ಮೊಬೈಲ್‌ನಿಂದ ಅಪಾಯವಿಲ್ಲ!

ಮೊಬೈಲ್ ಈಗ ಅಪಾಯಕಾರಿ ವಸ್ತು ಅಲ್ಲವೇ ಅಲ್ಲವಂತೆ!
ಹೀಗಂತ ಮೊನ್ನೆ ಒಂದು ಸರ್ಟಿಫಿಕೇಟ್ ಬಂದಿದೆ. ಮೊಬೈಲ್‌ಗಳ ತರಂಗ ಪ್ರಸಾರಗಳಿಂದ ಯಾವುದೇ ಅಪಾಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಫ್ರೆಂಚ್ ಸರ್ಕಾರದ ಎಕ್ಸ್‌ಪರ್ಟ್ ಗ್ರೂಪ್‌ನ ಆಹಾರ, ಪರಿಸರಾತ್ಮಕ ಮತ್ತು ವೃತ್ತಿಪರ ಆರೋಗ್ಯ ಮತ್ತು ಸುರಕ್ಷೆ ಸಂಸ್ಥೆಗಳು ತಿಳಿಸಿವೆ.
ಬೇಸ್ ಸ್ಟೇಷನ್‌ಗಳು ಮೊದಲಾದವುಗಳಿಂದ ರೇಡಿಯೋ ಫ್ರೀಕ್ವೆನ್ಸಿ ಪರಿಸರದ ಮೇಲೆ ಹಬ್ಬುವುದರಿಂದಾಗಿ ಕ್ಯಾನ್ಸರ್ ಅಪಾಯವಿದೆ ಅಥವಾ ಇನ್ನಾವುದೇ ರೋಗದ ಅಪಾಯವಿದೆ ಎನ್ನುವುದಕ್ಕೆ ಇದುವರೆಗೆ ಯಾವುದೇ ಪುರಾವೆಗಳು ದೊರಕಿಲ್ಲ ಎಂದು ಅಧ್ಯಯನಗಳು ತಿಳಿಸಿವೆ. ಮೊಬೈಲ್ ಫೋನ್‌ಗಳನ್ನು ಬಳಸುವುದರಿಂದಾಗಿ ಮೆದುಳಿನ ಚಟುವಟಿಕೆ, ನಿದ್ರಾ ಪ್ರವೃತ್ತಿಗಳಲ್ಲಿ ಬದಲಾವಣೆಯಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದರು. ಈ ಕುರಿತು ಸಂಶೋಧನೆ ಮಾಡಲಾಗಿದೆ.
ಇದಕ್ಕೆ ಸಂಬಂಧಿಸಿದ ಇನ್ನೊಂದು ಬೆಳವಣಿಗೆಯಲ್ಲಿ ಫ್ರೆಂಚ್ ಸರ್ಕಾರದ ಏಜೆನ್ಸಿ ತಾನು ಹೊರಡಿಸಿರುವ ಶಿಫಾರಸ್ಸುಗಳಲ್ಲಿ ಹೀಗೆ ತಿಳಿಸಿದೆ. ಶರೀರದ ಕೆಲಸ ಕಾರ್ಯಗಳಲ್ಲಿ ಸಾಮಾನ್ಯವಾಗಿ ಸರಿಪಡಿಸಬಹುದಾದ ಪ್ರಭಾವಗಳು ಉಂಟಾಗಬಹುದು. ಇವುಗಳು ನಮ್ಮ ನಿತ್ಯದ ಕಾರ್ಯಚಟುವಟಿಕೆಯಿಂದ ಉಂಟಾಗಬಹುದು. ಹಾಗಿದ್ದರೂ ಜೀವಕೋಶಗಳ ಮಾದರಿಗಳಲ್ಲಿ, ಆರೋಗ್ಯದಲ್ಲಿ ಪರಿಣಾಮ ಬೀರುತ್ತವೆ ಎನ್ನುವುದಕ್ಕೆ ಯಾವುದೇ ಪುರಾವೆಗಳನ್ನು ಏಜೆನ್ಸಿ ಎಕ್ಸ್‌ಪರ್ಟ್‌ಗಳು ನೀಡುವಲ್ಲಿ ವಿಫಲರಾಗಿದ್ದಾರೆ.
ಸೆಲ್ಯೂಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಮಹಾನಿರ್ದೇಶಕರಾದ ರಾಜನ್ ಎಸ್. ಮ್ಯಾಥ್ಯೂಸ್ ಪ್ರಕಾರ, ಎಲೆಕ್ಟ್ರೋಮ್ಯಾಗ್ನೆಟಿಕ್ ಕ್ಷೇತ್ರಗಳೊಂದಿಗೆ ಸಂಪರ್ಕ ಹೊಂದುವುದರಿಂದಾಗಿ ಕ್ಯಾನ್ಸರ್ ಅಥವಾ ಇನ್ನಿತರ ಕಾಯಿಲೆಗಳ ಅಪಾಯ ಹೆಚ್ಚುತ್ತದೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂಬುದನ್ನು ಡಬ್ಲ್ಯುಎಚ್‌ಒ ಎತ್ತಿ ಹಿಡಿದಿರುವುದು ಸಂತೋಷದ ವಿಚಾರವಾಗಿದೆ. ಡಬ್ಲ್ಯುಎಚ್‌ಒ ಮತ್ತು ಫ್ರೆಂಚ್ ಸಲಹೆಗಳು ಮೊಬೈಲ್ ಫೋನ್ ಉದ್ಯಮದ ತರಂಗಗಳ ಹೊರಹೊಮ್ಮುವಿಕೆ ಮಟ್ಟ ಸುರಕ್ಷಿತವಾಗಿವೆ ಎಂದು ಸ್ಪಷ್ಟವಾಗಿ ತಿಳಿಸಿವೆ. ಇವುಗಳು ಮೊಬೈಲ್‌ಗಳು ಮತ್ತು ಬೇಸ್ ಸ್ಟೇಷನ್‌ಗಳ ಪ್ರಭಾವಗಳಲ್ಲಿನ ವ್ಯತ್ಯಾಸಗಳನ್ನೂ ತಿಳಿಸಿವೆ.
ಭಾರತೀಯ ಮೊಬೈಲ್ ಉದ್ಯಮ ದೂರ ಸಂಪರ್ಕ ಇಲಾಖೆ ಕಡ್ಡಾಯವಾಗಿ ಹಾಕಿರುವ ನಿಯಮಾವಳಿಗಳನ್ನು ಒಪ್ಪಿ ಅನುಸರಿಸುತ್ತಿದೆ. ಮೊಬೈಲ್ ಟವರ್‌ಗಳಿಂದ ಹೊರ ಹಾಕಲ್ಪಡುವ ಇಎಂಎಫ್ ಎಮಿಶನ್‌ಗಳಿಂದ ಆರೋಗ್ಯಕ್ಕೆ ಅಪಾಯಗಳಿವೆ ಎಂದು ಇದುವರೆಗೆ ಯಾವುದೇ ವೈಜ್ಞಾನಿಕ ಪುರಾವೆಗಳು ಹೇಳಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಭಾರತದಲ್ಲಿ ದೂರ ಸಂಪರ್ಕ ಇಲಾಖೆ ತೀರಾ ಕಡಿಮೆ ಮಟ್ಟವನ್ನು ವಿಧಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


