ನೆಟ್ ನೀತಿ: ಸಲಹಾ ಅವಧಿ ವಿಸ್ತರಣೆ
ಅಂತರ್ಜಾಲ ತಟಸ್ಥ ನೀತಿ (ನೆಟ್ ನ್ಯೂಟ್ರಾಲಿಟಿ) ಗೆ ಸಂಬಂಧಿಸಿ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿರುವ ಕೇಂದ್ರ ಸರ್ಕಾರ...

ನವದೆಹಲಿ: ಅಂತರ್ಜಾಲ ತಟಸ್ಥ ನೀತಿ (ನೆಟ್ ನ್ಯೂಟ್ರಾಲಿಟಿ) ಗೆ ಸಂಬಂಧಿಸಿ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿರುವ ಕೇಂದ್ರ ಸರ್ಕಾರ ಈ ಗಡುವನ್ನು ಆ.20ರವರೆಗೆ ವಿಸ್ತರಿಸಿದೆ. ನೀತಿಯ ಕುರಿತ ಸಾರ್ವಜನಿಕ ಸಲಹೆಗಳು ದಿಢೀರ್ ಏರಿಕೆ ಕಂಡ ಹಿನ್ನೆಲೆಯಲ್ಲಿ ಈ ಹಿಂದೆ ನಿಗದಿಯಾಗಿದ್ದ ಆ.14ರ ಗಡುವನ್ನು ವಿಸ್ತರಿಸಿ ಸರ್ಕಾರ, 6ದಿನಗಳ ಹೆಚ್ಚುವರಿ ಕಾಲಾವಕಾಶ ನೀಡಿದೆ. ಅಂತರ್ಜಾಲ ತಟಸ್ಥ ನೀತಿ ರೂಪಿಸುವ ನಿಟ್ಟಿನಲ್ಲಿ ನೇಮಕವಾಗಿದ್ದ ಸಮಿತಿ ಸಲಹೆಗಳಿಗೆ ಸರ್ಕಾರದ ಚರ್ಚಾ ಫೋರಂ MyGov.in ಮೂಲಕ ಸಾರ್ವಜನಿಕ ಪ್ರತಿಕ್ರಿಯೆಗೆ ಅವಕಾಶ ಕಲ್ಪಿಸಿತ್ತು. ಆ.14ರಂದು 700 ಪ್ರತಿಕ್ರಿಯೆ ಪಡೆದಿದ್ದ ಫೋರಂ, ಕೆಲವು ಆನ್‍ಲೈನ್ ಗ್ರೂಪ್ ಗಳ ಆಂದೋಲನದ ಪರಿಣಾಮ ಶನಿವಾರ ದಿಡಿsೀರನೆ 33,600 ಪ್ರತಿಕ್ರಿಯೆ ಪಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


