ಸ್ಮಾಷ್‌ಬಿಟಿ ಮ್ಯೂಸಿಕ್
ಮನೆಯಲ್ಲಿ ಯಾವುದೇ ಸ್ಪೀಕರ್ ಇಲ್ಲದಿದ್ದರೆ, ಟಿವಿ, ಮೊಬೈಲ್‌ಗಳಿಗೂ ಸ್ಪೀಕರ್ ಬಳಸುವ ಉದ್ದೇಶವಿದ್ದರೆ, ನೀವು ಸ್ವಲ್ಪ ಹೆಚ್ಚು...
ಮನೆಯಲ್ಲಿ ಯಾವುದೇ ಸ್ಪೀಕರ್ ಇಲ್ಲದಿದ್ದರೆ, ಟಿವಿ, ಮೊಬೈಲ್‌ಗಳಿಗೂ ಸ್ಪೀಕರ್ ಬಳಸುವ ಉದ್ದೇಶವಿದ್ದರೆ, ನೀವು ಸ್ವಲ್ಪ ಹೆಚ್ಚು ದೊಡ್ಡದಾಗಿ ಸಂಗೀತ ಕೇಳುವ 'ಸೌಂಡ್ ಪಾರ್ಟಿ'ಯಾಗಿದ್ದರೆ, ಫುಲ್‌ಸೌಂಡ್‌ನೊಂದಿಗೆ ಪಾರ್ಟಿ ನಡೆಸುವವರಾಗಿದ್ದರೆ...
ಈ ಸ್ಪೀಕರ್ ನಿಮಗಾಗಿ.
ನಿಮ್ಮಂತಹ ಸೌಂಡ್ ಪಾರ್ಟಿಗಳಿಗಾಗಿಯೇ ಇಂಟೆಕ್ಸ್ ಕಂಪನಿ ಸ್ಮಾಷ್‌ಬಿಟಿ ಸೌಂಡ್‌ಬಾಕ್ಸ್ ತಯಾರಿಸಿದೆ. ಬಿಟಿ ಅಂದರೆ ಬ್ಲ್ಯೂಟೂತ್ ಎಂದರ್ಥ. ನಿಮ್ಮ ಮೊಬೈಲ್, ಲ್ಯಾಪ್‌ಟಾಪ್ ಹೀಗೆ ಬ್ಲ್ಯೂಟೂತ್ ಹೊಂದಿರುವ ಸಾಧನದಿಂದ ಸಂಗೀತವನ್ನು ಈ ಸ್ಮ್ಯಾಷ್ ಬಿಟಿ ಮೂಲಕ ಕೇಳಬಹುದು. ಸ್ಮ್ಯಾಷ್ ಬಿಟಿ ಇದ್ದರೆ, ಯಾವುದೇ ಮ್ಯೂಸಿಕ್ ಸಿಸ್ಟಮ್‌ಗೆ ಕಡಿಮೆಯಿಲ್ಲದಂತೆ ಮೊಬೈಲ್‌ನಲ್ಲಿ ಸಂಗೀತ ಕೇಳಬಹುದು. ಐಫೋನ್ ಇದ್ದರಂತೂ ಮುಗಿದೇಹೋಯಿತು. ಇಂಟೆಕ್ಸ್ ಬಿಟಿ ಸ್ಮ್ಯಾಷ್ ಬಿಟಿಯಲ್ಲಿರುವ ಡಾಕ್‌ನಲ್ಲಿ ನಿಮ್ಮ ಐಫೋನಿಟ್ಟು, ಚಾರ್ಜ್ ಮಾಡುವುದರ ಜತೆಗೆ ಅದರಲ್ಲಿರುವ ಸಂಗೀತವನ್ನು ಕೇಳಬಹುದು. ಆದರೆ ಹೊಸ ಐಫೋನ್ ಮತ್ತು ಐಪ್ಯಾಡ್‌ಗಳಲ್ಲಿ ನೀಡಲಾಗಿರುವ ಲೈಟ್ನಿಂಗ್ ಚಾರ್ಜರ್ ಇದರಲ್ಲಿ ಬಳಸಲು ಸಾಧ್ಯವಿಲ್ಲ.
