100000 ವರ್ಷಗಳ ಆಚೆ...

ಸುಮ್ಮನೆ ಹೀಗೆ ಮಾನವನ ಬೆಳವಣಿಗೆಗೆ ಸಂಬಂಧಿಸಿದಂತೆ ಕಲ್ಪಿಸಿಕೊಳ್ಳಿ. ಸಾವಿರ, ಸಾವಿರ ವರ್ಷಗಳ ಹಿಂದೆ ನಮ್ಮ ಮೂಲಪುರುಷರು ಹೇಗಿದ್ದರು? ಈಗ ನಾವು ಹೇಗಿದ್ದೇವೆ..?
ವಿಕಾಸದ ಹಾದಿಯಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ ಅಲ್ಲವೇ... ಮಂಗನಿಂದ ಮಾನವ ಎಂಬ ಕಲ್ಪನೆಯೊಂದಿಗೆ ವಿಜ್ಞಾನ ನಿಂತಿರುವುದಲ್ಲವೇ?
ಈಗ ಕಲ್ಪಿಸಿಕೊಳ್ಳುವ ವಿಚಾರಕ್ಕೆ ಮತ್ತೆ ಬರುವ. 1,00,000 ವರ್ಷಗಳ ಬಳಿಕ ನಮ್ಮ ತಲೆಮಾರಿನ ಮಂದಿ ಹೇಗಿರಬಹುದು? ಈ ಪ್ರಶ್ನೆ ತಲೆಗೇ ಬಂದಿರಲಿಲ್ಲ ಅಲ್ಲವೇ...! ಹೌದು, ನಾವು ಅಂದುಕೊಂಡಿರುವುದು ಮಾನವನ ವಿಕಾಸವಾದ ಇಲ್ಲಿಗೆ ನಿಂತು ಬಿಟ್ಟಿದೆ. ಮುಂದಕ್ಕೆ ಹೋಗಲ್ಲ, ಮಾನವರಲ್ಲಿ ಬದಲಾವಣೆಯಾಗಲು ಇನ್ನೇನೂ ಇಲ್ಲ ಅಂಥ.
ಆದರೆ ಅಮೆರಿಕದ ಕಲಾವಿದ ಮತ್ತು ಸಂಶೋಧಕ ನಿಕೋಲೆ ಲ್ಯಾಮ್ ಇದಕ್ಕೆ ಹೊರತಾದ ಒಂದು ಊಹೆ ಮಾಡಿದ್ದಾರೆ. ಲಕ್ಷ ವರ್ಷಗಳ ಬಳಿಕ ನಾವು ಹೇಗಿರಬಹುದು ಎಂಬ ಬಗ್ಗೆ ಚಿತ್ರ ಸಮೇತ ವಿವರಣೆ ನೀಡಿದ್ದಾರೆ.
ದೊಡ್ಡ ಹಣೆ, ಚಪ್ಪಟೆ ಮುಖ, ಸಾಸರ್‌ನಂಥ ಕಣ್ಣು... ಇದು ಲಕ್ಷ ವರ್ಷಗಳ ನಂತರ ಮನುಷ್ಯ ಕಾಣವು ಬಗೆಯಂತೆ.
ಸಾವಿರ ಸಾವಿರ ವರ್ಷಗಳ ಹಿಂದೆ ನಮ್ಮ ಪೂರ್ವಿಕರು ಹೇಗಿದ್ದರು ನೋಡಿ, ಚಿಕ್ಕ ತಲೆ, ಚಿಕ್ಕ ಕಣ್ಣು, ಬಾಗಿದ ಬೆನ್ನು, ಜೊತೆಗೊಂದು ಬಾಲ... ಹೀಗೆ. ಆದರೆ ತದನಂತರದಲ್ಲಿ ಇದೆಲ್ಲಾ ಹೋಗಿ, ಸ್ವಲ್ಪ ಸ್ವಲ್ಪವೇ ದಪ್ಪ ತಲೆ, ಅಗಲವಾದ ಕಣ್ಣುಗಳು, ನೇರವಾದ ಬೆನ್ನು, ಕಣ್ಮರೆಯಾದ ಬಾಲ... ಹೀಗೆ ಬದಲಾದೆವು.
ಕುಲಾಂತರಿ ತಂತ್ರಜ್ಞಾನದ ಬಗ್ಗೆ ಅಧ್ಯಯನ ನಡೆಸುತ್ತಿರುವ ನಿಕೋಲೆ ಲ್ಯಾಮ್‌ಗೆ ಇದು ಆಸಕ್ತಿಕರ ವಿಷಯವಂತೆ. ಲಕ್ಷ ವರ್ಷಗಳಾದ ಮೇಲೆ ಮಾನವ ಹೇಗಿರಬಹುದು ಎಂಬ ಕುತೂಹಲದಿಂದ ಈ ಅಧ್ಯಯನ ಕೈಗೊಂಡಿದ್ದಾರೆ. ಅವರು ಈವರೆಗೆ ಮಾನವನಲ್ಲಿ ಆಗಿರುವ ಬದಲಾವಣೆಗಳನ್ನು ಗಮನಿಸಿಕೊಂಡೇ ಈ ಅಧ್ಯಯನಕ್ಕೆ ಇಳಿದಿದ್ದಾರೆ.
ಇವರ ಪ್ರಕಾರ ಮೆದುಳು ಇನ್ನೂ ಬೆಳವಣಿಗೆಯಾಗಿ ಹಣೆ ಭಾಗ ದೊಡ್ಡದಾಗುತ್ತಾ ಹೋಗುತ್ತಂತೆ. ಕಣ್ಣುಗಳು ಅಗಲವಾಗುತ್ತಾ ಹೋಗುತ್ತವೆಯಂತೆ. ಮುಖದಲ್ಲಿ ಅಗಾಧ ಬದಲಾವಣೆಯಾಗಿ ಚಪ್ಪಟೆಯಾಗುತ್ತೆ ಅಂತಾರೆ.
ಈ ಬದಲಾವಣೆಗೆ ಹವಾಮಾನದಲ್ಲಿನ ಬದಲಾವಣೆಯೂ ಕಾರಣವಾಗಬಹುದು ಎಂದು ಲ್ಯಾಮ್ ಹೇಳುತ್ತಾರೆ. ಹವಾಮಾನದಲ್ಲೂ ಭಾರಿ ಬದಲಾವಣೆಯಾಗುವುದರಿಂದ ಮನುಷ್ಯನ ರೂಪದಲ್ಲಿ ಬದಲಾವಣೆಯಾಗುತ್ತದೆ ಎನ್ನುತ್ತಾರೆ.
- ಬಿಂದು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


