ವಿಜ್ಞಾನ-ತಂತ್ರಜ್ಞಾನ

ಶೀಘ್ರದಲ್ಲೇ ಆ್ಯಪಲ್ ಎಲೆಕ್ಟ್ರಿಕ್ ಕಾರ್?

ಆ್ಯಪಲ್ ಎಲೆಕ್ಟ್ರಾನಿಕ್ ಗ್ಯಾಡ್ಜೆಟ್ ಮತ್ತು ಕಂಪ್ಯೂಟರ್‍ಗಳ ಸೀಮಿತ ಪರಿಧಿಯಿಂದ ಹೊರಬರುವ ಸುಳುಹು ನೀಡಿದೆ...

ಶೀಘ್ರದಲ್ಲೇ ಆ್ಯಪಲ್ ಎಲೆಕ್ಟ್ರಿಕ್ ಕಾರ್?
ಆ್ಯಪಲ್ ಎಲೆಕ್ಟ್ರಿಕ್ ಕಾರ್
Published On :
ಕ್ಯಾಲಿಫೋರ್ನಿಯ:  ಆ್ಯಪಲ್  ಎಲೆಕ್ಟ್ರಾನಿಕ್ ಗ್ಯಾಡ್ಜೆಟ್ ಮತ್ತು ಕಂಪ್ಯೂಟರ್‍ಗಳ ಸೀಮಿತ ಪರಿಧಿಯಿಂದ ಹೊರಬರುವ ಸುಳುಹು ನೀಡಿದೆ. ಶೀಘ್ರದಲ್ಲೇ  ಎಲೆಕ್ಟ್ರಿಕ್ ಕಾರ್ ಒಂದನ್ನು ಪರಿಚಯಿಸುವತ್ತ ದಾಪುಗಾಲು ಹಾಕಿರುವ ಆ್ಯಪಲ್ , ಈ ಯೋಜನೆಯನ್ನು ಚುರುಕುಗೊಳಿಸಿದೆ.
ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ ಈ ಸುದ್ದಿ ಪ್ರಕಟವಾಗಿದ್ದು, ಅದರ ಪ್ರಕಾರ ಟೈಟಾನ್ ಎಂಬ ಕೋಡ್‍ನೇಮ್ ನಲ್ಲಿ ಈ ಪ್ರಾಜೆಕ್ಟ್  ಪ್ರಾರಂಭವಾಗಿದೆ. 2019ರಲ್ಲಿ ಆ್ಯಪಲ್  ಕಾರ್ ಗಳು ರಸ್ತೆಗಿಳಿಯುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಆ್ಯಪಲ್  ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಗೂಗಲ್ ಸ್ವಯಂಚಾಲಿತ ಕಾರುಗಳನ್ನು ಹೊರತಂದಿರುವ ಬೆನ್ನಲ್ಲೇ ಆ್ಯಪಲ್ ಕಂಪನಿಯಿಂದಲೂ ಕಾರು ಬರುತ್ತಿರುವುದು ಕುತೂಹಲ ಮೂಡಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.