ಶುಕ್ರವಾರದಿಂದ ನಮ್ಮಲ್ಲೂ ಸಿಗಲಿದೆ ಐಫೋನ್ 6
ಆ್ಯಪಲ್ ಐಫೋನ್ 6 ಅಥವಾ ಐಫೋನ್...

ನವದೆಹಲಿ: ಆ್ಯಪಲ್ ಐಫೋನ್ 6 ಅಥವಾ ಐಫೋನ್ ಸಿಕ್ಸ್ ಪ್ಲಸ್ ಖರೀದಿಸ ಬಯಸುವ ಗ್ರಾಹಕರಿಗೊಂದು ಖುಷಿಯ ಸುದ್ದಿ. ಇತ್ತೀಚೆಗಷ್ಟೇ ಬಿಡುಗಡೆಯಾದ ಐಫೋನ್‌ನ ಈ ಎರಡೂ ನೂತನ ಆವೃತ್ತಿಗಳು ಅ.17ರಿಂದ ಭಾರತದ ಮಾರಕಟ್ಟೆಯಲ್ಲಿ ಲಭ್ಯವಾಗಲಿವೆ. ಗ್ರಾಹಕರು ಮಂಗಳವಾರದಿಂದಲೇ ಮುಂಗಡ ಕಾಯ್ದಿರಿಸಬಹುದಾಗಿದೆ.
ದರ ಎಷ್ಟು? : ಐಫೋನ್ 6ರ 16 ಜಿಬಿ ಆವೃತ್ತಿ ರು.53,500 ಹಾಗೂ 64 ಜಿಬಿ ಆವೃತ್ತಿ ರು 62,500ಗೆ ಲಭ್ಯವಾಗಲಿದೆ. 128 ಜಿಬಿ ಆವೃತ್ತಿಯ ದರ ರು.71,500
ಇನ್ನು ಐಫೋನ್ -6 ಪ್ಲಸ್‌ನ 16 ಜಿಬಿ ಆವೃತ್ತಿ ರು.62,500 , 64 ಜಿಬಿ ರು.71,500ಕ್ಕೆ ಮಾರಾಟವಾಗಲಿದೆ. ಇನ್ನು 128 ಜಿಬಿ ಆವೃತ್ತಿ ದರ ರು.80,500
ಕೂದಲೇ ಕಿತ್ತು ಹೋಗ್ತಿದೆ!: ಇತ್ತೀಚೆಗಷ್ಟೇ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಆ್ಯಪಲ್ ಕಂಪನಿಯ ಮಹತ್ವಾಕಾಂಕ್ಷೆಯ ಐಫೋನ್ -6 ಪ್ಲಸ್‌ನ ಮತ್ತೊಂದು ಸಮಸ್ಯೆ ಕುರಿತು ದೂರು ಕೇಳಿ ಬಂದಿದೆ. ಈ ಫೋನ್ ಖರೀದಿಸಿದ ಗ್ರಾಹಕರು ಕೆಲ ದಿನಗಳ ಹಿಂದಷ್ಟೇ ಅದರ ಗಟ್ಟಿತನದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು. ಫೋನ್ ಮೇಲೆ ಹೆಚ್ಚಿನ ಒತ್ತಡ ಬಿದ್ದರೆ ಬಾಗುತ್ತದೆ ಎಂದು ದೂರಿದ್ದರು. ಈಗ ಕೆಲ ಗ್ರಾಹಕರು ಐಫೋನ್ -6 ಪ್ಲಸ್ ನಿಂದಾಗಿ ತಲೆಗೂದಲೇ ಕಿತ್ತು ಹೋಗುತ್ತಿದೆ ಎಂದು ದೂರು ಶುರುಮಾಡಿದ್ದಾರೆ.
ಮೊಬೈಲ್ ಅನ್ನು ತಲೆ ಅಥವಾ ಗಡ್ಡದ ಸಮೀಪ ತಂದರೆ ಅಲ್ಯುಮಿನಿಯಂ ಕವಚ ಮತ್ತು ಗಾಜಿನ ನಡುವೆ ಕೂದಲುಗಳು ಸಿಕ್ಕಿ ಹಾಕಿಕೊಳ್ಳುತ್ತಿವೆ. ಇದರಿಂದ ಸಾಕಷ್ಟು ತೊಂದರೆ ಆಗುತ್ತಿದೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


