ವಿಜ್ಞಾನ-ತಂತ್ರಜ್ಞಾನ

ಗೇಮಿಂಗ್ ಮಾಫಿಯಾ

ಈ ಮೊಬೈಲ್ ಎನ್ನುವುದು ಆಟಿಕೆ ಸಾಮಾನಂತಾಗಿದೆ ಎಂದು ಆಗಾಗ ಹಿರಿಯರು ಬಯ್ಯುತ್ತಿರುವುದನ್ನು ಕೇಳಿದ್ದೇವೆ...

ಗೇಮಿಂಗ್ ಮಾಫಿಯಾ
Published On :

ಈ ಮೊಬೈಲ್ ಎನ್ನುವುದು ಆಟಿಕೆ ಸಾಮಾನಂತಾಗಿದೆ ಎಂದು ಆಗಾಗ ಹಿರಿಯರು ಬಯ್ಯುತ್ತಿರುವುದನ್ನು ಕೇಳಿದ್ದೇವೆ. ಆದರೆ ಹೊಸ ಸಂಶೋಧನೆ ಪ್ರಕಾರ ಇದು ನಿಜ ಕೂಡ. ಅಮೆರಿಕನ್ನರು ಮೊಬೈಲ್ ಬಳಸುವ ಮೂರನೇ ಒಂದರಷ್ಟು ಸಮಯವನ್ನು ಗೇಮಿಂಗ್‌ಗೆ ಬಳಸುತ್ತಾರೆ ಎನ್ನುವುದು ಬಹಿರಂಗವಾಗಿದೆ. ಭಾರತದಲ್ಲಿ ಇದರ ಪ್ರಮಾಣ ಮತ್ತಷ್ಟು ಹೆಚ್ಚಿರಬಹುದು.
ಸ್ಮಾರ್ಟ್ ಮಾರುಕಟ್ಟೆಯಲ್ಲಿ ಅಪ್ಲಿಕೇಷನ್‌ಗಳ ಕಾಟ ಹೆಚ್ಚಾಗುತ್ತಲೇ ಈ ಗೇಮಿಂಗ್ ಹಾಗೂ ಅಪ್ಲಿಕೇಷನ್ ಆಧಾರಿತವಾಗಿಯೇ ಮೊಬೈಲ್ ಮತ್ತು ಟ್ಯಾಬ್ಲೆಟ್ ಬಳಕೆಯಾಗುತ್ತಿದೆ. ಒಟ್ಟಾರೆ ಮೊಬೈಲ್ ಬಳಕೆಯಲ್ಲಿ ಶೇ.86ರಷ್ಟು ಸಮಯವನ್ನು ಅಪ್ಲಿಕೇಷನ್ ಒಳಗೆಯೇ ಕಳೆಯುತ್ತಾರೆ ಎಂದು ಸಮೀಕ್ಷೆ ಹೇಳಿದೆ. ಉಳಿದ ಶೇ.14ರಷ್ಟು ಸಮಯದಲ್ಲಿ ಬ್ರೌಸರ್‌ನಲ್ಲಿ ಮಾಹಿತಿ ಜಾಲಾಡುತ್ತಾರೆ. ಮತ್ತೊಂದು ಆಸಕ್ತಿಕರ ವಿಚಾರವೆಂದರೆ ಅಪ್ಲಿಕೇಷನ್‌ನಲ್ಲಿ ಅವಶ್ಯ ಮಾಹಿತಿ ಸಿಗದಿದ್ದಾಗ ಈ ಬ್ರೌಸರ್‌ಗಳತ್ತ ಬಳಕೆದಾರರು ವಾಲುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಮಾಹಿತಿಗಳನ್ನು ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ ನೀಡುವ ಅಪ್ಲಿಕೇಷನ್‌ಗಳು ಲಭ್ಯವಾದರೆ ಅದರತ್ತ ವಾಲುವ ಗ್ರಾಹಕರೇ ಹೆಚ್ಚಿದ್ದಾರಂತೆ.ಅಪ್ಲಿಕೇಷನ್‌ಗೆ ಒಟ್ಟು ಶೇ.86ರಷ್ಟು ಸಮಯವನ್ನು ಮೀಸಲಿಡುವ ಜನರು ಇದರಲ್ಲಿ ಶೇ.17ರಷ್ಟನ್ನು ಫೇಸ್‌ಬುಕ್‌ಗೆ, ಶೇ.9.5ರಷ್ಟು ಮೆಸೆಂಜರ್‌ಗಳಿಗೆ ಹಾಗೂ ಉಳಿದ ಸಮಯವನ್ನು ಯೂಟ್ಯೂಬ್, ಟ್ವೀಟರ್, ನ್ಯೂಸ್, ಯುಟಿಲಿಟಿ ವಿಚಾರಗಳಿಗೆ ಗ್ರಾಹಕರು ಮೀಸಲಿಟ್ಟಿದ್ದಾರೆ. ಒಟ್ಟಿನಲ್ಲಿ ಜನರು ಮೊಬೈಲ್ ಅನ್ನು ಮಾಹಿತಿಗಿಂತ ಮನರಂಜನೆ ಕಾರಣಕ್ಕಾಗಿಯೇ ಹೆಚ್ಚು ಬಳಸುವುದು ಖಾತ್ರಿಯಾಗುತ್ತದೆ. ಏಕೆಂದರೆ ಶೇ.32ರಷ್ಟು ಸಮಯವನ್ನು ಗೇಮಿಂಗ್‌ಗೆ ಜನ ಬಳಸುತ್ತಾರೆ. ಅಂದಹಾಗೆ, ಇವೆಲ್ಲ ವಿಚಾರಗಳಲ್ಲಿ ಜನರು ಸಾಮಾನ್ಯವಾಗಿ 2 ಗಂಟೆ 42 ನಿಮಿಷ ಕಳೆಯುತ್ತಾರೆ, ಇದು ಕಳೆದ ವರ್ಷಕ್ಕಿಂತ ಒಂದು ನಿಮಿಷ ಹೆಚ್ಚಾಗಿದೆ ಎಂದು ಸಮೀಕ್ಷೆ ಸಾದರಪಡಿಸಿದೆ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.