ಖಾತೆ ತೆರೆಯಲು ಅಪ್ರಾಪ್ತೆಗೆ ಅನುಮತಿ: ಫೇಸ್ ಬುಕ್ ಗೆ ದಂಡ ವಿಧಿಸಿದ ನ್ಯಾಯಾಲಯ
ಫೇಸ್ ಬುಕ್ ನಲ್ಲಿ ಖಾತೆ ತೆರೆಯಲು ಅಪ್ರಾಪ್ತೆಗೆ ಅನುಮತಿ ನೀಡಿದ್ದಕ್ಕೆ ಫೇಸ್ ಬುಕ್ ಗೆ ಲಂಡನ್ ನ ನ್ಯಾಯಾಲಯ ದಂಡ ವಿಧಿಸಿದೆ.

ಲಂಡನ್: ಫೇಸ್ ಬುಕ್ ನಲ್ಲಿ ಖಾತೆ ತೆರೆಯಲು ಅಪ್ರಾಪ್ತೆಗೆ ಅನುಮತಿ ನೀಡಿದ್ದಕ್ಕೆ ಫೇಸ್ ಬುಕ್ ಗೆ ಲಂಡನ್ ನ ನ್ಯಾಯಾಲಯ ದಂಡ ವಿಧಿಸಿದೆ.
ತನ್ನ ಮಗಳನ್ನು ಆನ್ ಲೈನ್ ನಲ್ಲಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದ ಅಪ್ರಾಪ್ತೆಯ ತಂದೆ, ಫೇಸ್ ಬುಕ್ ವಯಸ್ಸಿನ ನಿರ್ಬಂಧನೆಯ ನೀತಿಯನ್ನು ಪಾಲಿಸುತ್ತಿಲ್ಲ ಎಂದು ದೂರಿದ್ದಾರೆ.
ಉತ್ತರ ಐರ್ಲೆಂಡ್ ಅಪ್ರಾಪ್ತ ಯುವತಿಯೊಬ್ಬಳು ತನ್ನದೇ ಅಶ್ಲೀಲ ಚಿತ್ರಗಳನ್ನು ಫೇಸ್ ಬುಕ್ ನಲ್ಲಿ ಅಪ್ ಡೇಟ್ ಮಾಡುವುದಲ್ಲದೇ, ಹಲವು ಫೇಸ್ ಬುಕ್ ಖಾತೆಗಳನ್ನು ಉಪಯೋಗಿಸುತ್ತಿದ್ದಳು ಎಂದು ತಿಳಿದುಬಂದಿದೆ. ಪ್ರಕರಣ ಕೋರ್ಟ್ ಮೆಟ್ಟಿಲೇರಿದ ನಂತರ ಫೇಸ್ ಬುಕ್ ಸಂಸ್ಥೆ ಖಾತೆಗಳನ್ನು ತೆಗೆದುಹಾಕಿದೆ.
ತಪ್ಪು ವಯಸ್ಸಿನ ಮಾಹಿತಿ ನೀಡಿ ಫೇಸ್ ಬುಕ್ ಖಾತೆ ತೆರೆಯುವುದನ್ನು ತಡೆಗಟ್ಟಲು ಫೇಸ್ ಬುಕ್ ಬಳಿ ಯಾವುದೇ ವ್ಯವಸ್ಥೆಯಿಲ್ಲ ಎಂದು ದೂರುದಾರರ ಪರ ವಕೀಲರು ವಾದ ಮಂಡಿಸಿದ್ದಾರೆ. ಅಪ್ರಾಪ್ತರು ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆಯುವುದರಿಂದ ಲೈಂಗಿಕವಾಗಿ ದುರ್ಬಳಕೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದ್ದು ದಂಡ ಪಾವತಿ ಮಾಡಲು ಸೂಚಿಸಿದೆ.
ಫೇಸ್ ಬುಕ್, ಇನ್ ಸ್ಟಾಗ್ರಾಮ್, ಟಂಬ್ಲರ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆಯಲು ಕನಿಷ್ಠ 13 ವರ್ಷಗಳಾಗಿರಬೇಕು. ಅಪ್ರಾಪ್ತರು ಫೇಸ್ ಬುಕ್ ಖಾತೆ ತೆರೆದರೆ ಅದನ್ನು ಕೂಡಲೆ ತೆಗೆದುಹಾಕುವುದಾಗಿ ಫೇಸ್ ಬುಕ್ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


