ವಿಜ್ಞಾನ-ತಂತ್ರಜ್ಞಾನ

ಎಮ್‌ಟಿಎಸ್ ಬ್ಲೇಜ್ 5.0

ಪ್ರತಿಷ್ಠಿತ ಮೊಬೈಲ್ ಕಂಪನಿಗಳಲ್ಲಿ ಒಂದಾದ ಎಮ್‌ಟಿಎಸ್, ತನ್ನ ನೂತನ ಬ್ಲೇಜ್ 5.0 ಸ್ಮಾರ್ಟ್‌ಫೋನ್ ...

Published On :

ಪ್ರತಿಷ್ಠಿತ ಮೊಬೈಲ್ ಕಂಪನಿಗಳಲ್ಲಿ ಒಂದಾದ ಎಮ್‌ಟಿಎಸ್, ತನ್ನ ನೂತನ ಬ್ಲೇಜ್ 5.0 ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಪರಿಚಯಿಸಿದೆ. ಕ್ವಾಲ್ ಕಾಮ್‌ನ ಸ್ನಾಪ್ ಡ್ರಾಗನ್‌ನ ತಂತ್ರಜ್ಞಾನ ಅಳವಡಿಸಲಾಗಿದ್ದು ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಒಎಸ್ ಹೊಂದಿದೆ. 5 ಇಂಚಿನ ಪರದೇ , ಇವಿಡಿವೊ ಮತ್ತು ಜಿಎಸ್‌ಎಮ್‌ನ ಡ್ಯುಯೆಲ್ ಸಿಮ್ ಸೌಲಭ್ಯ ಎಮ್‌ಟಿಎಸ್ ಬ್ಲೇಜ್ 5.0 ಹೊಂದಿದೆ. ಸ್ಮಾರ್ಟ್ ಫೋನ್ ಜತಗೆ ಎಮ್‌ಟಿಎಸ್ ಸಿಮ್ ಕಾರ್ಡ್ ದೊರೆಯಲಿದ್ದು ಮೊದಲ ಬಾರಿಗೆ 198 ರಿಚಾರ್ಜ್ ಮಾಡಿಸಿದ್ದಲ್ಲಿ 1ಟಿಬಿ ವರೆಗೂ ಒಂದು ವರ್ಷದ ಅವಧಿಯ ತನಕ ಡಾಟಾ ಬಳಕೆಗೆ ಅವಕಾಶವಿರುತ್ತದೆ. ಬ್ಲೇಜ್ 5.0 ಅನೇಕ ವಿಶೇಷಗಳಿಂದ ಕೂಡಿದ್ದು, ಪ್ರಮುಖವಾಗಿ ಅಧಿಕ ಸಮಯದ ಬ್ಯಾಟರಿ ಬಾಳಿಕೆ, 8  ಮೆಗಾ ಪಿಕ್ಸ್‌ಲ್ ಕ್ಯಾಮೆರಾ, 32 ಜಿಬಿ ವರೆಗೂ ಸಂಗ್ರಹಣ ಸಾಮರ್ಥ್ಯ ಹಾಗೂ ಎಂಟಿಎಸ್ ಪ್ಲೇ ಗ್ರೌಂಡ್, ವಿಜಾರ್ಡ್, ಎಂಟಿಎಸ್ ಟಿವಿ  ಮೂಲಕ 100ಕ್ಕೂ ಹೆಚ್ಚು ಟಿವಿ ಚಾನಲ್ ವೀಕ್ಷಿಸಬಹುದಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಕೇವಲ 11 ಸಾವಿರಕ್ಕೆ ಲಭ್ಯವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.