ಮಂಗಳನ ಅಂಗಳದಲ್ಲಿ ರಂಧ್ರ ಕೊರೆದ ರೋವರ್ ಕ್ಯೂರಿಯಾಸಿಟಿ
ಮಂಗಳ ಗ್ರಹ ತಣ್ಣಗೆ ಮತ್ತು ಒಣಗಿ...

ವಾಷಿಂಗ್ಟನ್: ಮಂಗಳ ಗ್ರಹ ತಣ್ಣಗೆ ಮತ್ತು ಒಣಗಿ ಹೋಗಿದ್ದು ಹೇಗೆ ಎಂಬುದನ್ನು ಕಂಡುಹಿಡಿಯುವ ಪ್ರಯತ್ನದಲ್ಲಿರುವ ನಾಸಾದ ಮಾರ್ಸ್ ರೋವರ್ ಕ್ಯೂರಿಯಾಸಿಟಿ, ಅಲ್ಲಿನ ಮೌಂಟ್ ಶಾರ್ಪ್ ಪರ್ವತ ಪ್ರದೇಶದಲ್ಲಿ ತನ್ನ ಮೊದಲ ರಂಧ್ರ ಕೊರೆದಿದೆ.
ಕ್ಯೂರಿಯಾಸಿಟಿ ಕಳೆದ ವಾರ 2.6 ಇಂಚು ಅಗಲದ ರಂಧ್ರ ಕೊರೆದು ಅಲ್ಲಿನ ಕಲ್ಲಿನ ಪುಡಿಗಳ ಮಾದರಿಯನ್ನು ಸಂಗ್ರಹಿಸಿದೆ ಎಂದು ನಾಸಾ ಹೇಳಿಕೆ ತಿಳಿಸಿದೆ. ಇದುವರಗೆ ನಾಸಾದ ಜೆಟ್ ಪ್ರೊಪಲ್ಶನ್ ಲ್ಯಾಬೊರೇಟರಿ (ಜೆಪಿಎಲ್), ಪಸಡೇನ, ಕ್ಯಾಲಿಫೋರ್ನಿಯಾಗೆ ದೊರಕಿರುವ ಮಾಹಿತಿ ಮತ್ತು ಚಿತ್ರಗಳ ಆಧಾರದ ಮೇಲೆ ಈ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ನಾಸಾ ದೃಢಪಡಿಸಿದೆ.
ಇದುವರಗೆ ನಮಗೆ ಸಿಕ್ಕಿರುವ ಮಾಹಿತಿಗಳ ಪ್ರಕಾರ ಮೌಂಟ್ ಶಾರ್ಪ್ ಇದೆ ಎಂಬುದನ್ನು ನಾವು ನಂಬಬಹುದು. ಹಾಗು ಈ ಪರ್ವತ ರೂಪುಗೊಂಡಂದಿನ ವಾತಾವರಣ ಮತ್ತು ಅದರ ಬೆಳವಣಿಗೆಗೆ ಕಾರಣಗಳನ್ನು ಹುಡುಕುವತ್ತ ಕ್ಯೂರಿಯಾಸಿಟಿ ಮುನ್ನಡೆಯಲಿದೆ ಎಂದು ಜೆಪಿಎಲ್ ನ ಉಪ ಯೋಜನಾ ವಿಜ್ಞಾನಿ ಅಶ್ವಿನ್ ವಸವಾಡ ಹೇಳಿದ್ದಾರೆ.
ಈ ಬಾರಿ ಪರ್ವತದ ಕೆಳಭಾಗದ ಪ್ರದೇಶದಲ್ಲಿ ರಂಧ್ರ ಕೊರೆದಿದ್ದು, ಇನ್ಮುಂದೆ ಈ ಪರ್ವತದ ಎತ್ತರದ ಪ್ರದೇಶಗಳು ಮತ್ತು ಅಕ್ಕಪಕ್ಕದ ಬೆಟ್ಟಗುಡ್ಡಗಳಲ್ಲಿ ತಪಾಸಣೆ ಮುಂದುವರಿಸುತ್ತೇವೆ ಎಂದು ವಸವಾಡ ತಿಳಿಸಿದ್ದಾರೆ.
ಈ ಮುಂಚೆ ಚಪ್ಪಟೆ ಕಲ್ಲನ್ನು ಸ್ವಚ್ಛಗೊಳಿಸಿ, ನಂತರ ಅದನ್ನು ಕುಟ್ಟಿ ಪುಡಿ ಮಾಡಿದ್ದ ಚಿತ್ರವನ್ನು ರವಾನಿಸಿದ್ದ ರೋವರ್ ಇದೀಗ, ರಂಧ್ರ ಕೊರೆಯುವಲ್ಲಿ ಯಶಸ್ವಿಯಾಗಿದೆ ಎಂದು ನಾನಾ ತಿಳಿಸಿದೆ.
ಕೃಪೆ: ಐಎಎನ್ಎಸ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


