ವಿಶ್ವದ ಆನ್ ಲೈನ್ ಜನಸಂಖ್ಯೆಯ ಅರ್ಧದಷ್ಟು ಜನರಿಂದ ಫೇಸ್ ಬುಕ್ ಬಳಕೆ
ವಿಶ್ವದ ಆನ್ ಲೈನ್ ಜನಸಂಖ್ಯೆಯ ಅರ್ಧದಷ್ಟು ಜನ ಕನಿಷ್ಠ ತಿಂಗಳಿಗೊಮ್ಮೆಯಾದರೂ ಫೇಸ್ ಬುಕ್ ಗೆ ಲಾಗ್ ಆನ್ ಮಾಡುತ್ತಾರೆ ಎಂದು ಖ್ಯಾತ ಸಾಮಾಜಿಕ ಜಾಲತಾಣ ಹೇಳಿದೆ.

ವಾಷಿಂಗ್ ಟನ್: ವಿಶ್ವದ ಆನ್ ಲೈನ್ ಜನಸಂಖ್ಯೆಯ ಅರ್ಧದಷ್ಟು ಜನ ಕನಿಷ್ಠ ತಿಂಗಳಿಗೊಮ್ಮೆಯಾದರೂ ಫೇಸ್ ಬುಕ್ ಗೆ ಲಾಗ್ ಆನ್ ಮಾಡುತ್ತಾರೆ ಎಂದು ಖ್ಯಾತ ಸಾಮಾಜಿಕ ಜಾಲತಾಣ ಹೇಳಿದೆ.
ಫೇಸ್ ಬುಕ್ ನೀಡಿರುವ ಅಂಕಿಅಂಶದ ಪ್ರಕಾರ, ತಿಂಗಳಿಗೊಮ್ಮೆಯಾದರೂ ಫೇಸ್ ಬುಕ್ ಬಳಕೆ ಮಾಡುವವರ ಸಂಖ್ಯೆ ಕಳೆದ ಮೂರು ತಿಂಗಳಲ್ಲಿ ಹೆಚ್ಚಾಗಿದೆಯಂತೆ. ಈ ವರ್ಷದ ಜೂನ್ ಅಂತ್ಯದವರೆಗೆ ಬಳಕೆದಾರರ ಸಂಖ್ಯೆ ಶೇ.13 ರಷ್ಟು ಹೆಚ್ಚಾಗಿದೆ. ಫೇಸ್ ಬುಕ್ ಬಳಕೆ ಮಾಡುವವರ ಸಂಖ್ಯೆ, ಜಾಗತಿಕ ಮಟ್ಟದಲ್ಲಿ ಇಂಟರ್ ನೆಟ್ ಬಳಕೆ ಮಾಡುವವರ ಒಟ್ಟಾರೆ ಸಂಖ್ಯೆಯ ಅರ್ಧದಷ್ಟಾಗಿದೆ ಎಂದು ಫೆಸ್ ಬುಕ್ ಹೇಳಿದೆ. ಅಂದರೆ ಜಗತ್ತಿನಾದ್ಯಂತ ಮೂರು ಬಿಲಿಯನ್ ಜನರು ಅಂತರ್ಜಾಲವನ್ನು ಬಳಕೆ ಮಾಡುತ್ತಿದ್ದು ಇದರ ಅರ್ಧದಷ್ಟು ಜನರು(1 .49 ) ಬಿಲಿಯನ್ ಜನರು ಫೇಸ್ ಬುಕ್ ಖಾತೆ ಹೊಂದಿದ್ದಾರೆ.
ಪ್ರತಿ ಐದು ನಿಮಿಷದಲ್ಲಿ ಒಂದು ನಿಮಿಷ ಜನರು ತಮ್ಮ ಸ್ಮಾರ್ಟ್ ಫೋನ್ ನಲ್ಲಿ ಫೇಸ್ ಬುಕ್ ಬಳಕೆ ಮಾಡುತ್ತಾರೆ ಎಂದು ಬಿಬಿಸಿ ವರದಿ ಮಾಡಿದೆ. ತಿಂಗಳಲ್ಲಿ ಒಂದು ಬಾರಿ ಮೊಬೈಲ್ ಮೂಲಕವೇ ಫೇಸ್ ಬುಕ್ ಗೆ ಲಾಗ್ ಆನ್ ಆಗುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಬಿಬಿಸಿ ವರದಿ ತಿಳಿಸಿದೆ. ಬಳಕೆದಾರರು ಹೆಚ್ಚಿರುವುದರಿಂದ ಕಂಪನಿಯ ಎರಡನೇ ತ್ರೈಮಾಸಿಕದ ಆದಾಯ ಏರಿಕೆಯಾಗಿದೆ. ಫೇಸ್ ಬುಕ್ ಗೆ ಜಾಹಿರಾತಿನಿಂದ ಆದಾಯಯೂ ಏರಿಕೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


