ಮೊಬೊಜೀನಿ ಮ್ಯಾಜಿಕ್

ಬೀಜಿಂಗ್ ಗೇಮ್ಸ್ ಡಿಜಿಟಲ್ ಟೆಕ್ನಾಲಜಿ ಕಂ ಲಿ ಆ್ಯಂಡ್ರಾಯ್ಡ್ ಹೊಸ ಅನ್ವಯಿಕ ಮೊಬೊಜೀನಿಯನ್ನು ಮುಂಬೈನಲ್ಲಿ ಬಿಡುಗಡೆ ಮಾಡಿದೆ. ಮೊಬೊಜೀನಿ ಆ್ಯಂಡ್ರಾಯ್ಡ್ ಮೊಬೈಲ್ ಫೋನ್‌ನ ಡೇಟಾ ಮ್ಯಾನೇಜರ್. ಇದರ ವಿಶೇಷತೆ ಎಂದರೆ ಬಳಕೆದಾರರು ತಮ್ಮ ಡೆಸ್ಕ್‌ಟಾಪ್‌ನಿಂದಲೇ ಆ್ಯಂಡ್ರಾಯ್ಡ್ ಫೋನಿನ ಪ್ರತಿಯೊಂದು ಕೆಲಸವನ್ನೂ ನಿರ್ವಹಿಸಬಹುದು.
ಮೊಬೊಜೀನಿಯಲ್ಲಿ ಬಳಕೆದಾರರು ಪ್ರತಿನಿತ್ಯ ಬಯಸುವ ಪ್ರಾಥಮಿಕ ಸಿಂಕಿಂಗ್, ಬ್ಯಾಕಪ್ ಮತ್ತು ರಿಸ್ಟೋರ್‌ಗಳಂಥ ಎಲ್ಲಾ ಲಕ್ಷಣಗಳು ಇವೆ. ಆದರೆ ಇದರ ನಿಜವಾದ ಉಪಯುಕ್ತತೆ ಇರುವುದು ಸಂದೇಶಗಳನ್ನು ಸಂಪರ್ಕಗಳನ್ನು ಕಂಪ್ಯೂಟರ್ ಕೀಬೋರ್ಡ್‌ನಿಂದ ಕಳುಹಿಸಬಹುದಾದ ಆಯ್ಕೆಯಲ್ಲಿ.
ಮೊಬೊಜೀನಿ ಬಳಸಿಕೊಂಡು ಯುಎಸ್‌ಬಿ ಮೂಲಕ ಸ್ಮಾರ್ಟ್‌ಫೋನ್‌ನಲ್ಲಿ ಪಿಸಿ ಅಂತರ್ಜಾಲ ಸಂಪರ್ಕ ಪಡೆಯಬಹುದು. ನಿಮ್ಮ ಟಚ್‌ಫೋನ್‌ಗಳನ್ನು ಬಳಸುವಾಗ ಬಳಕೆದಾರರ ಇಂಟರ್‌ಫೇಸ್ ಸುಲಭ. ಈ ಆಕರ್ಷಕ ಲಕ್ಷಣಗಳಲ್ಲದೆ ಅನ್ವಯಿಕವನ್ನು ಬಳಸುವಾಗ ಬಳಕೆದಾರರಿಗೆ ಫೋನ್, ಶೋಕೇಸ್, ಆ್ಯಪ್ಸ್, ಗೇಮ್ಸ್, ಮ್ಯೂಸಿಕ್ಸ್, ಇಮೇಜ್‌ಗಳು, ವಿಡಿಯೋಗಳು ಮುಂತಾದ 7 ಟ್ಯಾಬ್‌ಗಳು ಸಿಗುತ್ತವೆ. ಮೊಬೊಜೀನಿಯಲ್ಲಿ ಅಂತರ್ಗತವಾಗಿರುವ ಈ ವಿಶಿಷ್ಟ ಲಕ್ಷಣಗಳಿಂದಾಗಿ ಫೈಲ್‌ಗಳನ್ನು ಬಹಳ ಸುಲಭವಾಗಿ ಡೌನ್‌ಲೋಡ್ ಮಾಡಬಹುದು.
ಮೊಬೊಜೀನಿ ಒಂದು ಪೂರ್ಣ ಇಮೇಜ್ ಸೆಂಟರ್‌ನಂತೆ ಕೆಲಸ ಮಾಡುತ್ತದೆ. ಇದರಿಂದ ವಾಲ್‌ಪೇಪರ್‌ಗಳನ್ನು ಡೌನ್‌ಲೋಡ್ ಮಾಡಬಹುದು. ರಿಂಗ್‌ಟೋನ್‌ಗಳನ್ನು ಸುಲಭವಾಗಿ ಹಾಕಬಹುದು.
