ಕನ್ನಡಿ ಬಿಂಬ ಉಲ್ಟಾ ಏಕಿರಲ್ಲ?

ಎಂಥ ಉಲ್ಟಾ ಪ್ರಶ್ನೆ ಎಂದೆನಿಸುತ್ತದೆಯೇ? ಹೌದು, ವೈಜ್ಞಾನಿಕ ಜಗತ್ತಿನಲ್ಲಿ ಇಂಥ ಪ್ರಶ್ನೆಗಳು ಮೂಡಲೇಬೇಕು ಬಿಡಿ. ನೀವು ಕನ್ನಡಿ ಮುಂದೆ ನಿಂತಾಗ ಎಡಗೈ ಬಲಗೈ ಆಗಿ, ಬಲಗೈ ಎಡಗೈ ಆಗಿ ಕಾಣಿಸುತ್ತದೆ ಅಲ್ಲವೇ? ಇದನ್ನು ನೀವು ಗಮನಿಸಿರಲೇಬೇಕು. ಗೊತ್ತಾಗಲಿಲ್ಲ ಎಂದಾದರೆ ಕೈಗೆ ವಾಚ್ ಕಟ್ಟಿಕೊಂಡು ನೋಡಿ, ಅರಿವಾಗುತ್ತದೆ. ಆದರೆ ಕನ್ನಡಿಯಲ್ಲಿ ಈ ರೀತಿ ವ್ಯತ್ಯಾಸವಾಗೋದು, ನಾವು ಮುಂದೆ ನಿಂತಾಗ ಅದೇ ಕನ್ನಡಿ ನಮ್ಮ ತಲೆ ಕೆಳಗೆ, ಕಾಲು ಮೇಲೆ ಕಾಣಿಸುವ ಹಾಗೆ ಏಕೆ ಮಾಡಲ್ಲ ಎಂಬ ಪ್ರಶ್ನೆ ಮೂಡಬೇಕು ಅಲ್ಲವೇ?
ವಿಚಿತ್ರ ಎಂದರೆ, ಇದು ಈಗಿನ ಪ್ರಶ್ನೆ ಅಲ್ಲವಂತೆ. 2300 ವರ್ಷಗಳಿಂದಲೂ ಈ ಪ್ರಶ್ನೆ ಚಾಲ್ತಿಯಲ್ಲಿದೆ. ಅಂದರೆ ಅರಿಸ್ಟಾಟಲ್ ಕಾಲದಿಂದಲೂ ಇದೆ.
ಹೋಗಲಿ ಬಿಡಿ, ಈ ಪ್ರಶ್ನೆಗೆ ಉತ್ತರ ಮಾತ್ರ ಸರಳವಿದೆ. ಕನ್ನಡಿ ಏನನ್ನೂ ಉಲ್ಟಾ ಮಾಡಲ್ವಂತೆ. ಹೇಗೆ ಅಂತೀರಾ? ಎಡವನ್ನು ಬಲ ಮಾಡೋದು, ಬಲವನ್ನು ಎಡ ಮಾಡೋದು ಅದರ ಕೆಲಸ ಅಲ್ಲವಂತೆ. ಅದು ಪ್ರತಿಫಲನಗೊಳ್ಳುವುದರಿಂದ ಹಾಗೆ ಕಾಣಿಸುತ್ತದೆಯಂತೆ. ಹೀಗಾಗಿ ನಾವು ಹೇಗೆ ನಿಂತಿರುತ್ತೇವೆಯೋ ಅದರ ಪ್ರತಿಫಲನ ಅದರಲ್ಲಿ ಮೂಡುತ್ತದೆಯೋ ಹೊರತು, ಬದಲಾವಣೆ ಮಾಡಲ್ಲ ಎಂಬುದು ಸತ್ಯದ ಸಂಗತಿಯಷ್ಟೇ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


