ಅಂತೂ ಬಂತು ಕ್ರೋಮ್‌ಬುಕ್!

ವಿದೇಶಗಳಲ್ಲಿ ಬಹಳ ಹಿಂದೆಯೇ ಗೂಗಲ್ ಕ್ರೋಮ್ ಆಪರೇಟಿಂಗ್ ಸಿಸ್ಟಂ ಹೊಂದಿರುವ ಲ್ಯಾಪ್‌ಟಾಪ್‌ಗಳು ಬಂದಿದ್ದವು. ಆದರೆ, ಇದೇ ಮೊದಲ ಬಾರಿಗೆ ಇಂಥ ಲ್ಯಾಪ್‌ಟಾಪ್‌ಗಳು 'ಕ್ರೋಮ್‌ಬುಕ್' ಹೆಸರಿನಲ್ಲಿ ಭಾರತದ ಮಾರುಕಟ್ಟೆಯನ್ನು ಪ್ರವೇಶಿವೆ.
ಗೂಗಲ್ ಕ್ರೋಮ್ ಆಪರೇಟಿಂಗ್ ಸಿಸ್ಟಂ ಹೊಂದಿರುವ ಲ್ಯಾಪ್‌ಟಾಪ್‌ಗಳನ್ನು ಎಚ್‌ಪಿ ಮತ್ತು ಏಸರ್ ಸಂಸ್ಥೆಗಳು ಮಾತ್ರ ಬಿಡುಗಡೆ ಮಾಡಿದ್ದು, ಎಚ್‌ಪಿ ಸಂಸ್ಥೆ ಕ್ರೋಮ್‌ಬುಕ್‌ಗೆ ರು. 26,990, ಏಸರ್ ಸಂಸ್ಥೆಯ ಕ್ರೋಮ್‌ಬುಕ್‌ಗೆ ರು. 22,999.
ಇಷ್ಟು ಕಡಿಮೆ ಹಣದ ಲ್ಯಾಪ್‌ಟಾಪ್ ಅಂದ ಮೇಲೆ ಅಷ್ಟೇಬಿಡಿ ಎಂದು ಮೂಗುಮುರಿಯಬೇಕಿಲ್ಲ. ಕಾರಣ ಇದರ ದರ ಕಡಿಮೆಯಾಗಲು ಇದರಲ್ಲಿ ಸಾಫ್ಟ್‌ವೇರ್ ಮತ್ತು ಹಾರ್ಡ್‌ಡಿಸ್ಕ್ ಅತ್ಯಂತ ಕಡಿಮೆ ಇರುವುದೇ ಕಾರಣ.
ಇದರಲ್ಲಿ ನಿಮ್ಮ ಮಾಮೂಲಿ ವಿಂಡೋಸ್ ಅಥವಾ ಅದರ ರೀತಿಯ ಆಪರೇಟಿಂಗ್ ಸಿಸ್ಟಂ ಇರುವುದಿಲ್ಲ. ಬದಲಾಗಿ ಕ್ರೋಮ್ ಬ್ರೌಸರ್ ಮತ್ತು ಅದರಲ್ಲಿರುವ ಕೆಲವೇ ಕೆಲವು ಅಪ್ಲಿಕೇಶನ್ ಮಾತ್ರ ಇರುತ್ತದೆ. ಇದರಿಂದಾಗಿ ನೀವು ಬಟನ್ ಒತ್ತಿದ 7-9 ಸೆಕೆಂಡ್‌ಗಳಲ್ಲಿ ಕ್ರೋಮ್‌ಬುಕ್ ಬಳಕೆಗೆ ಸಿದ್ಧವಾಗಿರುತ್ತದೆ.
