ಟ್ಯಾಬ್ ಓದು

ದೊಡ್ಡ ದೊಡ್ಡ ಪುಸ್ತಕಗಳು ನಿಮ್ಮ ಅಂಗೈಯಲ್ಲಿರುವ ಟ್ಯಾಬ್ಲೆಟ್‌ನಲ್ಲೇ ಸಿಕ್ಕರೆ ಓದಿಕೊಳ್ಳಲು ಎಷ್ಟೊಂದು ಸುಲಭ ಅಲ್ಲವೆ? ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗಾಗಿ ಆಪ್‌ಥಾಟ್ಸ್ ಕಂಪನಿ ನೂತನ ಟ್ಯಾಬ್ಲೆಟ್ ಬಿಡುಗಡೆ ಮಾಡಿದೆ. ಇದರಲ್ಲಿ ಪಿಯುಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಬೇಕಾಗಿರುವ ಪಠ್ಯಪುಸ್ತಕಗಳನ್ನು ಮತ್ತು ಮಾದರಿ ಪ್ರಶ್ನೆಪತ್ರಿಕೆಗಳನ್ನು ಅಪ್ಲಿಕೇಷನ್ ಮೂಲಕ ನೀಡಿದೆ.
ಹೀಗಾಗಿ ವಿದ್ಯಾರ್ಥಿಗಳು ಎಲ್ಲಿ ಬೇಕಾದರೂ ಇಂಟರ್‌ನೆಟ್ ಸಹಾಯವಿಲ್ಲದೆ ತಮ್ಮ ಪಠ್ಯಪುಸ್ತಕಗಳನ್ನು ಟ್ಯಾಬ್ಲೆಟ್‌ನಲ್ಲೇ ಓದಿಕೊಳ್ಳಬಹುದು. ಆರಂಭಿಕ ಹಂತದಲ್ಲಿ ಗಣಿತ, ಜೀವಶಾಸ್ತ್ರ, ರಾಸಾಯನಿಕ ಶಾಸ್ತ್ರ ಪುಸ್ತಕಗಳನ್ನು ಸಂಯೋಜಿಸಿದೆ.
ಕೂಂಬಾಟ್ ಜೋನ್
ಇದು ಪರೀಕ್ಷಾ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ. ಇದೊಂದು ಅಪ್ಲಿಕೇಷನ್ ಆಗಿದ್ದು, ಇದರಲ್ಲಿ ಮಾದರಿ ಪ್ರಶ್ನೆಪತ್ರಿಗೆಳನ್ನು ಸಂಯೋಜಿಸಲಾಗಿದೆ. ವಿದ್ಯಾರ್ಥಿಗಳು ಮಾದರಿ ಪ್ರಶ್ನೆಪತ್ರಿಕೆಗೆ ಉತ್ತರಿಸುವ ಮೂಲಕ ಪರೀಕ್ಷಾ ಸಿದ್ಧತೆಗೆ ತಾವು ಹೇಗೆ ಸಿದ್ಧನಾಗಿದ್ದೇವೆ ಎಂದು ಪರೀಕ್ಷಿಸಿಕೊಳ್ಳಬಹುದು. ವಿಷಯವಾರು ಪರೀಕ್ಷೆ, ಅಣುಕು ಪರೀಕ್ಷೆ, ಜೆಇಇ- ಎನ್‌ಇಇಟಿ ಪರೀಕ್ಷೆ ಬಗ್ಗೆ ಓದಿಕೊಳ್ಳುವುದರ ಜತೆಗೆ ನೀವು ನೀಡಿರುವ ಉತ್ತರಗಳ ಬಗ್ಗೆ ಪರೀಕ್ಷಾ ವಿಶ್ಲೇಷಣೆ ಮಾಡಬಹುದು.
ಆಸ್ಕ್
ಪುಸ್ತಕ ಓದುವ ಅಥವಾ ಮಾದರಿ ಪ್ರಶ್ನೆ ಪತ್ರಿಕೆಗೆ ಉತ್ತರಿಸುವ ಸಂದರ್ಭದಲ್ಲಿ ಸಂದೇಶ ಅಥವಾ ಗೊಂದಲ ಉಂಟಾದಲ್ಲಿ 'ಆಸ್ಕ್' ಅಪ್ಲಿಕೇಷನ್‌ಗೆ ಹೋದರೆ ನಿಮ್ಮ ಗೊಂದಲಗಳ ಬಗ್ಗೆ ಪ್ರಶ್ನೆ ಕೇಳಿ ಉತ್ತರ ಪಡೆದುಕೊಳ್ಳಬಹುದು. ಇದಕ್ಕೆ ಇಂಟರ್‌ನೆಟ್ ಅವಶ್ಯ.
ಸಿಮ್- ಸಿಮ್ ಇಲ್ಲದೆ
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಂಪನಿಯು ಸಿಮ್ ಒಳಗೊಂಡ ಮತ್ತು ಸಿಮ್ ಒಳಗೊಳ್ಳದಿರುವ ಎರಡು ರೀತಿಯ ಟ್ಯಾಬ್ಲೆಟ್ ಬಿಡುಗಡೆ ಮಾಡಿದೆ. ಹೀಗಾಗಿ ಆಯ್ಕೆ ವಿಷಯ ವಿದ್ಯಾರ್ಥಿಗಳಿಗೆ ಬಿಟ್ಟ ವಿಚಾರವಾಗಿದೆ. ಸಿಮ್ ಹೊಂದಿರುವ ಟ್ಯಾಬ್ಲೆಟ್‌ನ ಬೆಲೆ 10,000 ಮತ್ತು ಸಿಮ್ ಹೊಂದಿರದ ಟ್ಯಾಬ್ಲೆಟ್‌ನ ಬೆಲೆ 11,500. ಹೆಚ್ಚಿನ ಮಾಹಿತಿಗೆ www.appthoughtz.com, info@appthoughtz.com 42281115.
ಟ್ಯಾಬ್ಲೆಟ್‌ನಲ್ಲಿರುವ ಅಪ್ಲಿಕೇಷನ್
- ರೀಡಿಂಗ್
- ಡ್ಯಾಶ್ ಬೋರ್ಡ್
- ಸ್ಟಡಿ ಮೆಟಿರಿಯಲ್
- ಪರೀಕ್ಷೆಗಳು
- ವಿಡಿಯೋ
- ಕೂಂಬಾಟ್ ಜೋನ್
- ಆಸ್ಕ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


