ವೈರೆಸ್ ಪ್ರೂಫರ್
ಅವನು ಮಿ. ಎಕ್ಸ್. ಒಂದು ಫೋಟೋ ಸ್ಟುಡಿಯೋವನ್ನು ಇಟ್ಟುಕೊಂಡಿರುತ್ತಾನೆ. ಸ್ಟುಡಿಯೋ ಚೆನ್ನಾಗಿಯೇ ನಡೆಯುತ್ತಿತ್ತು. ಗ್ರಾಹಕರು ಹೆಚ್ಚೆಚ್ಚು ಬರುತ್ತಿದ್ದರು...

ಅವನು ಮಿ. ಎಕ್ಸ್. ಒಂದು ಫೋಟೋ ಸ್ಟುಡಿಯೋವನ್ನು ಇಟ್ಟುಕೊಂಡಿರುತ್ತಾನೆ. ಸ್ಟುಡಿಯೋ ಚೆನ್ನಾಗಿಯೇ ನಡೆಯುತ್ತಿತ್ತು. ಗ್ರಾಹಕರು ಹೆಚ್ಚೆಚ್ಚು ಬರುತ್ತಿದ್ದರು. ಆದರೆ ಆತನ ಸಮಸ್ಯೆ ಎಂದರೆ ಗ್ರಾಹಕರು ತಂದುಕೊಡುವ ಯುಎಸ್‌ಬಿ ಡ್ರೈವ್, ಡಾಟಾ ಕಾರ್ಡ್‌ಗಳಲ್ಲಿ ವೈರಸ್ ಇರುತ್ತಿತ್ತು. ಹಾಗಂತ ಅವುಗಳನ್ನು ಬೇಡ ಅನ್ನುವಂತಿಲ್ಲ. ಹಾಗೆಂದರೆ ಗ್ರಾಹಕರನ್ನು ಕಳೆದುಕೊಳ್ಳಬೇಕಾಗುತ್ತದೆ. ಈತನ ಕಂಪ್ಯೂಟರ್‌ನಲ್ಲಿ ಆ್ಯಂಟಿ ವೈರಸ್ ಇದ್ದರೂ ಅದು ತನಗೆ ಗೊತ್ತಿರುವ ವೈರಸ್ ಅನ್ನು ಮಾತ್ರ ಡಿಲೀಟ್ ಮಾಡುತ್ತಿತ್ತು. ಹೀಗಾಗಿ ವಾರಕ್ಕೋ, 15 ದಿನಕ್ಕೋ ಒಮ್ಮೆ ಸಿಸ್ಟಮ್ ಅನ್ನು ಫಾರ್ಮೆಟ್ ಮಾಡಿಬಿಡುತ್ತಿದ್ದ. ಕೆಲವೊಮ್ಮೆ ಆತನ ಮುಖ್ಯವಾದ ಫೈಲ್‌ಗಳೂ ಡಿಲೀಟ್ ಆಗಿರುತ್ತಿದ್ದವು...
ಇದು ಬಹುತೇಕ ಎಲ್ಲ ಸ್ಟುಡಿಯೋ ಸೇರಿದಂತೆ ಈ ರೀತಿಯ ವ್ಯವಹಾರ ನಡೆಸುವ ಸಮಸ್ಯೆ. ಆದರೆ, ಆ್ಯಂಟಿ ವೈರಸ್‌ನಿಂದ ಎಲ್ಲ ವೈರಸ್‌ಗಳನ್ನು ನಾಶ ಮಾಡಲು ಸಾಧ್ಯವಾಗದಿದ್ದರಿಂದ ನ್ಯಾಷ್‌ವಾಲ್ ಎಂಬ ಕಂಪನಿ ವೈರಸ್ ಪ್ರೂಫರ್ ಎಂಬ ಹೊಸ ಸಾಫ್ಟ್‌ವೇರ್ ಅನ್ನು ಕಂಡುಹಿಡಿದಿದೆ. ಇದು ನಿಮ್ಮ ಸಿಸ್ಟಮ್‌ನಲ್ಲಿ ಹೊಸ ವೈರಸ್ ಬಂದರೂ ಯಾವುದೇ ಫೈಲ್‌ಗಳನ್ನು ನಾಶಪಡಿಸಲು ಬಿಡುವುದಿಲ್ಲ. ಜತೆಗೆ ಇದಕ್ಕೆ ದಿನವಿಡೀ ಇಂಟರ್ನೆಟ್ ಕನೆಕ್ಷನ್ ಬೇಕಿಲ್ಲ. ಕಂಪ್ಯೂಟರ್ ವೇಗವೂ ಹೆಚ್ಚುತ್ತದೆ.
ಹೇಗೆ ಕಾರ್ಯನಿರ್ವಹಿಸುತ್ತದೆ?