ಇದರ ಜತೆ ರಿಮೋಟ್ ಕೂಡ ಇದ್ದು, ಇದರಲ್ಲಿ ಸಂಗೀತದಲ್ಲಿ ಬಾಸ್ ಹೆಚ್ಚು ಬರುವಂತೆ, ಹಾಡುವವರ ಧ್ವನಿ ಕಡಿಮೆ ಕೇಳುವಂತೆ ಮಾಡಬಹುದು. ಜತೆಗೆ ನಿಮ್ಮ ಮೊಬೈಲ್‌ನಲ್ಲಿರುವ ಹಾಡು ನಿಲ್ಲಿಸಲು, ಬದಲಿಸಲು, ಸೌಂಡ್ ದೊಡ್ಡ-ಸಣ್ಣ ಮಾಡಲು ಸಾಧ್ಯವಿದೆ. ಇಂಟೆಕ್ಸ್ ಸ್ಮ್ಯಾಷ್‌ಬಿಟಿ ಅತ್ಯಂತ ಚಿಕ್ಕದಾಗಿದ್ದು, ಸುಂದರವಾಗಿದೆ. ಮೂರ್ತಿ ಚಿಕ್ಕದಾದರೂ ಸೌಂಡ್ ದೊಡ್ಡದಾಗೇ ಇದೆ. ರಿಮೋಟ್ ಇದ್ದರೂ, ಸ್ಪೀಕರ್ ಬಾಕ್ಸ್‌ನಲ್ಲಿಯೂ ಕೆಲವು ನಿಯಂತ್ರಣಗಳನ್ನು ನೀಡಲಾಗಿದೆ. ಸಣ್ಣ ಜಾಗದಲ್ಲಿಯೇ ಇಂಟೆಕ್ಸ್ ಕಂಪನಿ ವೂಫರ್, ಮಿನಿ ರೇಂಜ್ ಸ್ಪೀಕರ್ ಮತ್ತು ಟ್ವೀಟರ್‌ಗಳನ್ನು ಅಳವಡಿಸಲು ಯಶಸ್ವಿಯಾಗಿದೆ. ಇದರಿಂದಾಗಿ ಹೈಬಾಸ್ ಉಳ್ಳ ಸಂಗೀತವನ್ನೂ ಸಮರ್ಥವಾಗಿ ಪ್ರಸಾರ ಮಾಡಲು ಸ್ಮ್ಯಾಷ್ ಬಿಟಿ ಯಶಸ್ವಿಯಾಗಿದೆ. ಸ್ಮ್ಯಾಷ್ ಬಿಟಿಯ ಇನ್ನೊಂದು ಅನುಕೂಲವೆಂದರೆ ನಿಮ್ಮ ಮೊಬೈಲ್‌ಗೆ ಕಾಲ್ ಬರುತ್ತಿದ್ದಂತೆ ಮೊಬೈಲ್ ಮತ್ತು ಸ್ಮ್ಯಾಷ್ ಬಿಟಿ ನಡುವಿನ ಸಂಪರ್ಕ ಕಡಿದುಹೋಗುತ್ತದೆ. ಆಕ್ಸ್ ಸೌಲಭ್ಯದಿಂದ ಬ್ಲ್ಯೂಟೂತ್ ಇಲ್ಲದ ಸಾಧನದಿಂದಲೂ ಸ್ಮ್ಯಾಷ್ ಬಿಟಿಗೆ ಸಂಪರ್ಕ ಕಲ್ಪಿಸಬಹುದು.
ಇಂಟೆಕ್ಸ್ ಕಂಪನಿ ಸ್ಮ್ಯಾಷ್ ಬಿಟಿಯನ್ನು ಕೇವಲ ಮೊಬೈಲ್ ಸ್ಪೀಕರ್‌ಗೆ ಸೀಮಿತಗೊಳಿಸಿಲ್ಲ. ಬದಲಾಗಿ ಟಿವಿಗೆ ಸೌಂಡ್‌ಬಾಕ್ಸ್ ರೂಪದಲ್ಲಿಯೂ ಬಳಸಬಹುದು. ಈಗ ಬರುತ್ತಿರುವ ಎಲ್‌ಸಿಡಿ, ಎಲ್‌ಇಡಿ ಪ್ಲ್ಯಾಟ್ ಟಿವಿಗಳಲ್ಲಿ ಸೌಂಡ್ ಅಷ್ಟು ಚೆನ್ನಾಗಿ ಇರುವುದಿಲ್ಲ. ಇದನ್ನು ಬಗೆಹರಿಸಲೂ ಇಂಟೆಕ್ಸ್ ಸ್ಮ್ಯಾಷ್ ಬಿಟಿ ಬಳಸಬಹುದು. ಸುಸ್ಪಷ್ಟವಾಗಿ ಮತ್ತು ನಿಮಗೆ ಬೇಕಾದಷ್ಟು ದೊಡ್ಡದಾಗಿ ಮೊಳಗಿಸಬಲ್ಲ ತಾಕತ್ತು ಸ್ಮ್ಯಾಷ್‌ಬಿಟಿಗಿದೆ. 5,900ರ ದರಕ್ಕೆ ಇಂಟೆಕ್ಸ್ ಸ್ಮ್ಯಾಷ್ ಬಿಟಿ ನಿಜಕ್ಕೂ ಅತ್ಯಂತ ಅದ್ಭುತ ಎನ್ನಬಹುದಾದ ಅನುಭವ ನೀಡುತ್ತದೆ. ಜತೆಗೆ ವಿವಿಧ ರೀತಿಯ ಬಳಕೆಯೂ ಸಾಧ್ಯವಿದೆ. ಚಿಕ್ಕ ಮತ್ತು ಮಧ್ಯಮ ಗಾತ್ರದ ಪಾರ್ಟಿಗಳಿಗಂತೂ ಇದು ಹೇಳಿ ಮಾಡಿಸಿದ ಸ್ಪೀಕರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

