೬% ಜಾಗತಿಕ ಜನಸಂಖ್ಯೆಗೆ ಅಂತರ್ಜಾಲ ಚಟ
ಜಾಗತಿಕ ಜನಸಂಖ್ಯೆಯಲ್ಲಿ ಶೇಕಡಾ ೬% ಜನ ಅಂತರ್ಜಾಲದ ಚಟದಿಂದ

ಜಾಗತಿಕ ಜನಸಂಖ್ಯೆಯಲ್ಲಿ ಶೇಕಡಾ ೬% ಜನ ಅಂತರ್ಜಾಲದ ಚಟದಿಂದ ನರಳುತ್ತಿದ್ದಾರೆ ಎನ್ನುತ್ತದೆ ಹೊಸ ಅಧ್ಯಯನ.
ಇದು ವಿಶ್ವದ ವಿವಿಧ ಭಾಗಗಳಲ್ಲಿ ವಿಭಿನ್ನವಾಗಿದ್ದು, ಉತ್ತರ ಮತ್ತು ಪಶ್ಚಿಮ ಯೂರೋಪಿನಲ್ಲಿ ೨.೬% ಜನಸಂಖ್ಯೆ ಅಂತರ್ಜಾಲ ಚಟಕ್ಕೆ ಬಿದ್ದಿದ್ದು, ಮಧ್ಯ ಪ್ರಾಚ್ಯ ದೇಶಗಳಲ್ಲಿ ಈ ಚಟ ೧೦.೯% ಇದೆ.
ಈ ಇಂಟರ್ ನೆಟ್ ಚಟಕ್ಕೂ ಹಾಗು ಅವರ ಜೀವನದ ಗುಣಮಟ್ಟಕ್ಕೂ ಸಂಬಂಧವಿದೆ ಎನ್ನುತ್ತಾರೆ ಈ ಅಧ್ಯಯನ ನಡೆಸಿದ ಸಂಶೋಧನಕಾರರು.
ಈ ಪ್ರಬಂಧದ ಮುಖ್ಯ ಸಂಪಾದಕ ಬ್ರೆಂಡಾ ಕೆ ವೈಡರ್ ಹೋಲ್ಡ್ , ಇಂಟರಾಕ್ಟಿವ್ ಮೀಡಿಯಾ ಇನ್ಷ್ಟಿಟ್ಯೂಟ್, ವರ್ಚುಯಲ್ ರಿಯಾಲಿಟಿ ಮೆಡಿಕಲ್ ಇನ್ಸ್ಟಿಟ್ಯೂಟ್ ಜಂಟಿಯಾಗಿ ನಡೆಸಿರುವ ಈ ಸಂಶೋಧನೆಯಲ್ಲಿ ಅಂತರ್ಜಾಲ ಚಟಕ್ಕೂ ಜೀವನದ ಗುಣಮಟ್ಟಕ್ಕೂ ವೈರುಧ್ಯದ ಸಂಬಂಧ ಇದೆ, ಆದರೆ ಇದನ್ನು ಸಾಬೀತು ಪಡಿಸಲು ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


