ವಿಜ್ಞಾನ-ತಂತ್ರಜ್ಞಾನ

ರು. 7,499ಕ್ಕೆ ಎಲ್‌ಇಡಿ ಟಿವಿ!

ರು. 7,499ಕ್ಕೆ ಎಲ್‌ಇಡಿ ಟಿವಿ!
Published On :

ಇಂಟೆಕ್ಸ್ ಕಂಪನಿ ಕೇವಲ ಅತ್ಯಂತ ಕಡಿಮೆ ಬೆಲೆಯ ಎಲ್‌ಇಡಿ ಟಿವಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಎಲ್‌ಇಡಿ ಟಿವಿ ಕ್ಷೇತ್ರದಲ್ಲಿ ಪೈಪೋಟಿಗೆ ಕಿಚ್ಚುಹಚ್ಚಿದೆ. ಇಂಟೆಕ್ಸ್ ಕಂಪನಿ ಮಾರುಕಟ್ಟೆಗೆ ಪರಿಚಯಿಸಿರುವುದು ಅತ್ಯಂತ ಸಣ್ಣ ಗಾತ್ರ ಎಲ್‌ಇಡಿ ಟಿವಿಗಳನ್ನು. 16 ಇಂಚಿನಿಂದ 23 ಇಂಚಿನ ಎಲ್‌ಇಡಿ ಟಿವಿಗಳು 7,499ರಿಂದ 12,000 ದರದಲ್ಲಿ ಲಭ್ಯವಿದೆ. ಗಾತ್ರದಲ್ಲಿ ದೊಡ್ಡದಲ್ಲದಿದ್ದರೂ ದರದಿಂದಾಗಿ ಇವು ಮಾರುಕಟ್ಟೆಯಲ್ಲಿ ಸಂಚಲನ ಉಂಟುಮಾಡುವ ಸಾಧ್ಯತೆ ಹೆಚ್ಚಿದೆ. ಎಚ್‌ಡಿ ಸ್ಕ್ರೀನ್‌ಗಳಾಗಿದ್ದು, ಯುಎಸ್‌ಬಿಯಿಂದ ನೇರವಾಗಿ ವೀಡಿಯೋ ಪ್ಲೇ ಮಾಡುವ ಸಾಮರ್ಥ್ಯ ಹೊಂದಿವೆ. ಕಣ್ಣಿನ ಸುರಕ್ಷೆಗಾಗಿ ಟಿ-ಮ್ಯಾಟ್ರಿಕ್ಸ್ ತಂತ್ರಜ್ಞಾನ ಹೊಂದಿವೆ ಎಂದು ಕಂಪನಿ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.