ನಾಲ್ಕು ತಾರಾಮಂಡಲ ಮಧ್ಯದಲ್ಲಿ ಬೃಹತ್ ಗ್ರಹ ಪತ್ತೆ
ಭೂಮಿಯಿಂದ 136 ಜ್ಯೋತಿರ್ವರ್ಷಗಳಷ್ಟು ದೂರದ ನಾಲ್ಕು ತಾರಾ ಮಂಡಲದ ಮಧ್ಯದಲ್ಲಿ ‘30 ಎರಿ’ ಎಂಬ ಬೃಹತ್ ಗ್ರಹ ಪತ್ತೆಯಾಗಿದೆ...

ವಾಷಿಂಗ್ಟನ್: ಭೂಮಿಯಿಂದ 136 ಜ್ಯೋತಿರ್ವರ್ಷಗಳಷ್ಟು ದೂರದ ನಾಲ್ಕು ತಾರಾ ಮಂಡಲದ ಮಧ್ಯದಲ್ಲಿ ‘30 ಎರಿ’ ಎಂಬ ಬೃಹತ್ ಗ್ರಹ ಪತ್ತೆಯಾಗಿದೆ.
ನಾಲ್ಕು ತಾರಾಮಂಡಲ ವ್ಯೂಹದಲ್ಲಿ ಪರಿಭ್ರಮಿಸುತ್ತಿರುವ ‘30 ಎರಿ’ ಎಂಬ ಬೃಹತ್ ಗ್ರಹವನ್ನು ಖಗೋಳ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
4 ತಾರ ವ್ಯೂಹವನ್ನೊಳಗೊಂಡ ಗ್ರಹ ಪತ್ತೆಯಾಗಿರುವ ಎರಡನೇ ಪ್ರಕರಣ ಇದಾಗಿದೆ. ಭಾರತದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ದೂರದರ್ಶಕ ಉಪಯೋಗಿಸಿ ಖಗೋಳ ವಿಜ್ಞಾನಿಗಳು ಈ ಗ್ರಹವನ್ನು ಪತ್ತೆಹಚ್ಚಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸ್ಯಾಂಡಿಯಾಗೊದ ಪಾಲೋಮರ್ ವೀಕ್ಷಣಾಲಯದಲ್ಲಿ ಈ ಅಧ್ಯಯನ ನಡೆಸಲಾಗಿದ್ದು, ಇದಕ್ಕಾಗಿ ಪುಣೆ ಹಾಗೂ ಕ್ಯಾಲಿಫೋರ್ನಿಯಾದ ಖಗೋಳ ವಿಜ್ಞಾನ ವಿಶ್ವವಿದ್ಯಾಲಯದ ದೃಗ್ ವಿಜ್ಞಾನ ಉಪಕರಣ ಮತ್ತು ನಾಸಾದ ‘ಪಾಲ್ಮ್ 3000’ ಉಪಕರಣಗಳನ್ನು ಬಳಸಿಕೊಳ್ಳಲಾಗಿದೆ.
ಈ ಗ್ರಹ ಇರುವುದು ಮುಂಚೆಯೇ ಗೊತ್ತಿತ್ತು. ಆದರೆ ಅದು ಮೂರು ತಾರೆಗಳ ವ್ಯೂಹದಲ್ಲಿಸುತ್ತುತ್ತಿದೆ ಎಂದು ಇದುವರೆಗೆ ಭಾವಿಸಲಾಗಿತ್ತು. ಇದೀಗ ಈ ಗ್ರಹ ನಾಲ್ಕು ತಾರೆಗಳ ವ್ಯೂಹದಲ್ಲಿ ಬಂಧಿಯಾಗಿರುವುದು ದೃಢಪಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