ಆದರೆ, ಕ್ರೋಮ್‌ಬುಕ್‌ನಲ್ಲಿ ನೀವು ಸಾಮಾನ್ಯ ಲ್ಯಾಪ್‌ಟಾಪ್‌ನಲ್ಲಿ ಮಾಡಬಹುದಾದ ಎಲ್ಲ ಕೆಲಸಗಳನ್ನೂ ಮಾಡಲು ಸಾಧ್ಯವಿಲ್ಲ. ಯಾಕೆಂದರೆ, ಲ್ಯಾಪ್‌ಟಾಪ್‌ನಲ್ಲಿ ಮಾಡುವಂತೆ ಇದರಲ್ಲಿ ಫೋಟೋಶಾಪ್, ಮೈಕ್ರೋಸಾಫ್ಟ್ ಆಫೀಸ್ ಮುಂತಾದ ಸಾಫ್ಟ್‌ವೇರ್‌ಗಳನ್ನು ಇನ್‌ಸ್ಟಾಲ್ ಮಾಡಲು ಬರುವುದಿಲ್ಲ. ಬದಲಾಗಿ ಗೂಗಲ್ ಕ್ರೋಮ್ ಸ್ಟೋರ್‌ನಲ್ಲಿರುವ ಅಪ್ಲಿಕೇಶನ್‌ಗಳನ್ನು ಮಾತ್ರ ನೀವು ಬಳಸಬಹುದು. ಆದ್ದರಿಂದ ಇಂಟರ್‌ನೆಟ್ ಇಲ್ಲದೇ ಕ್ರೋಮ್‌ಬುಕ್ ಬಹುತೇಕ ನಿಷ್ಪ್ರಯೋಜಕವಾಗುತ್ತದೆ. ಆದರೆ, ಫೋಟೋಶಾಪ್‌ಗೆ ಬದಲಾಗಿ ಫೋಟೊ ಅಪ್ಲಿಕೇಶನ್ ಇದೆ. ಮೈಕ್ರೋಸಾಫ್ಟ್ ಆಫೀಸ್ ಬದಲಾಗಿ ಗೂಗಲ್ ಡಾಕ್ಸ್ ಇದೆ. ಇದರ ಜತೆಗೆ ಕೆಲವು ಅಪ್ಲಿಕೇಶನ್‌ಗಳನ್ನೂ ನೀಡಲಾಗಿದೆ.
ಆದರೆ, ಅಂತರ್ಜಾಲದ ಸಂಪರ್ಕದಿಂದ ಮಾಡಬಹುದಾದ ಎಲ್ಲ ಕೆಲಸವನ್ನೂ ಕ್ರೋಮ್‌ಬುಕ್ ನಿಮ್ಮ ಲ್ಯಾಪ್‌ಟಾಪ್‌ಗಿಂತ ಚೆನ್ನಾಗಿ ಮಾಡಬಲ್ಲದು. ಕ್ರೋಮ್‌ಬುಕ್‌ನಲ್ಲಿ ನೀವು ಯಾವುದೇ ಫೈಲ್‌ಗಳನ್ನು ಸೇವ್ ಮಾಡಿಡಲು ಬರುವುದಿಲ್ಲ. ಯಾಕೆಂದರೆ, ಇದರಲ್ಲಿ ದೊಡ್ಡ ಪ್ರಮಾಣದ ಸಂಗ್ರಹಣಾ ಸಾಮರ್ಥ್ಯವೇ ಇರುವುದಿಲ್ಲ. ಬದಲಾಗಿ ನೀವು ಏನನ್ನೇ ಮಾಡಿದರೂ ಅದು ಅಂತರ್ಜಾಲದಲ್ಲಿ ಅಂದರೆ ಕ್ಲೌಡ್‌ನಲ್ಲಿ ಸೇವ್ ಮಾಡುತ್ತದೆ. ಇದರಿಂದ ನೀವು ಏನನ್ನು ಬೇಕಾದರೂ, ಯಾವಾಗ ಬೇಕಾದರೂ ಕೇವಲ ಅಂತರ್ಜಾಲದ ಸಂಪರ್ಕದಿಂದ ಪಡೆಯಬಹುದು. ಇದಕ್ಕಾಗಿಯೇ ಕ್ರೋಮ್‌ಬುಕ್‌ನೊಂದಿಗೆ ಗೂಗಲ್ 100 ಜಿಬಿ ಕ್ಲೈಡ್ ಸಂಗ್ರಹವನ್ನು ಉಚಿತವಾಗಿ ನೀಡುತ್ತಿದೆ.
