ಶೀಘ್ರದಲ್ಲೇ ಹಾರಾಡಲಿದೆ ಕಿಟಕಿ ಇಲ್ಲದ ಪಾರದರ್ಶಕ ವಿಮಾನ
ಕೂತಲ್ಲೇ ಬಾನಂಗಳದ ಹೊರಗೆ...

ಲಂಡನ್: ಕೂತಲ್ಲೇ ಬಾನಂಗಳದ ಹೊರಗೆ ಏನಾಗುತ್ತಿದೆ ಎಂಬ ದೃಶ್ಯವನ್ನು ವಿಮಾನ ಪ್ರಯಾಣಿಕರು ಇನ್ನು ಮುಂದೆ ಕಾಣಬಹುದು.
ಹೌದು. ಇಂತಹ ವಿಮಾನವನ್ನು ಬ್ರಿಟಿಷರು ಅಭಿವೃದ್ಧಿಗೊಳಿಸಿದ್ದಾರೆ. ಕಿಟಕಿ ರಹಿತ ವಿಮಾನವನ್ನು ಬ್ರಿಟಿಷರು ಅಭಿವೃದ್ಧಿಗೊಳಿಸಿದ್ದು, ವಿಮಾನ ಪೂರ್ಣ ಪಾರದರ್ಶಕತೆಯಿಂದ ಕೂಡಿದೆ.
ಅಂತೂ ಪ್ರಯಾಣಿಕರಿಗಾಗಿಯೇ ಇಂತಹ ವಿಮಾನವನ್ನು ಅಭಿವೃದ್ಧಿಗೊಳಿಸಿದಂತಿದೆ. ಈ ನೂತನ ವಿಮಾನವು ಕಿಟಕಿಯ ಬದಲು ಪಾರದರ್ಶಕ ಪರದೆ ಹೊಂದಿದೆ.
ಈ ವಿಮಾನವನ್ನು ಸೆಂಟರ್ ಫಾರ್ ಪ್ರೋಸೆಸ್ ಇನ್ನೋವೇಶನ್‌ನ ಬ್ರಿಟಿಷ್ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳು ಅಭಿವೃದ್ಧಿಗೊಳಿಸಿದ್ದು, " ದಿ ವಿಂಡೋಲೆಸ್ ಕ್ಯಾಬಿನ್ ವಿತ್ ಎ ವೀವ್" ಎಂದು ಹೆಸರಿಟ್ಟಿದ್ದಾರೆ.
ಈ ವಿಮಾನವು ಹೈ ಡೆಫಿನೀಷನ್ ಡಿಸ್‌ಪ್ಲೇ ಟೆಕ್ನಾಲಜಿಯನ್ನು ಹೊಂದಿದ್ದು, ವಿಶ್ವದಲ್ಲೆ ಪ್ರಪ್ರಥಮ ಪಾರದರ್ಶಕ ವಿಮಾನ ಇದಾಗಿದೆ.
ಅಭಿವೃದ್ಧಿಯಾಗಿರುವ ಈ ವಿಮಾನವನ್ನು ಪರೀಕ್ಷಾರ್ಥ ಪ್ರಯೋಗಕ್ಕೆ ಒಳಪಡಿಸಿದ ನಂತರ, ವಿಮಾನ ಹಾರಾಟಕ್ಕೆ ಅವಕಾಶ ನೀಡಲಾಗುವುದು ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


