ಬೆಳಕಿನ ಗಿಡ
ಹೀಗೊಂದು ಬ್ರೈಟ್ ಐಡಿಯಾ... ಮುಂದೊಂದು ದಿನ ರಸ್ತೆ ಬದಿಯಲ್ಲಿ ದೀಪಗಳ ಬದಲಾಗಿ ಬೆಳಕುಕೊಡುವ ಮರಗಳನ್ನೇ ನೆಟ್ಟರೆ!!?
ಹೇಗಿರುತ್ತೆ ಅಲ್ವಾ...?
ಆ ಊಹೆ ನಿಜವಾಗುವ ದಿನಗಳು ಇನ್ನು ಜಾಸ್ತಿ ದೂರವಿಲ್ಲ. ಕ್ಯಾಲಿಫೋರ್ನಿಯಾದ ವಿಜ್ಞಾನಿಗಳು ಸಂಶೋಧನೆ ಮೂಲಕ ಇಂಥದ್ದೊಂದು ಅಚ್ಚರಿಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ದೊಡ್ಡದಾಗಿ ಬೆಳೆಯುವಂಥ ಈ ಗಿಡಗಳನ್ನು ರಸ್ತೆ ಬದಿಯಲ್ಲಿ ನೆಟ್ಟು ಬೆಳಕನ್ನು ನೀಡುವಂಥ ವ್ಯವಸ್ಥೆಯನ್ನು ಮಾಡಬಹುದಂತೆ.
ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಸ್ಟ್ಯಾಮ್‌ಫೋರ್ಡ್ ಅವರ ನೇತೃತ್ವದ ತಂಡ ಈ ಸಂಶೋಧನೆ ನಡೆಸಿದೆ. ಕಗ್ಗತ್ತಲಲ್ಲಿ ಮಿರಿ ಮಿರಿ ಮಿಂಚುವ ಈ ಗಿಡಗಳು ಬಹಳಷ್ಟು ಬೆಳಕನ್ನು ನೀಡಬಲ್ಲವು ಎಂದು ಈ ತಂಡ ಹೇಳಿದೆ.
ಇವರ ಈ ಸಂಶೋಧನೆಗೆ ಉತ್ತೇಜನ ಮಿಂಚುಹುಳುಗಳಂತೆ. ರಾತ್ರಿ ವೇಳೆ ಮಿಂಚುಹುಳುಗಳು ಬೆಳಕು ನೀಡುವುದನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡಿರುವ ಇವರು, ಇದೇ ರೀತಿಯಲ್ಲೇ ಮರಗಳಿಂದ ಏಕೆ ಬೆಳಕನ್ನು ಬಯಸಬಾರದು ಎಂಬ ಆಶಾಭಾವದೊಂದಿಗೆ ಸಂಶೋಧನೆಗಿಳಿದರಂತೆ.
ಈ ಗಿಡಗಳು ಬಯೋವುನ್ ಸೈನ್ಸ್‌ನಂತೆ ತಮ್ಮ ದೇಹದಿಂದಲೇ ನೈಸರ್ಗಿಕವಾಗಿ ಬೆಳಕನ್ನು ಉತ್ಪಾದಿಸಿ, ರಾತ್ರಿ ಬೆಳಕನ್ನು ಹೊರಸೂಸುತ್ತವೆ. ಈ ಬೆಳಕಿಗೆ ಕಾರಣ ಲುಸಿಫೆರಾಸ್ ಎಂಬ ಎಂಜಿಮೋಗಳು. ಈ ಎಂಜಿಮೋಗಳನ್ನು ಗಿಡಗಳ ದೇಹದೊಳಗೆ ಸೇರಿಸಿ ಬೆಳೆಸುವ ಮೂಲಕ ಹೀಗೆ ಬೆಳಕನ್ನು ಪಡೆಯಬಹುದಂತೆ.
ಈ ಲುಸಿಫೆರಾಸ್ ಅನ್ನು ಲಿಕ್ವಿಡ್ ರೂಪದ ಆಗ್ರೋ ಬ್ಯಾಕ್ಟೀರಿಯಾಗಳನ್ನಾಗಿ ಮಾಡಿ ಗಿಡದೊಳಗೆ ಹಾಯಿಸಲಾಗುತ್ತದೆ. ಈ ಆಗ್ರೋ ಬ್ಯಾಕ್ಟೀರಿಯಾಗಳು ಲುಸಿಫೆರಾಸ್ ಅನ್ನು ಗಿಡದೊಳಗೆ ಸೇರಿಸಿ ಬೆಳೆಯುವಂತೆ ಮಾಡುತ್ತವೆ ಎಂದು ಈ ಸಂಶೋಧನೆ ಹೇಳಿದೆ.
ಈಗಾಗಲೇ ಬೆಳಕನ್ನು ನೀಡುವ ಚಿಕ್ಕ ಗಿಡಗಳನ್ನು ರೂಪಿಸುವಲ್ಲಿ ಯಶಸ್ವಿಯಾಗಿರುವ ವಿಜ್ಞಾನಿಗಳು, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಮರಗಳನ್ನು ಬೆಳೆಸುವ ಗುರಿಹೊಂದಿದ್ದಾರೆ.
ಆದರೆ, ಹೊಗೆಯಾಡುತ್ತಿರುವ ಪ್ರಶ್ನೆ ಅದಲ್ಲ... ಹಸಿರು ಹಸಿರಾಗಿರುವ ಮರಗಳನ್ನೇ ರಸ್ತೆ ಅಗಲೀಕರಣದ ನೆಪವೊಡ್ಡಿ ಕಡಿಯುತ್ತಿರುವ ನಾವು ಆ ಬೆಳಕಿನ ಗಿಡವನ್ನು ಉಳಿಸುತ್ತೇವಾ ಅಥವಾ ಬೆಳೆಸುತ್ತೇವಾ?
- ಮಂಜುನಾಥ್ ಎಸ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

