ವೈಫೈಗೆ ಗುಡ್‌ಬೈ, ಬರುತ್ತಿದೆ ಲೈಫೈ
ವೈಫೈ ಬದಲು ಬೆಳಕಿನ ಸಹಾಯದಿಂದ ಡಾಟಾ ವರ್ಗಾವಣೆ ಮಾಡಲು ಸಾಧ್ಯವಾಗುವಂತೆ ಮಾಡುವ ಲೈಫೈ ಕನೆಕ್ಷನ್ ...

Published On :
ವೈಫೈ ಬದಲು ಬೆಳಕಿನ ಸಹಾಯದಿಂದ ಡಾಟಾ ವರ್ಗಾವಣೆ ಮಾಡಲು ಸಾಧ್ಯವಾಗುವಂತೆ ಮಾಡುವ ಲೈಫೈ ಕನೆಕ್ಷನ್ ಬರುತ್ತಿದೆ. ಈಗಾಗಲೇ ಲೈಫೈ ಬಗ್ಗೆ ಪ್ರಯೋಗಿಕ ಪರೀಕ್ಷೆಗಳು ನಡೆದು ಬಂದಿವೆ.
ವೈಫೈ ಸಂಪರ್ಕಕ್ಕೆ ಹೋಲಿಸಿದರೆ ಅದಕ್ಕಿಂತ 100 ಪಟ್ಟು ವೇಗದಲ್ಲಿ ಡಾಟಾ ವರ್ಗಾವಣೆ ಲೈಫೈ ಮೂಲಕ ಸಾಧ್ಯವಾಗಲಿದೆ. ಒಂದು ಸೆಕೆಂಡ್‌ನಲ್ಲಿ 1 ಗಿಗಾಬಿಟ್ (1Gbps)ವೇಗದಲ್ಲಿ ಡಾಟಾ ವರ್ಗಾವಣೆ ಮಾಡಲು ಲೈಫೈಯಿಂದ ಸಾಧ್ಯ!
ಲೈಫೈ ಸಂಪರ್ಕಕ್ಕೆ ಸಾಮಾನ್ಯ ಎಲ್‌ಇಡಿ ಬಲ್ಬ್‌ನಂತಿರುವ ಪ್ರಕಾಶದ ಮೂಲ (Source)ನಿಂದ ಒಂದು ಇಂಟರ್‌ನೆಟ್ ಕನೆಕ್ಷನ್ ಮತ್ತು ಒಂದು ಫೋಟೋ ಡಿಟೆಕ್ಟರ್- ಇವಿಷ್ಟೇ ಪರಿಕರಗಳು ಸಾಕು.
ಎಸ್ತೋನಿಯನ್ ರಾಜಧಾನಿ ಟಾಲಿನ್ ನಲ್ಲಿ ವೆಲ್ ಮಿನಿ ಎಂಬ ಕಂಪನಿ ಲೈಫೈಯನ್ನು ತಮ್ಮ ಕಂಪನಿಯಲ್ಲಿ ಅಳವಡಿಸಿ ಪ್ರಯೋಗ ನಡೆಸಿದೆ. ವಿಸಿಬಲ್ ಲೈಟ್ ಕಮ್ಯೂನಿಕೇಷನ್ (VLC) ಮೂಲಕ ಸಂಪರ್ಕ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿ ಸಂಭವಿಸಲಿದೆ ಎಂದು ವೆಲ್‌ಮಿನಿ ಹೇಳಿದೆ.
ಲೈಫೈ ಎನೇಬಲ್ ಮಾಡಿರುವ ಲೈಟ್ ಬಲ್ಬ್‌ನ ಸಹಾಯದಿಂದ 1 ಜಿಬಿಪಿಎಸ್ ಡಾಟಾ ವರ್ಗಾವಣೆ ಮಾಡುವ ಮೂಲಕ ವೆಲ್‌ಮಿನಿ ಈ ಪ್ರಯೋಗ ಮಾಡಿದೆ. ಇನ್ನು ಮೂರು ನಾಲ್ಕು ವರ್ಷಗಳಲ್ಲಿ ಈ ಸಂಪರ್ಕ ವ್ಯವಸ್ಥೆ ಜನರನ್ನು ತಲುಪಲಿದೆ ಎಂದು ವೆಲ್ ಮಿನಿ ಹೇಳಿದೆ.
2011 ರಲ್ಲಿ ಎಡಿನ್‌ಬರೋ ವಿಶ್ವ ವಿದ್ಯಾನಿಲಯದ ಪ್ರೊ.ಹೆರಾಲ್ಡ್ ಹಾಸ್ ಎಂಬವರು ಟೆಡ್ (TED - Technology, Entertainment and Design) ಒಂದರಲ್ಲಿ ಮಾತನಾಡಿ ಬೆಳಕಿನಿಂದ ಡಾಟಾ ವರ್ಗಾವಣೆ ಮಾಡುವ ಸಂಪರ್ಕದ ಬಗ್ಗೆ ಹೇಳಿದ್ದರು.
ರೇಡಿಯೋ ತರಂಗಗಳ ಬದಲು ಬೆಳಕಿನ ತರಂಗಗಳನ್ನು ಲೈಫೈ ನಲ್ಲಿ ಬಳಸಲಾಗುತ್ತದೆ. ಆದ್ದರಿಂದ ವಿಮಾನದ ಒಳಗೂ ಲೈಫೈ ಬಳಸಬಹುದು ಎಂಬುದು ಇದರ ಪ್ಲಸ್ ಪಾಯಿಂಟ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