ನೀವು ಕಂಪ್ಯೂಟರ್‌ನಲ್ಲಿ ಕ್ರೋಮ್ ಬ್ರೌಸರ್ ಬಳಸುವವರಾಗಿದ್ದರೆ ಕ್ರೋಮ್‌ಬುಕ್‌ಗೆ ಬಹಳ ಬೇಗ ಹೊಂದಿಕೊಂಡುಬಿಡುತ್ತೀರಿ. ಅಂತರ್ಜಾಲದಲ್ಲೇ ಹೆಚ್ಚು ಕೆಲಸ ಮಾಡುವವರಾಗಿದ್ದರೆ ನಿಮಗೆ ಕ್ರೋಮ್‌ಬುಕ್ ಹೇಳಿಮಾಡಿಸಿದ್ದು. ಇಮೇಲ್, ಚಾಟ್, ಫೇಸ್‌ಬುಕ್, ಯುಟ್ಯೂಬ್‌ಗಳು ನಿಮ್ಮ ಬೆರಳತುದಿಗೆ ಸಿಲುಕುತ್ತವೆ. ಲ್ಯಾಪ್‌ಟಾಪ್‌ಗೆ ಹೋಲಿಸಿದರೆ ಇದು ಅತ್ಯಂತ ಹಗುರ. ಜತೆಗೆ ವೇಗವಾಗಿ ಕೆಲಸ ಮಾಡುತ್ತದೆ. ಆದ್ದರಿಂದ ಅಂತರ್ಜಾಲದಲ್ಲಿಯೇ ಹೆಚ್ಚು ಕೆಲಸ ಮಾಡುವವರಿಗೆ ಇದು ಅತ್ಯಂತ ಸೂಕ್ತ. ಆದರೆ, ಕಂಪ್ಯೂಟರ್‌ನಲ್ಲಿ ಅಂತರ್ಜಾಲದ ಸಂಪರ್ಕವಿಲ್ಲದೇ ಕೆಲಸಮಾಡುವವರಾಗಿದ್ದರೆ, ಗೇಮ್‌ಗಳನ್ನು ಆಡುವವರಾಗಿದ್ದರೆ, ತುಂಬ ಸಿನಿಮಾಗಳನ್ನು ಸೇವ್ ಮಾಡಿಟ್ಟು ನೋಡುವವರಾಗಿದ್ದರೆ ಕ್ರೋಮ್‌ಬುಕ್ ಇಷ್ಟವಾಗಲಾರದು. ಕ್ರೋಮ್‌ಬುಕ್‌ನಲ್ಲಿ ನೀವು ಕ್ರೋಮ್ ಬ್ರೌಸರ್‌ನಲ್ಲಿ ಲಭ್ಯವಿರುವ ಗೇಮ್‌ಗಳನ್ನು ಮಾತ್ರ ಆಡಬಹುದು. ಆ್ಯಂಗ್ರಿಬರ್ಡ್‌ನಂಥ ಕೆಲವು ಗೇಮ್‌ಗಳು ಮತ್ತು ಕೆಲವೇ ಕೆಲವು ಅಪ್ಲಿಕೇಶನ್‌ಗಳನ್ನು ಇಂಟರ್ನೆಟ್ ಸಂಪರ್ಕವಿಲ್ಲದೆಯೂ ಬಳಸಲು ಕ್ರೋಮ್‌ಬುಕ್‌ನಲ್ಲಿ ಅವಕಾಶವಿದೆ.
- ಬಟನ್ ಒತ್ತಿದ 7 ಸೆಕೆಂಡ್‌ಗಳಲ್ಲಿ ಕ್ರೋಮ್‌ಬುಕ್ ಬಳಕೆಗೆ ಸಿದ್ಧ.
- ಇಲ್ಲಿ ಫೋಟೋ ಶಾಪ್ ಬದಲಾಗಿ ಫೋಟೋ ಅಪ್ಲಿಕೇಶನ್ ಇದೆ.
- ಇಲ್ಲಿ ಯಾವುದೇ ಫೈಲುಗಳನ್ನು ಸೇವ್ ಮಾಡಲಾಗದು.
- ನೀವೇನೇ ಮಾಡಿದರೂ ಕ್ಲೌಡ್‌ನಲ್ಲಿ ಸೇವ್ ಆಗಿರುತ್ತದೆ.
- ಲ್ಯಾಪ್‌ಟಾಪ್‌ಗೆ ಹೋಲಿಸಿದರೆ ಇದು ಅತಿ ಹಗುರ.
- ಅತಿವೇಗದಲ್ಲಿ ಕಾರ್ಯೋನ್ಮುಖವಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


