲಿ-ಐಯಾನ್ ಪಾಲಿಮರ್ ಬ್ಯಾಟರಿ ಹೊಂದಿದ್ದು, 259 ಗಂಟೆಗಳ ಸುಧೀರ್ಘ ಸ್ಟಾಂಡ್ ಬೈ ಬ್ಯಾಟರಿ ಇರುತ್ತದೆ. ಆ್ಯಂಡ್ರಾಯ್ಡ್ ಲಾಲಿಪಾಪ್ ವಿ6.0 (ಅಮಿಗೋ 3.2) ದಿನ ಆಯಾ ಕೆಲಸವನ್ನು ತಡರಹಿತ ಪ್ರದರ್ಶನದಿಂದ ಸಕ್ರಿಯಗೊಳಿಸುತ್ತದೆ.

ವೈಟ್, ಗೋಲ್ಡ್ ಮತ್ತು ಗ್ರೇ ಬಣ್ಣಗಳಲ್ಲಿ ಲಭ್ಯವಿದೆ. ಎಲ್ಲಾ ಥರದಲ್ಲೂ ಗ್ರಾಹಕ ಸ್ನೇಹಿ ಅನ್ನಿಸಿಕೊಂಡಿರುವ ಜಿಯೋನಿ ಪಿ7 ಮೊಬೈಲ್ ಬೆಲೆ ರೂ. 9,999. ಡಿಸೆಂಬರ್ 12 ರಿಂದ ಭಾರತದಾದ್ಯಂತ ಲಭ್ಯ.

ವೈಶಿಷ್ಟ್ಯಗಳು
•    ಸ್ಕ್ರೀನ್ ಟೈಪ್- 12.7 ಸೆಂ.ಮಿ (5.0) ಎಚ್ ಡಿ, ಐಪಿಎಸ್ ಸೋಡಾ ಕೆಪಾಸಿಟಿವ್
•    ಸಿಪಿಯು- 1.3 GHz  ಕ್ವಾಡ್ ಕೋರ್
•    ಮೆಮೋರಿ- 2 ಜಿಬಿ ರ್ಯಾಮ್ + 16 ಜಿಬಿ (128 ಜಿಬಿ ಎಕ್ಸ್‍ಪಾಂಡೇಬಲ್)
•    ಕ್ಯಾಮೆರಾ- 8 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಜೊತೆ ಎಲ್‍ಇಡಿ ಫ್ಲಾಶ್
•    ಫ್ರಂಟ್ ಕ್ಯಾಮೆರಾ- 5 ಮೆಗಾ ಪಿಕ್ಸೆಲ್( ಸ್ಕ್ರೀನ್ ಫ್ಲಾಶ್ )
•    ಬ್ಯಾಟರಿ- 2300 ಎಂಎಎಚ್ ಲಿ-ಐಯಾನ್ ಪಾಲಿಮರ್
•    ಓಎಸ್- ಆ್ಯಂಡ್ರಾಯ್ಡ್ ಲಾಲಿಪಾಪ್  ವಿ6.0 (ಅಮಿಗೋ 3.2)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.