ವಿಜ್ಞಾನ-ತಂತ್ರಜ್ಞಾನ

ಇನ್ನು ಮುಂದೆ ಡಿಜಿಟಲ್ ಓದುಗರ ಲೆಕ್ಕ: ಎಬಿಸಿ

ಪತ್ರಿಕೆಗಳ ಪ್ರಸರಣ ಸಂಖ್ಯೆ ವರದಿ ಪ್ರಕಟಿಸುತ್ತಿರುವ ಎಬಿಸಿ ಇನ್ನು ಮುಂದೆ ಡಿಜಿಟಲ್ ಓದುಗರ ಲೆಕ್ಕವನ್ನೂ ಬಿಡುಗಡೆ ಮಾಡಲಿದೆ...

ಇನ್ನು ಮುಂದೆ ಡಿಜಿಟಲ್ ಓದುಗರ ಲೆಕ್ಕ: ಎಬಿಸಿ
ಡಿಜಿಟಲ್ ಓದುಗರ ಲೆಕ್ಕ
Published On :

ನವದೆಹಲಿ: ಪತ್ರಿಕೆಗಳ ಪ್ರಸರಣ ಸಂಖ್ಯೆ ವರದಿ ಪ್ರಕಟಿಸುತ್ತಿರುವ ಎಬಿಸಿ ಇನ್ನು ಮುಂದೆ ಡಿಜಿಟಲ್ ಓದುಗರ ಲೆಕ್ಕವನ್ನೂ ಬಿಡುಗಡೆ ಮಾಡಲಿದೆ.

ಸುದ್ದಿ, ಜಾಹೀರಾತು ಮತ್ತಿತರ ಕ್ಷೇತ್ರಗಳ ವೆಬ್‌ಸೈಟ್‌ಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಇವುಗಳ ವೀಕ್ಷಕರ ಸಂಖ್ಯೆಯನ್ನು ಲೆಕ್ಕ ಹಾಕುವ ನಿಟ್ಟಿನಲ್ಲಿ ಎಬಿಸಿ ಮೊದಲ ಹೆಜ್ಜೆಯನ್ನಿಟ್ಟಿದೆ.  ಹಲವು ವರ್ಷಗಳ ಕಾಲ ಅನುಭವ ಹೊಂದಿರುವ ತಂತ್ರಜ್ಞಾನ ಪರಿಣತರೊಂದಿಗೆ ಒಪ್ಪಂದ ಮಾಡಿಕೊಂಡು ಪಾರದರ್ಶಕ ಹಾಗೂ ನಿಖರ ಅಂಕಿಅಂಶಗಳನ್ನು ಒದಗಿಸಲಾಗುವುದು ಎಂದು ಎಬಿಸಿ  ಮೂಲಗಳು ತಿಳಿಸಿವೆ.

ಯಾವುದೇ ವೈಬ್‌ಸೈಟ್, ಪೋರ್ಟಲ್‌ಗಳು ಎಬಿಸಿಯ ಸದಸ್ಯತ್ವ ಹೊಂದಬಹುದಾಗಿದೆ ಎಂದು ಎಬಿಸಿ ತಿಳಿಸಿದೆ. ತೀವ್ರ ಗತಿಯಲ್ಲಿ ಬೆಳೆಯುತ್ತಿರುವ ಅಂತರ್ಜಾಲ ಜಾಹೀರಾತು ಕ್ಷೇತ್ರಕ್ಕೆ ಎಬಿಸಿ  ಕ್ರಮ ಹೊಸ ಆಯಾಮ ನೀಡಲಿದೆ.ಜಾಹೀರಾತು ಕಂಪನಿಗಳಿಗೆ ಅನುಕೂಲವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.