ಬಯೋನಿಕ್ ಮ್ಯಾನ್ ಪ್ರದರ್ಶನ
ರಜನಿಕಾಂತ್ ಅವರ ರೋಬೋ ಚಿತ್ರದ 'ಚಿಟ್ಟಿ'ಯನ್ನೇ ಹೋಲುವ ಬಯೋನಿಕ್ ಮ್ಯಾನ್ನನ್ನು ವಾಷಿಂಗ್ಟನ್ನಲ್ಲಿ...

ವಾಷಿಂಗ್ಟನ್: ರಜನಿಕಾಂತ್ ಅವರ ರೋಬೋ ಚಿತ್ರದ 'ಚಿಟ್ಟಿ'ಯನ್ನೇ ಹೋಲುವ ಬಯೋನಿಕ್ ಮ್ಯಾನ್ನನ್ನು ವಾಷಿಂಗ್ಟನ್ನಲ್ಲಿ ಶುಕ್ರವಾರ ಪ್ರದರ್ಶಿಸಲಾಯಿತು.
ಲಂಡನ್ನ ಶ್ಯಾಡೋ ರೊಬೋಟ್ ಕಂಪನಿ ನಿರ್ಮಿಸಿದ ಈ ರೊಬೋಟ್ ಅನ್ನು ಸ್ಮಿತ್ಸೋನಿಯನ್ಸ್ ನ್ಯಾಷನಲ್ ಮ್ಯೂಸಿಯಂನಲ್ಲಿ ಇಡಲಾಗಿದೆ. ಸಿಂಥೆಟಿಕ್ ಅಂಗಾಂಗಗಳನ್ನು ಹೊಂದಿರುವ ಈ ಬಯೋನಿಕ್ ಮ್ಯಾನ್ ಮನುಷ್ಯರಂತೆ ಮಾತನಾಡುವ ಹಾಗೂ ನಡೆದಾಡುವ ಸಾಮರ್ಥ್ಯ ಹೊಂದಿದೆ.
6 ಅಡಿ ಎತ್ತರ, 77 ಕೆ.ಜಿ. ತೂಕದ ಈ ರೊಬೋಟ್ ಅನ್ನು ಬಯೋವುಡಿಕಲ್ ಆವಿಷ್ಕಾರಿಗಳಿಂದ ಸಾಲವಾಗಿ ಪಡೆದ 28 ಕೃತಕ ದೇಹಭಾಗಗಳಿಂದ ನಿರ್ಮಿಸಲಾಗಿದೆ. ಇವುಗಳಲ್ಲಿ ನರವ್ಯವಸ್ಥೆ, ಶ್ವಾಸಕೋಶಗಳು ಕೂಡ ಇವೆ. ಈ ರೊಬೋಟ್ ಚಲನೆಯಿಲ್ಲದ ಮುಖ ಹಾಗೂ ಕೃತಕ ಚರ್ಮವನ್ನು ಹೊಂದಿದೆ. ಇದನ್ನು ಕಂಪ್ಯೂಟರ್ ಮೂಲಕ ನಿಯಂತ್ರಿಸಲಾಗುತ್ತದೆ. ಕೈಕಾಲು ಚಲನೆಗೆ ಬ್ಲೂಟೂತ್ ಅನ್ನು ಬಳಸಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


