4ಜಿ ಸೇವೆ ಶುರು

ದೇಶದ 4 ಮಹಾನಗರಗಳಲ್ಲಿ ಪ್ರತಿಷ್ಠಿತ ಏರ್‌ಟೆಲ್ ಸಂಸ್ಥೆಯ 4ಜಿ ಸಂಪರ್ಕ ಸೇವೆ ಆರಂಭಿಸಿದೆ.
ಬೆಂಗಳೂರು, ಕೋಲ್ಕತ್ತಾ, ಪುಣೆ ಹಾಗೂ ಚಂಡೀಗಡದಲ್ಲಿ ಮಾತ್ರ 4ಜಿ ಸೇವೆ ದೊರೆಯುತ್ತಿದೆ. ಮೊಬೈಲ್, ಡಾಟಾ ಕನೆಕ್ಷನ್ ಅಥವಾ ಸ್ಥಿರ ದೂರವಾಣಿ ಮೂಲಕವೂ ಇದನ್ನು ಪಡೆಯಬಹುದು. ಆದರೆ ಇತ್ತೀಚಿನ ಕೆಲ ಮೊಬೈಲ್‌ಗಳಲ್ಲಿ ಮಾತ್ರ 4ಜಿ ಸೇವೆ ಲಭ್ಯವಿದೆ. ಇಲ್ಲವಾದಲ್ಲಿ 3ಜಿ ಸಂಪರ್ಕವೇ ಸಿಗುತ್ತದೆ.
ಪ್ರಸ್ತುತ 2ಜಿ ಸೇವೆ ಬಳಸುತ್ತಿರುವವರಿಗೆ 4ಜಿಯೂ ಹೊಸ ಆವಿಷ್ಕಾರದಂತೆ ಕಾಣಬಹುದು. ಸಾಮಾನ್ಯ ಬಳಕೆ ಮಾಡುವಾಗ 3ಜಿ ಮತ್ತು 4ಜಿಯಲ್ಲಿ ಯಾವುದೇ ಬದಲಾವಣೆ ಕಾಣುವುದಿಲ್ಲ. ಆದರೆ ಫೈಲ್ ಡೌನ್‌ಲೋಡ್ ಅಥವಾ ಅಪ್‌ಲೋಡ್ ಮಾಡುವಾಗ ನಿಜವಾದ ಇಂಟರ್ನೆಟ್‌ನ ವೇಗ ಗೊತ್ತಾಗುತ್ತದೆ. ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ 15 ಎಂಬಿಯಿಂದ- 30 ಎಂಬಿವರೆಗೆ ಪ್ರತಿ ಸೆಕೆಂಡ್ ವೇಗ ದೊರೆಯುತ್ತದೆ.
ಆದರೆ 4ಜಿಯನ್ನು ಸಾಮಾನ್ಯ ಬಳಕೆದಾರರು ಬಳಸಲು ತುಸು ತುಟ್ಟಿಯಾಗಬಹುದು. ತಿಂಗಳಿಗೆ 10 ಜಿಬಿ ಪ್ಲ್ಯಾನ್ ಪಡೆಯಲು ಸುಮಾರು ರು. 1500 ಹಣ ನೀಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


