ಸಾಮಾಜಿಕ ಜಾಲತಾಣವಿದ್ದರೂ ಯುವಜನತೆ ಹೆಚ್ಚು ಬಳಸುವುದು ಇ-ಮೇಲ್ ನ್ನೇ!
ಪರಸ್ಪರ ಸಂಪರ್ಕದಲ್ಲಿರುವುದಕ್ಕೆ ಸಾಮಾಜಿಕ ಜಾಲತಾಣಗಳಿದ್ದರೂ ಯುವಜನತೆ ಇ-ಮೇಲ್ ಕಳಿಸುವ ಅಭ್ಯಾಸವನ್ನು ಮುಂದುವರೆಸಿದ್ದಾರೆ ಎಂದು ಸಂಶೋಧನೆಯೊಂದು ತಿಳಿಸಿದೆ.

ವಾಷಿಂಗ್ ಟನ್ ಪರಸ್ಪರ ಸಂಪರ್ಕದಲ್ಲಿರುವುದಕ್ಕೆ ಸಾಮಾಜಿಕ ಜಾಲತಾಣಗಳಿದ್ದರೂ ಯುವಜನತೆ ಇ-ಮೇಲ್ ಕಳಿಸುವ ಅಭ್ಯಾಸವನ್ನು ಮುಂದುವರೆಸಿದ್ದಾರೆ ಎಂದು ಸಂಶೋಧನೆಯೊಂದು ತಿಳಿಸಿದೆ.
ಜಾಗತಿಕ ಸಾಫ್ಟ್ ವೇರ್ ಕಂಪನಿ ಅಡೋಬ್ ಪ್ರಚಾರ ತಂಡದ ಸಂಶೋಧನೆ ಪ್ರಕಾರ, 1980 ರ ನಂತರ ಹುಟ್ಟಿದ ಜನರು ಬೇರೆಯವರಿಗಿಂತಲೂ ಹೆಚ್ಚು ಇ-ಮೇಲ್ ಬಳಸುತ್ತಾರಂತೆ. ಈ ಪೈಕಿ ಅತಿ ಹೆಚ್ಚು ಜನ ಕಚೇರಿ ಅವಧಿಯ ನಂತರವೂ ಇ-ಮೇಲ್ ಪರಿಶೀಲಿಸುತ್ತಾರೆ. ಮೂರನೇ ಒಂದು ಭಾಗದ ಜನರು ಮ್ಯಾನೇಜರ್ ಅಥವಾ ಹಿರಿಯ ಕಾರ್ಯನಿರ್ವಾಹಕರೊಂದಿಗೆ ಮಾತನಾಡಲು ಇ-ಮೇಲ್ ಹೆಚ್ಚು ಅನುಕೂಲಕರ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಅಡೋಬ್ ನ ಇ-ಮೇಲ್ ವಿಭಾಗದ ನಿರ್ದೇಶಕ ಕ್ರಿಸ್ಟಿನ್ ನರಗಾನ್ ಹೇಳಿದ್ದಾರೆ.
ಇಮೇಲ್ ಬಳಕೆ ಬಗ್ಗೆ 18 ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ 400 ಯುಎಸ್ ಮೂಲದ ಉದ್ಯೋಗಿಗಳನ್ನು ಸಂದರ್ಶನ ನಡೆಸಲಾಗಿದೆ. ಈ ಪೈಕಿ ಅತಿ ಹೆಚ್ಚು ಜನರು ತಾವು ಸಾಮಾಜಿಕ ಜಾಲತಾಣಗಳಿದ್ದರೂ ಹೆಚ್ಚು ಇ-ಮೇಲ್ ಬಳಸುವುದಾಗಿ ತಿಳಿಸಿದ್ದಾರೆ.
ಪ್ರತಿ ವ್ಯಕ್ತಿಯೂ ದಿನದಲ್ಲಿ 6 ಗಂಟೆ, ವಾರಕ್ಕೆ 30 ಗಂಟೆಗಳ ಕಾಲ ಇ-ಮೇಲ್ ಬಳಕೆ ಮಾಡುತ್ತಾನೆ ಎಂದು ಅಧ್ಯಯನ ವರದಿ ತಿಳಿಸಿದೆ. 10 ಜನರಲ್ಲಿ ಒಬ್ಬ ಕಚೇರಿಯ ಇ ಮೇಲ್ ನ್ನು ಮನೆಯಲ್ಲಿ ಹಾಗೂ ಖಾಸಗಿ ಇ ಮೇಲ್ ಗಳನ್ನು ಕಚೇರಿಯಲ್ಲಿ ನೋಡುತ್ತಾನಂತೆ. ಈ ಪೈಕಿ 8 ನೇ ಒಂದು ಭಾಗದಷ್ಟು ಜನರು ಒಂದಕ್ಕಿಂತ ಹೆಚ್ಚು ಇ ಮೇಲ್ ಗಳನ್ನು ಬಳಕೆ ಮಾಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


