ಕೊಬ್ಬು ಕಳ್ಕೊಂಡ್ರೆ ಎಲ್ಲೋಗುತ್ತೆ?
ದಪ್ಪ ಇರೋರು ಯಾವ್ಯಾವುದೋ ಕಸರತ್ತು ಮಾಡಿ, ಬೇಗನೆ ತೆಳ್ಳಗಾಗಿ ಬಿಡ್ತಾರೆ ಅನ್ನೋದು ಗೊತ್ತೇ ಇದೆ. ಹಾಗಾದ್ರೆ ಅವರ ದೇಹದೊಳಗಿದ್ದ ..

ದಪ್ಪ ಇರೋರು ಯಾವ್ಯಾವುದೋ ಕಸರತ್ತು ಮಾಡಿ, ಬೇಗನೆ ತೆಳ್ಳಗಾಗಿ ಬಿಡ್ತಾರೆ ಅನ್ನೋದು ಗೊತ್ತೇ ಇದೆ. ಹಾಗಾದ್ರೆ ಅವರ ದೇಹದೊಳಗಿದ್ದ ಕೊಬ್ಬು ಎಲ್ಲಿಗೆ ಹೋಯ್ತು? ಇದುವರೆಗೆ ಇಂಥ ಸೀರಿಯಸ್ ಪ್ರಶ್ನೆ ಬಗ್ಗೆ ತುಂಬಾ ಜನ ಯೋಚಿಸಿಯೇ ಇರಲಿಲ್ಲ ಅನ್ಸುತ್ತೆ ಬಿಡಿ.
ದೇಹದಲ್ಲಿ ಮೊದಲು ಇಂಗಾಲದ ಡೈ ಆಕ್ಸೈಡ್ ಮತ್ತು ನೀರಿನ ಶೇಖರಣೆಯಾಗುತ್ತದೆ. ಇವೆರಡು ಅಂಶಗಳು ಹಲವು ರೂಪಾಂತರ ಪಡೆದು ಫ್ಯಾಟ್ ಆಗಿ ಬದಲಾಗುತ್ತದೆ. ಫ್ಯಾಟ್ ಬಿಳಿ ಬಣ್ಣದ ಅಡಿಪೋಸ್ ಟಿಶ್ಯು ರೀತಿಯಲ್ಲಿ ಇರುತ್ತೆ. ಇದರಲ್ಲಿ ಆ್ಯಸಿಡ್ ಕೂಡ ಇರುತ್ತದೆ. ಅಲ್ಲದೆ ಟ್ರಿಗ್ಲಿಸಿರೈಡ್ಸ್ ಆಗಿ ಸಂಗ್ರಹವಾಗಿ, ದೇಹಕ್ಕೆ ಶಕ್ತಿ ಬೇಕಾದಗಲೆಲ್ಲ ನೀಡುತ್ತೆ.
ನೀವು ತೂಕ ಕಳೆದುಕೊಳ್ಳುವುದು ತೆಗೆದುಕೊಳ್ಳುವ ಆಹಾರ ಎಲ್ಲಾ ರೀತಿಯ ಶಕ್ತಿಯನ್ನು ಒದಗಿಸದೇ ಇದ್ದಾಗ. ಅಂದರೆ ಈ ಆಹಾರದಲ್ಲಿ ಫ್ಯಾಟಿ ಆ್ಯಸಿಡ್ ಇದ್ದು ಅದು ರಕ್ತಕ್ಕೆ ಹೋಗಿ ಶಕ್ತಿಯಾಗಿ, ಕೊಬ್ಬಾಗಿ ಮಾರ್ಪಾಡಾಗಬೇಕು.
ಒಂದು ವೇಳೆ ಅತ್ಯುತ್ತಮವಾಗಿ ಆಮ್ಲಜನಕ ದೊರೆತಲ್ಲಿ ಸರಣಿ ರೀತಿಯ ಕಿಣ್ವಗಳು ಕೊಬ್ಬನ್ನು ಇಂಗಾಲದ ಡೈ ಆಕ್ಸೈಡ್, ನೀರು ಮತ್ತು ಅಡೆನೋಸೈನ್ ಟ್ರಿಫೋಸ್ಪೇಟ್ ಅನ್ನಾಗಿ ಮಾರ್ಪಡಿಸುತ್ತವೆ. ಇವು ಸ್ನಾಯು, ಲಿವರ್ ಮತ್ತು ಇತರೆ ಕಣಗಳಿಗೆ ಶಕ್ತಿ ತುಂಬುತ್ತವೆ.
ಈ ಅಜೆನೋಸೈನ್ ಟ್ರಿಫೋಸ್ಪೇಟ್(ಎಟಿಪಿ)ನ ಅಂಗಗಳು ದೇಹದ ಒಳಗೆ ಮತ್ತೆ ಉಪಯೋಗವಾಗುತ್ತಿದ್ದರೆ, ಹೊಸ ಎಟಿಪಿಗಳು ರಚನೆಯಾಗುತ್ತಿರುತ್ತವೆ. ಈ ಚಟುವಟಿಕೆಯ ಕೊನೆಯ ಭಾಗದಲ್ಲಿ ಕೊಬ್ಬಿನಲ್ಲಿನ ಅಣುಗಳು ಉಸಿರು, ಬೆವರು ಮತ್ತು ಮೂತ್ರದ ಮೂಲಕ ದೇಹದಿಂದ ಹೊರಹೋಗುತ್ತವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


