ದೇಶದಾದ್ಯಂತ ೪-ಜಿ ಸೇವೆ ಉದ್ಘಾಟಿಸಲಿರುವ ಏರ್ಟೆಲ್
ಕೆಲವು ನಗರಗಳಲ್ಲಿ ಪರೀಕ್ಷಿಸಿದ ನಂತರ ಈಗ ದೇಶದಾದ್ಯಂತ ೨೯೬ ಪಟ್ಟಣಗಳಲ್ಲಿ ವಾಣಿಜ್ಯಾತ್ಮಕವಾಗಿ ೪-ಜಿ ಸೇವಗಳನ್ನು ಅನಾವರಣ ಮಾಡುವುದಾಗಿ ಭಾರತಿ

ನವದೆಹಲಿ: ಕೆಲವು ನಗರಗಳಲ್ಲಿ ಪರೀಕ್ಷಿಸಿದ ನಂತರ ಈಗ ದೇಶದಾದ್ಯಂತ ೨೯೬ ಪಟ್ಟಣಗಳಲ್ಲಿ ವಾಣಿಜ್ಯಾತ್ಮಕವಾಗಿ ೪-ಜಿ ಸೇವಗಳನ್ನು ಅನಾವರಣ ಮಾಡುವುದಾಗಿ ಭಾರತಿ ಏರ್ಟೆಲ್ ಸಂಸ್ಥೆ ತಿಳಿಸಿದೆ.
ಇದಕ್ಕೂ ಮೊದಲು ಏಪ್ರಿಲ್ ೨೦೧೨ರಲ್ಲಿ ಕೋಲ್ಕತ್ತಾದಲ್ಲಿ ಪ್ರಯೋಗಾತ್ಮಕವಾಗಿ ೪-ಜಿ ಸೇವೆಗಳನ್ನು ಪ್ರಾರಂಭಿಸಿತ್ತು.
"ಈಗ ರಾಷ್ಟ್ರದಾದ್ಯಂತ ನಮ್ಮ ಗ್ರಾಹಕರು ಅತಿ ವೇಗದ ವೈರ್ ರಹಿತ ಬ್ರಾಡ್ ಬ್ಯಾಂಡ್ ಸೇವೆಯನ್ನು ಏರ್ಟೆಲ್ ೪-ಜಿ ಮೂಲಕ ಪಡೆದುಕೊಳ್ಳಬಹುದಾಗಿದೆ. ಎಚ್ ಡಿ ವಿಡಿಯೋ ಸ್ಟ್ರೀಮಿಂಗ್ ಅನ್ನು ತಡೆರಹಿತವಾಗಿ ಅನುಭವಿಸಬಹುದಾಗಿದೆ ಹಾಗು ಸಿನೆಮಾಗಳನ್ನು ವೇಗವಾಗಿ ಡೌನ್ ಲೋಡ್, ಅಪ್ ಲೋಡ್ ಮಾಡಬಹುದಾಗಿದೆ.
"ಈ ಸೇವೆ ಸ್ಮಾರ್ಟ್ ಫೋನುಗಳಲ್ಲಿ, ಡಾಂಗಲ್ ಗಳ ಮೂಲಕ ಹಾಗು ವೈ ಫೈ ೪-ಜಿ ಹಾಟ್ ಸ್ಪಾಟ್ ಗಳಲ್ಲಿ ಲಭ್ಯವಿದೆ" ಎಂದು ಏರ್ಟೆಲ್ ಹೇಳಿಕೆಯಲ್ಲಿ ತಿಳಿಸಿದೆ.
ಈಗ ೩ಜಿ ಸೇವಗಳನ್ನು ಹೊಂದಿರುವ ಗ್ರಾಹಕರು ಅದೇ ಬೆಲೆಯಲ್ಲಿ ೪ಜಿ ಸೇವಗಳನ್ನು ಪಡೆಯಬಹುದಾಗಿದೆ ಎಂದು ಏರ್ಟೆಲ್ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


