ವಿಜ್ಞಾನ-ತಂತ್ರಜ್ಞಾನ

ಡಿವೈಡ್ ಆ್ಯಂಡ್ ರೂಲ್

ಡಿವೈಡ್ ಆ್ಯಂಡ್ ರೂಲ್
Published On :

ನಿಮ್ಮ ಮನೆಯನ್ನು ಅಚ್ಚುಕಟ್ಟಾಗಿ ಜೋಡಿಸಿದಂತೆ ಜಿ-ಮೇಲ್ ಇನ್‌ಬಾಕ್ಸನ್ನು ಕೂಡ ಚೆಂದವಾಗಿ ಜೋಡಿಸಲು ಗೂಗಲ್ ಸಂಸ್ಥೆ ಅವಕಾಶ ಮಾಡಿಕೊಡುತ್ತಿದೆ.
ಸ್ನೇಹಿತರು, ಕುಟುಂಬ ಸದಸ್ಯರು ಅಥವಾ ವೈಯಕ್ತಿಕ ಮಿಂಚಂಚೆಗಳಿಗೆ ಬೇರೆ ಬೇರೆ ವ್ಯವಸ್ಥೆ ಮಾಡಿ, ಅವು ನೇರವಾಗಿ ಅಲ್ಲೇ ಹೋಗಿ ಬೀಳುವಂತೆ ಮಾಡಬಹುದು. ಆ ಮಿಂಚಂಚೆಗಳು ನಿಮ್ಮ ಪ್ರಾಥಮಿಕ ಇನ್‌ಬಾಕ್ಸ್‌ನಲ್ಲಿ ಕಾಣುವುದಿಲ್ಲ. ಇನ್ನು ನಮಗೆ ಇಷ್ಟವಿಲ್ಲದಿದ್ದರೂ ಸಾಕಷ್ಟು ವಾಣಿಜ್ಯ ವೆಬ್‌ತಾಣಗಳಿಂದ ಮಿಂಚಂಚೆ ಬರುತ್ತಲೇ ಇರುತ್ತದೆ. ಇದನ್ನೆಲ್ಲ ಕಮರ್ಷಿಯಲ್ ಇನ್‌ಬಾಕ್ಸ್‌ಗೆ ಹೋಗುವಂತೆ ವ್ಯವಸ್ಥೆ ಮಾಡಬಹುದು.
ಈಗ ಇನ್‌ಬಾಕ್ಸ್ ಅಥವಾ ಸ್ಪಾಮ್ ಬಿಟ್ಟು ಬೇರೆ ಅವಕಾಶವೇ ಇಲ್ಲ. ಇನ್ನು ಒಟ್ಟು 5 ಟ್ಯಾಬ್‌ಗಳನ್ನು ಸೃಷ್ಟಿಸಿ ಮೇಲ್‌ಗಳನ್ನು ವಿಂಗಡಿಸಿಕೊಳ್ಳಬಹುದು. ಕಮಿರ್ಷಿಯಲ್, ವೈಯಕ್ತಿಕ, ಸೋಷಿಯಲ್ ಸೇರಿದಂತೆ ಒಟ್ಟು 5 ಲೇಬಲ್‌ಗಳನ್ನು ಮಾಡಿಕೊಂಡು ನಮ್ಮದೇ ಆದ ರೀತಿಯ ಇನ್‌ಬಾಕ್ಸ್ ಸಿದ್ಧಪಡಿಸಿಕೊಳ್ಳಬಹುದು.
ಇದರಿಂದ ನಮ್ಮ ಆದ್ಯತೆಯ ಮೇರೆಗೆ ಬೇಕಾದ ಹಾಗೆ ಇನ್‌ಬಾಕ್ಸ್ ನಿರ್ವಹಿಸಬಹುದು. ಆದರೆ ಈಗ ನಮ್ಮ ಮೇಲ್ ಐಡಿಯೇ ನಮ್ಮನ್ನು ನಿರ್ವಹಿಸುವಂತಿದೆ. ಕೆಲವೊಮ್ಮೆ ಬಂದು ಬಂದುಬೀಳುವ ಮೇಲ್‌ಗಳಿಂದ ಅಸಹನೆಯೂ ಆಗುತ್ತದೆ. ಇನ್ನು ಮುಂದೆ ಹಾಗಾಗದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.