ಮೊಬೈಲಲ್ಲೇ ಲಾಂಗ್ವೇಜ್ ಕ್ಲಾಸ್
ಭಾಷೆಗಳನ್ನು ಕಲಿಯಲು ಇಂದು ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿನ ಅಪ್ಲಿಕೇಷನ್‌ಗಳು ವೇದಿಕೆಯಾಗುತ್ತಿವೆ...

ಭಾಷೆಗಳನ್ನು ಕಲಿಯಲು ಇಂದು ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿನ ಅಪ್ಲಿಕೇಷನ್‌ಗಳು ವೇದಿಕೆಯಾಗುತ್ತಿವೆ. ಇಂಥ ಹತ್ತಾರು ಅಪ್ಲಿಕೇಷನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇದಕ್ಕೆ ಹೊಸ ಸೇರ್ಪಡೆಯೆಂದರೆ ಡಿಯೋಲಿಂಗೊ. ಈ ಅಪ್ಲಿಕೇಷನ್ ಮೂಲಕ ವಿಶ್ವದ ಆರು ಭಾಷೆಗಳನ್ನು ಕಲಿಯಬಹುದು. ಮತ್ತೊಂದು ಖುಷಿಯ ವಿಚಾರವೆಂದರೆ ಏ.24ರಿಂದ ಹಿಂದಿ ಭಾಷಿಕರೂ ಜಗತ್ತಿನ 6 ಭಾಷೆಯನ್ನು ಈ ಅಪ್ಲಿಕೇಷನ್ ಮೂಲಕ ಕಲಿಯಬಹುದು. ಸ್ಪ್ಯಾನಿಶ್, ಫ್ರೆಂಚ್, ಜರ್ಮನ್, ಪೋರ್ಚುಗೀಸ್, ಇಟಾಲಿಯನ್ ಹಾಗೂ ಇಂಗ್ಲಿಷ್ ಅನ್ನು ಕಲಿಯಬಹುದಾಗಿದೆ. ಭವಿಷ್ಯದಲ್ಲಿ ಭಾರತದ ಉಳಿದ 20ಕ್ಕೂ ಅಧಿಕ ಭಾಷೆಗಳನ್ನು ಇದರಲ್ಲಿ ಸೇರಿಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ ಎಂದು ಡೆವಲಪರ್ಸ್ ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


