ಮುದ್ದು ಮೋಟೋ

ಒಂದು ವರ್ಷದ ಹಿಂದಷ್ಟೇ ಅಮೆರಿಕದಲ್ಲಿ ಸ್ಥಾಪಿಸಲಾಗಿದ್ದ ಮೋಟೊರೊಲಾ ಮೊಬೈಲ್ ಉತ್ಪಾದನಾ ಫ್ಯಾಕ್ಟರಿಯನ್ನು ಮುಚ್ಚಲು ನಿರ್ಧರಿಸಿದ ಸುದ್ದಿಯ ಹಿಂದೆಯೇ ಭಾರತದಲ್ಲಿ ಮೊಟೊ ಜಿ ಮತ್ತು ಇ ಫೋನ್‌ಗಳು ಭಾರೀ ಬೇಡಿಕೆಯಲ್ಲಿರುವ ಸಿಹಿ ಸುದ್ದಿ ಕಂಪನಿಗೆ ಲಭಿಸಿದೆ.
ಮೊಟೊ ಜಿ ಮೊಬೈಲ್ ಬಿಡುಗಡೆಯಾದ ಸ್ವಲ್ಪ ಸಮಯದಲ್ಲೇ ಮೊಟೊ ಇ (7000) ಮೊಬೈಲ್ ಬಿಡುಗಡೆ ಮಾಡಿತ್ತು. ಫ್ಲಿಪ್‌ಕಾರ್ಟ್ ಈ ಮೊಬೈಲ್‌ನ ಅಧಿಕೃತ ಮಾರಾಟಗಾರನಾಗಿದ್ದು, ಸೆಟ್ ಪದೇ ಪದೇ ಔಟ್ ಆಫ್ ಸ್ಟಾಕ್ ಆಗುತ್ತಿದೆ. ಬಿಡುಗಡೆಯಾದ ಒಂದು ದಿನದಲ್ಲೇ ಔಟ್ ಆಫ್ ಸ್ಟಾಕ್ ಆಗಿದ್ದ ಫೋನ್‌ಗೆ ಫ್ಲಿಪ್‌ಕಾರ್ಟ್ ಈಗ 3ನೇ ಬಾರಿಗೆ ಔಟ್ ಆಫ್ ಸ್ಟಾಕ್ ಎಂಬ ಬೋರ್ಡು ತೂಗಿಹಾಕಿದೆ.
ಕೇವಲ 7000ಕ್ಕೆ ಉತ್ತಮ ರೆಸಲ್ಯೂಷನ್ ಸ್ಕ್ರೀನ್ (960ಶ್ರೀ540) ಹಾಗೂ ಗೊರಿಲ್ಲಾ 3 ಗ್ಲಾಸ್ ಹೊಂದಿದೆ. ಈ ದರದ ಆಸುಪಾಸಿನಲ್ಲಿರುವ ಮೊಬೈಲ್‌ಗಳಿಗಿಂತ ಇದರ ಸ್ಕ್ರೀನ್ ಉತ್ತಮವಾಗಿದೆ. ಜತೆಗೆ 1980 ಎಂಎಎಚ್ ಬ್ಯಾಟರಿ ಹೊಂದಿದೆ.
ಉಳಿದ ಮೊಟೊ ಮೊಬೈಲ್‌ಗಳಿಗೂ ಮೊಟೊ ಇಗೂ ಇರುವ ವ್ಯತ್ಯಾಸವೆಂದರೆ ಮೊಟೊ ಇ ಎಸ್‌ಡಿಕಾರ್ಡ್ ಅಳವಡಿಸುವ ಸೌಲಭ್ಯವಿದೆ. ಇದರ ಜತೆಗೆ ಕಂಪನಿ ಮುಂಬರುವ ಸಾಫ್ಟ್‌ವೇರ್ ಕೂಡ ಈ ಮೊಬೈಲ್‌ಗೆ ಒದಗಿಸುವುದಾಗಿ ಹೇಳಿರುವುದು ಗ್ರಾಹಕರ ಪ್ರಮುಖ ಆಕರ್ಷಣೆಗೆ ಕಾರಣವಾಗಿರಬಹುದು. ಸದ್ಯ ಮಾರುಕಟ್ಟೆಯಲ್ಲಿರುವ ಮೊಬೈಲ್‌ಗಳಲ್ಲಿ ಇಷ್ಟು ಕಡಿಮೆ ದರಕ್ಕೆ ಇಷ್ಟು ಉತ್ತಮವಾದ ಇನ್ನೊಂದು ಮೊಬೈಲ್ ಲಭ್ಯವಿಲ್ಲ ಎಂದೇ ಹೇಳಬಹುದು.
ಆದರೆ ಅಮೆರಿಕದಲ್ಲಿ ಸ್ಥಾಪಿಸಿದ ಫ್ಯಾಕ್ಟರಿ ಮಾತ್ರ ಲಾಭಕರವಲ್ಲ ಎಂಬ ಕಾರಣಕ್ಕೆ ಮುಚ್ಚಿಕೊಳ್ಳುತ್ತಿದೆ. ಅಮೆರಿಕದಲ್ಲಿ ಉದ್ಯೋಗಿಗಳು ದುಬಾರಿಯಾದ ಕಾರಣ ಮತ್ತು ಮೋಟೊರೊಲಾ ಮೊಬೈಲ್‌ಗಳು ನಿರೀಕ್ಷಿತ ಜನಸ್ಪಂದನ ಪಡೆಯದ ಹಿನ್ನೆಲೆಯಲ್ಲಿ ಅಮೆರಿಕದ ಟೆಕ್ಸಾಸ್‌ನಲ್ಲಿರುವ ತಯಾರಿಕಾ ಘಟಕ ಮುಚ್ಚಲು ಕಂಪನಿ ನಿರ್ಧರಿಸಿದೆ. ಮೊಟೊರೊಲಾ ಕಂಪನಿಯ ಫೋನ್‌ಗಳು ಏಷ್ಯಾದಲ್ಲಿ ಸಿದ್ಧಗೊಳ್ಳುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


