ಲೆನೊವಾ ಎಸ್850
ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡುವ ಲೆನೊವಾ ಸಂಸ್ಥೆ ತನ್ನದೇ ಆದ ಗ್ರಾಹಕರ ವರ್ಗ ಸೃಷ್ಟಿಸಿಕೊಂಡಿದೆ...

ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡುವ ಲೆನೊವಾ ಸಂಸ್ಥೆ ತನ್ನದೇ ಆದ ಗ್ರಾಹಕರ ವರ್ಗ ಸೃಷ್ಟಿಸಿಕೊಂಡಿದೆ. ಅಂಥ ಗುಣಮಟ್ಟದ ಗ್ರಾಹಕರಿಗೆಂದೇ ಬಹು ನಿರೀಕ್ಷಿತ ಎಸ್850 ಸ್ಮಾರ್ಟ್ಫೋನ್ ಅನ್ನು ಸಂಸ್ಥೆ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಉತ್ತಮ ತಂತ್ರಜ್ಞಾನ ಮತ್ತು ವಿನ್ಯಾಸಕ್ಕೆ ಲೆನೊವೊ ಆದ್ಯತೆ ನೀಡಿದೆ. ಇದೀಗ ಮಾರುಕಟ್ಟೆಗೆ ಪರಿಚಯಿಸಿರುವ ಎಸ್850 ಸ್ಮಾರ್ಟ್ಫೋನ್ 13 ಮೆಗಾ ಪಿಕ್ಸಲ್ ಹಿಂಬದಿ ಹಾಗೂ 5 ಮೆಗಾ ಪಿಕ್ಸಲ್ನ ಮುಂಬದಿ ಕ್ಯಾಮೆರಾದೊಂದಿಗೆ ಬಳಕೆದಾರರಿಗೆ ವಿಶೇಷ ಅನುಭವ ನೀಡುತ್ತದೆ.
5 ಇಂಚಿನ ಎಲ್ಇಡಿ ಪರದೆ ಹೊಂದಿದ್ದು ನೂತನ 4.2.2 ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ನ ಸ್ಮಾರ್ಟ್ಫೋನ್ ಇದಾಗಿದೆ. ಹೆಚ್ಚಾಗಿ ಅಪ್ಲಿಕೇಶನ್ ಬಳಸುವುದರಿಂದ ಫೋನ್ ಮಂದಗತಿಯಲ್ಲಿ ಕಾರ್ಯನಿರ್ವಹಿಸುವುದನ್ನು ತಡೆಗಟ್ಟಲು 1.3 ಗಿಗಾ ಕ್ವಾಡ್ ಕೋರ್ ಪ್ರೊಸೆಸರ್ ಅಳವಡಿಸಲಾಗಿದೆ.
ಹೆಚ್ಚಾಗಿ ಡೇಟಾ ಮತ್ತು ಸಾಫ್ಟ್ವೇರ್ನ ಸುರಕ್ಷತೆ ಕಾಪಾಡಿಕೊಳ್ಳಲು ವಿಫಲವಾಗುತ್ತಿರುವ ಸ್ಮಾರ್ಟ್ಫೋನ್ನ ಬಳಕೆದಾರರ ಸಮಸ್ಯೆಗೆ ಎಸ್850 ಪರಿಹಾರ ನೀಡಿದೆ. ಡೇಟಾ ಮತ್ತು ಸಾಫ್ಟ್ವೇರ್ನ ಸುರಕ್ಷೆ ಕಾಪಾಡಲು ಸೆಕ್ಯೂರ್ ಇಟ್ ಎಂಬ ಆ್ಯಪ್ ಅನ್ನು ಫೋನ್ನಲ್ಲಿ ಅಳವಡಿಸಲಾಗಿದೆ. ಅಷ್ಟೇ ಅಲ್ಲದೆ, ಶೇರ್ ಇಟ್ ಮತ್ತು ಸಿಂಕ್ ಇಟ್ ಎಂಬ ಆ್ಯಪ್, ಬಳಕೆದಾರರಿಗೆ ವಿಶೇಷ ಅನುಭವ ನೀಡುತ್ತದೆ. ತಿಂಗಳ ಅಂತ್ಯಕ್ಕೆ ಮಾರುಕಟ್ಟೆಯಲ್ಲಿ ಈ ಫೋನ್ ಗ್ರಾಹಕರಿಗೆ ಲಭ್ಯವಿದ್ದು, ಇದರ ಬೆಲೆ ರು. 15,500.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


