ಮಿ ಚಾಂಪ್ ಪ್ರವೇಶ

ಎಚ್‌ಸಿಎಲ್ ಇನ್‌ಫೋ ಸಿಸ್ಟಮ್ 'ಮಿ ಚಾಂಪ್' ಎಂಬ ಟ್ಯಾಬ್ಲೆಟನ್ನು ಬಿಡುಗಡೆ ಮಾಡುತ್ತಿದೆ. 'ಕಿಡ್ಸ್ ಆರ್ ಚಾಂಪ್' ಎಂಬ ವಿದ್ಯಾರ್ಥಿ ವೇತನ ಯೋಜನೆಯನ್ನು ಪ್ರಾಯೋಜಿಸುತ್ತಿದೆ. ಇದರ ವಿಶೇಷವೆಂದರೆ, ಮಕ್ಕಳಿಗಾಗಿ ವಿಶೇಷವಾಗಿ ಸೃಷ್ಟಿಸಿದ ಹೊಸ ಮಾದರಿಯ ಟ್ಯಾಬ್ಲೆಟ್ ಇದಾಗಿದೆ. ಆಕರ್ಷಕ ವಿನ್ಯಾಸ ಮತ್ತು ಉತ್ತಮ ಬಹು ಮಾಧ್ಯಮಗಳನ್ನು ಒಳಗೊಂಡಿದೆ. ಮಕ್ಕಳ ಪುಸ್ತಕಗಳು, 500ಕ್ಕಿಂತಲೂ ಹೆಚ್ಚು ಸಾಧನಗಳಿಗೆ ಉಚಿತ ಲಭ್ಯತೆಯನ್ನೊಳಗೊಂಡಿದೆ.
ವಿಶಿಷ್ಟ ಗ್ರಾಫಿಕ್ ವಿನ್ಯಾಸದೊಂದಿಗೆ ಮಕ್ಕಳ ಜ್ಞಾನ ಗ್ರಹಣ ಸಾಮರ್ಥ್ಯ ವರ್ಧಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ತಂದೆ ತಾಯಿಗಳು ಮಕ್ಕಳ ಚಟುವಟಿಕೆಯನ್ನು ಗಮನಿಸುವ ಅನ್ವೇಷಕ ವ್ಯವಸ್ಥೆಯೂ ಇದರಲ್ಲಿದೆ. ಟ್ಯಾಬ್ಲೆಟ್ 11 ಸ್ಥಳೀಯ ಭಾಷೆಗಳ ಸೌಲಭ್ಯವನ್ನು ಒಳಗೊಂಡಿದೆ. ಈ ಉಪಕರಣವು ವೀಡಿಯೋ ಸಂಭಾಷಣೆಗೆ ಅನುಕೂಲವಾಗುವಂತೆ ಹಿಂಭಾಗದಲ್ಲಿ 2 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿದೆ. 1 ಜಿಬಿ ರ್ಯಾಮ್ 1 ಜಿಬಿ ಆಂತರಿಕ ಮೆಮೋರಿ, 32 ಜಿಬಿಗಳನ್ನು ಮೆಮೊರಿ ಜೋಡಿಸಬಹುದಾದ ಸ್ಲಾಟ್ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


