ವಿಜ್ಞಾನ-ತಂತ್ರಜ್ಞಾನ

ದುಬೈನಿಂದ ಅಬುದಾಬಿಗೆ ತಲುಪಲು 14.9 ನಿಮಿಷ ಸಾಕು!

ದುಬೈನಿಂದ ಅಬುದಾಬಿಗೆ ತಲುಪಲು ಕೇವಲ 14.9 ನಿಮಿಷ ಸಾಕು. ಅದು ಸಾಧ್ಯವೆ? ಎಂದು ಅಚ್ಚರಿಪಡಬೇಡಿ. ಮುಂಬರುವ ವರುಷಗಳಲ್ಲಿ...

ದುಬೈನಿಂದ ಅಬುದಾಬಿಗೆ ತಲುಪಲು  14.9 ನಿಮಿಷ ಸಾಕು!
ಹೈಪರ್‌ಲೂಪ್ ಸಾರಿಗೆ ವ್ಯವಸ್ಥೆ
Published On :
ದುಬೈ: ದುಬೈನಿಂದ ಅಬುದಾಬಿಗೆ ತಲುಪಲು ಕೇವಲ 14.9 ನಿಮಿಷ ಸಾಕು. ಅದು ಸಾಧ್ಯವೆ? ಎಂದು ಅಚ್ಚರಿಪಡಬೇಡಿ. ಮುಂಬರುವ ವರುಷಗಳಲ್ಲಿ ಅಂದರೆ 2020ರ ವೇಳೆ ದುಬೈನಿಂದ ಅಬುದಾಬಿಗೆ ತಲುಪಲು 15 ನಿಮಿಷ ಕೂಡಾ ಬೇಡ.  ಹೈಪರ್‌ಲೂಪ್ ಸಾರಿಗೆ ವ್ಯವಸ್ಥೆಯ ಮೂಲಕ ಇದು ಸಾಧ್ಯ ಎಂದು ಎಕ್ಸ್ ಪ್ರೈಜ್ ಫೌಂಡೇಷನ್‌ನ  ಸ್ಥಾಪಕ ಪೀಟರ್ ಡಯಾಮಂಡಿಸ್ ಹೇಳಿದ್ದಾರೆ.
ಸೋಮವಾರ ದುಬೈಯ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ನಡೆದ ಸಿಇಒಗಳ ಸಭೆಯಲ್ಲಿ ಹೈಪರ್‌ಲೂಪ್ ಸಾರಿಗೆ ವ್ಯವಸ್ಥೆ ಯೋಜನೆಯ ಬಗ್ಗೆ ಚರ್ಚೆ ನಡೆದಿದೆ.
ಏನಿದು ಹೈಪರ್‌ಲೂಪ್ ಟೆಕ್ನಾಲಜಿ?
ಅತೀ ವೇಗದಲ್ಲಿ  ಸರಕು ಸಾಗಣೆ ಅಥವಾ ಪ್ರಯಾಣಕ್ಕಾಗಿ ಈ ಟೆಕ್ನಾಲಜಿಯನ್ನು ಬಳಸಲಾಗುತ್ತದೆ. ಅತೀ ವೇಗದ ಸಾರಿಗೆ ವ್ಯವಸ್ಥೆಯಾಗಿದೆ ಹೈಪರ್‌ಲೂಪ್ ಸಾರಿಗೆ. ಈ ಸಾರಿಗೆ ವ್ಯವಸ್ಥೆಯಲ್ಲಿ ಎರಡು ಪ್ರದೇಶಗಳ ನಡುವೆ ಉದ್ದವಾದ ಟ್ಯೂಬ್ ಒಂದನ್ನು ನಿರ್ಮಿಸಲಾಗುತ್ತದೆ. ಆ ಟ್ಯೂಬ್ ಮೂಲಕ ಅತೀ ವೇಗದಲ್ಲಿ ವಾಹನ ಸಂಚಾರ ವ್ಯವಸ್ಥೆ ಕಲ್ಪಿಸಲಾಗುತ್ತದೆ.  ಮುಂಬರುವ ಎರಡು ವರ್ಷಗಳಲ್ಲಿ ಈ ಬಗ್ಗೆ ಪ್ರಯೋಗ ನಡೆಯಲಿದ್ದು, 2020ರ ವೇಳೆಗೆ ಈ ಯೋಜನೆ ಪೂರ್ಣಗೊಳಿಸುವ ಇರಾದೆ ಇದೆ ಎಂದು ಪೀಟರ್ ಡಯಾಮಂಡಿಸ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.