ಇತರ ಆ್ಯಂಟಿ ವೈರಸ್ ಸಾಫ್ಟ್‌ವೇರ್ ರೀತಿ ಇದಕ್ಕೆ ವಾರಕ್ಕೊಮ್ಮೆಯಂತೆ ಅಪ್‌ಡೇಟ್ ಮಾಡಬೇಕೆಂದೇನೂ ಇಲ್ಲ. ಯಾವುದೇ ಅಪ್‌ಡೇಟ್‌ಗಳು ಇಲ್ಲದಿರುವುದರಿಂದ 3 ಪಟ್ಟು ಹೆಚ್ಚು ವೇಗ ಹೊಂದಿರುತ್ತದೆ. ಈ ವೈರಸ್ ಪ್ರೂಫರ್ ಇದ್ದರೆ ನಿಮ್ಮ ಸಿಸ್ಟಮ್‌ನಲ್ಲಿ ಒಮ್ಮೆ ಯಾವುದೇ ವೈರಸ್ ಬಂದರೂ ಅದು ದ್ವಿಗುಣಗೊಳ್ಳಲು ಬಿಡುವುದಿಲ್ಲ. ಜತೆಗೆ ಬೇರೆ ಫೈಲ್‌ಗಳನ್ನು ನಾಶ ಮಾಡಲೂ ಬಿಡುವುದಿಲ್ಲ. ಅವು ವೈರಸ್ ಪ್ರೂಫರ್ ಅಧೀನದಲ್ಲಿರುತ್ತೆ ಅಷ್ಟೆ.
ಹಾಗಂತ ನಿಮ್ಮ ಸಿಸ್ಟಮ್‌ಗೆ ವೈರಸ್ ಬರುವುದಿಲ್ಲವೆಂದಲ್ಲ. ಬೇರೆ ಕಡೆಯಿಂದ ತಂದ ಪೆನ್ ಡ್ರೈವ್, ಡಾಟಾ ಕಾರ್ಡ್ ಇತ್ಯಾದಿಗಳಿಂದ ಬರಬಹುದು. ಯುಎಸ್‌ಬಿ ಡ್ರೈವ್‌ಗಳಲ್ಲಿ ಇರುವ ಫೈಲ್‌ಗಳನ್ನು ಸಿಸ್ಟಮ್‌ಗೆ ಹಾಕಬೇಕೆಂದರೆ ಮೊದಲು ವೈರಸ್ ಪ್ರೂಫರ್ ಅನ್ನು ತೆರೆಯಬೇಕು. ಇದರ ಡೋರ್ ತೆರೆದಾಗ ಮಾತ್ರ ಅವುಗಳಲ್ಲಿರುವ ಡಾಟಾವನ್ನು ವರ್ಗಾಯಿಸಿಕೊಳ್ಳಬಹುದು. ಒಮ್ಮೆ ಪ್ರೂಫರ್ ಅನ್ನು ಕ್ಲೋಸ್ ಮಾಡಿದರೆ ಮತ್ತೆ ಯಾವುದೇ ಫೈಲ್‌ಗಳ ವರ್ಗಾವಣೆ ಅಸಾಧ್ಯ. ಬೇಕೆಂದರೆ ಮತ್ತೆ ತೆರೆಯಬೇಕಷ್ಟೆ. ಲೈವ್ ರಿಮೋಟ್ ಸಿಸ್ಟಮ್‌ನಲ್ಲಿ ವೈರಸ್ ಇದ್ದರೆ ಅದನ್ನು ನ್ಯಾಷ್‌ವಾಲ್ ಕಂಪನಿಗೆ ತಿಳಿಸಿದರೆ ಸಾಕು. ಅಲ್ಲಿ ಲೈವ್ ರಿಮೋಟ್ ಕಂಟ್ರೋಲ್ ಇರುತ್ತದೆ. ಅಲ್ಲಿಂದಲೇ ನಿಮ್ಮ ಕಂಪ್ಯೂಟರ್‌ನಲ್ಲಿರುವ ವೈರಸ್ ಬಗ್ಗೆ ಮಾಹಿತಿ ನೀಡುತ್ತಾರೆ. ನಂತರದಲ್ಲಿ ಅವುಗಳನ್ನು ಡಿಆ್ಯಕ್ಟಿವೇಟ್‌ಮಾಡಿಕೊಳ್ಳಬಹುದು.
ನೋ ಹ್ಯಾಕಿಂಗ್
ಇಲ್ಲಿ ಮೊದಲೇ ಹೇಳಿದಂತೆ ಯಾವುದೇ ಅಪ್ಲಿಕೇಷನ್ ಅನ್ನು ಸಿಸ್ಟಂಗೆ ಇನ್‌ಸ್ಟಾಲ್ ಮಾಡಬೇಕೆಂದರೆ ಅಥವಾ ರನ್ ಮಾಡಬೇಕೆಂದರೆ, ಕೋಡ್ ಜನರೇಟ್ ಮಾಡಬೇಕಾದರೆ ವೈರಸ್ ಪ್ರೂಫರ್ ಅನ್ನು ತೆರೆಯಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಸಿಸ್ಟಮ್‌ಗಳು ಹ್ಯಾಕ್ ಆಗುವ ಸಂದರ್ಭವಿರುತ್ತದೆ. ಆದರೆ ಇಲ್ಲಿ ಇಎಕ್ಸ್‌ಇ ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು ಅವಕಾಶವನ್ನೇ ನೀಡಲಾಗುವುದಿಲ್ಲ. ಜತೆಗೆ ಯಾವುದೇ ಕೋಡ್‌ಗಳನ್ನು ಜನರೇಟ್ ಮಾಡಲೂ ಬಿಡುವುದಿಲ್ಲವಾದ್ದರಿಂದ ಹ್ಯಾಕ್ ಮಾಡುವುದೂ ಕಷ್ಟ ಎನ್ನುತ್ತಾರೆ ನ್ಯಾಷ್‌ವಾಲ್‌ನ ಸಂಸ್ಥಾಪಕ ಹಾಗೂ ಸಿಇಒ ನರೇಂದ್ರ ಕುಮಾರ್.
- ಆದರ್ಶ ಅಂಚೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


