ಎಂಐಟಿ ಪಟ್ಟಿಯಲ್ಲಿ ಭಾರತೀಯರು
ಸಾಧನವೊಂದು ವಿದ್ಯುತ್ ಉಳಿಸುವುದರೊಂದಿಗೆ ತಾಪವನ್ನು ಹೊರಹಾಕಿ ತಂಪು ಮಾಡುತ್ತದೆ. ಈ ಸಾಧನವನ್ನು ಅತಿ ಕಡಿಮೆ ವಿದ್ಯುತ್ ಬಳಕೆ...

ಬೆಂಗಳೂರು: ಸಾಧನವೊಂದು ವಿದ್ಯುತ್ ಉಳಿಸುವುದರೊಂದಿಗೆ ತಾಪವನ್ನು ಹೊರಹಾಕಿ ತಂಪು ಮಾಡುತ್ತದೆ. ಈ ಸಾಧನವನ್ನು ಅತಿ ಕಡಿಮೆ ವಿದ್ಯುತ್ ಬಳಕೆಯೊಂದಿಗೆ ಹವಾನಿಯಂತ್ರಣಕ್ಕೂ ಬಳಸಬಹುದು. ಅಲ್ಟ್ರಾಸೋನಿಕ್ ಬಳಸಿಕೊಂಡು ಅಂಧರಿಗೆ ಎದುರಾಗುವ ಅಡೆತಡೆಗಳ ನ್ನು ಎಚ್ಚರಿಸುವ ಸಾಧನ, ಅನಕ್ಷರಸ್ಥರು ಫೋನ್‍ನಲ್ಲಿ ಮಾತನಾಡುವಮೂಲಕ ಆನ್‍ಲೈನ್ ಸೇವೆಗಳನ್ನು ಬಳಕೆ ಮಾಡಬಹುದಾದ ತಂತ್ರಜ್ಞಾನ, ನಿರಂತರವಾದ ವಿದ್ಯುತ್ ಅಗತ್ಯವಿಲ್ಲದೆ ಕಡಿಮೆ ದರದಲ್ಲಿ ಮಗುವನ್ನುಬೆಚ್ಚಗಿಡುವ ಸಾಧನ. ಈ ನಾಲ್ಕು ಸಾಧನಗಳನ್ನು ಅಭಿವೃದ್ಧಿ ಮಾಡಿರುವುದು ಭಾರತದ ಯುವ ತಂತ್ರಜ್ಞಾ ನಿಗಳು. ಅಶ್ವತ್ಥ್ ರಾಮನ್ ತಂಪಾಗಿಸುವಸಾಧನ ಅಭಿವೃದ್ಧಿ ಪಡಿಸಿದ್ದರೆ, ರೋಷನ್ ಪಾಲ್ ಅಂಧರಿಗೆ ಅಪಾಯಗಳಕುರಿತು ಎಚ್ಚರಿಕೆ ನೀಡುವ ಸಾಧನ ಅಭಿವೃದ್ಧಿಪಡಿಸಿದ್ದಾರೆ. ಸೌರಭ್ ಶ್ರಿವಾತ್ಸವ ಫೋನ್ ಮೂಲಕ ಆನ್‍ಲೈನ್ ಸೇವೆಗಳ ಬಳಕೆ ತಂತ್ರಜ್ಞಾನ ಮತ್ತು ರಾಹುಲ್ ಅಲೆಕ್ಸ್ ಪಣಿಕ್ಕರ್ ಮಕ್ಕಳನ್ನು ಬೆಚ್ಚಗಿಡುವ ಸಾಧನ ಅಭಿವೃದ್ಧಿಪಡಿಸಿದ್ದಾರೆ. ಈ ನಾಲ್ವರು ತಮ್ಮ ಸಾಧನೆಯಿಂದಾಗಿ ಮೆಸಾಚುಸೆಟ್ಸ್ ಇನ್ಸ್ ಟ್ಯೂಟ್ ಆಫ್ ಟೆಕ್ನಾಲಜಿ -35ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದವರ್ಷ ಭಾರತದ ತನುಜಾ ಗಾನು, ಮನುಪ್ರಕಾಶ್ ಮತ್ತು ಶ್ಯಾಮ್ ಗೊಲ್ಲಕೋಟ ಈ ಪಟ್ಟಿಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