ಮೊಬೊಜೀನಿ ಇನ್‌ಸ್ಟಲೇಷನ್ ಬಹಳ ಸುಲಭ. ಅನ್ವಯಿಕವನ್ನು ಆರಂಭಿಸಿದ ತಕ್ಷಣ ಯುಎಸ್‌ಬಿ ಕೇಬಲ್ ಮೂಲಕ ಆ್ಯಂಡ್ರಾಯ್ಡ್ ಸಾಧನವನ್ನು ಕಂಪ್ಯೂಟರ್‌ಗೆ ಸಂಪರ್ಕಿಸಬೇಕು. ಮೊಬೊಜೀನಿ ಆಂಡ್ರಾಯ್ಡ್ ಡ್ರೈವರ್ ಇನ್‌ಸ್ಟಾಲ್ ಮಾಡುತ್ತದೆ. ನಂತರ ಫೋನ್ ಮೂಲಕ ಸಂವಹನ ನಡೆಸಬಹುದು.
ಆ್ಯಪ್ ಟ್ಯಾಬ್ ಅಪ್ಲಿಕೇಶನ್ ಮ್ಯಾನೇಜರ್‌ನಂತೆ ಕೆಲಸ ಮಾಡುತ್ತದೆ. ಇಲ್ಲಿ ಇನ್‌ಸ್ಟಾಲ್ ಆದ ಅಪ್ಲಿಕೇಶನ್, ನವೀಕರಿಸಿದ ಅಪ್ಲಿಕೇಶನ್ ಮತ್ತು ಇನ್‌ಸ್ಟಾಲ್ ಆಗದ ಅಪ್ಲಿಕೇಷನ್‌ಗಳನ್ನು ಮೊಬೈಲ್‌ನಿಂದಲೇ ನೋಡಬಹುದು. ನೇರ ಮೊಬೊಜೀನಿಯಿಂದ ಅಪ್ಲಿಕೇಶನ್ ಡೌನ್‌ಲೋಡ್ ಕೂಡ ಮಾಡಬಹುದು.
ಮೊಬೊಜೀನಿ ಮ್ಯೂಸಿಕ್, ಇಮೇಜಸ್, ವಿಡಿಯೋ ಕಡತಗಳನ್ನು ಸಿಂಕ್ ಕೂಡ ಮಾಡುತ್ತದೆ. ಇದರಲ್ಲಿ ಎಂಪಿ3 ಕೂಡ ಕೇಳಬಹುದು. ಫೋಟೋ ಆಲ್ಬಂಗಳನ್ನು ನೋಡಬಹುದು. ಫೋನ್‌ಗಳನ್ನು ಬಳಸಿ ಸೇವ್ ಮಾಡಿರುವ ಚಲನಚಿತ್ರಗಳನ್ನು ಪಿಸಿ ಅಥವಾ ಲ್ಯಾಪ್‌ಟಾಪ್‌ನಲ್ಲಿ ವೀಕ್ಷಿಸಬಹುದು. ಇದರಲ್ಲಿ ಇಮೇಜ್ ಸೆಂಟರ್ ಕೂಡ ಇದೆ. ಇದರಿಂದ ಆ್ಯಂಡ್ರಾಯ್ಡ್ ಫೋನಿನಲ್ಲಿ ವಾಲ್‌ಪೇಪರ್‌ಗಳನ್ನು ಡೌನ್‌ಲೋಡ್, ಇನ್‌ಸ್ಟಾಲ್ ಮಾಡಬಹುದು.
ಕಡತ ನಿರ್ವಾಹಕವಿಲ್ಲದೆ ಆ್ಯಂಡ್ರಾಯ್ಡ್ ನಿರ್ವಹಣಾ ಸಾಧನ ಉಪಯೋಗಕ್ಕಿಲ್ಲ. ಮೊಬೊಜೀನಿಯಿಂದ ನೀವು ಯಾವುದೇ ಕಡತ ಅಥವಾ ಫೋಲ್ಡರನ್ನು ನಿಮ್ಮ ಪಿಸಿಗೆ ಡೌನ್‌ಲೋಡ್ ಮಾಡಬಹುದು, ಅಪ್‌ಲೋಡ್ ಮಾಡಬಹುದು. ಹೊಸ ಫೋಲ್ಡರ್‌ಗಳನ್ನು ಸೃಷ್ಟಿಸಬಹುದು, ಕಡತಗಳನ್ನು ಹುಡುಕಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


