ಬಂದೇ ಬಿಡ್ತು ಆಪಲ್ ಟಿವಿ

ಐಫೋನ್, ಐಪಾಡ್, ಐಪ್ಯಾಡ್‌ಗಳ ಮೂಲಕ ಪ್ರಸಿದ್ಧವಾಗಿರುವ ಆ್ಯಪಲ್ ಕಂಪನಿ ಈಗ ಭಾರತಕ್ಕೆ ಆ್ಯಪಲ್ ಟಿವಿಯನ್ನೂ ಬಿಡುಗಡೆ ಮಾಡಿದೆ.
ಭಾರತೀಯ ಮಾರುಕಟ್ಟೆಯತ್ತ ಆರಂಭದಲ್ಲಿ ಅಷ್ಟೇನೂ ಗಮನಹರಿಸದ ಆ್ಯಪಲ್ ಸಂಸ್ಥೆ, ಇತ್ತೀಚೆಗೆ ಭಾರತದ ಮಾರುಕಟ್ಟೆ ಮೇಲೆ ವಿಶೇಷ ಗಮನ ಕೇಂದ್ರೀಕರಿಸಿದೆ. ಅಮೆರಿಕದಲ್ಲಿ ಬಿಡುಗಡೆಯಾದ ಕೆಲವೇ ದಿನದಲ್ಲಿ ಭಾರತದಲ್ಲೂ ಐಫೋನ್ 5 ಮತ್ತು ಐಪ್ಯಾಡ್ ಮಿನಿ ಬಿಡುಗಡೆ ಮಾಡಿ ಗಮನ ಸೆಳೆದಿತ್ತು. ಇತ್ತೀಚೆಗೆ ಭಾರತಕ್ಕೆಂದೇ ಆ್ಯಪಲ್ ಸ್ಟೋರ್ ಕೂಡ ಆರಂಭಿಸಿತ್ತು.
ಆ್ಯಪಲ್ ಟಿವಿಯ ವಿಶೇಷತೆಯೆಂದರೆ ನೀವು ನಿಮ್ಮ ಐಫೋನ್, ಐಪ್ಯಾಡ್ ಅಥವಾ ಐಪಾಡ್‌ನಿಂದ ವಿಡಿಯೋವನ್ನು ನಿಮ್ಮ ಟಿವಿಯಲ್ಲಿ ಕಾಣುವಂತೆ ಮಾಡಬಹುದು. ಕಂಪ್ಯೂಟರ್ ಇದ್ದರೆ ಅದರಲ್ಲಿ ಪ್ಲೇ ಮಾಡಿದ ವಿಡಿಯೋ ಅಥವಾ ಚಲನಚಿತ್ರವನ್ನು ಟಿವಿಯಲ್ಲಿ ನೋಡಬಹುದು.
ನೀವು ಗಮನಿಸಬೇಕಾದ ಅಂಶವೆಂದರೆ ಆ್ಯಪಲ್ ಟಿವಿ ಎಂಬುದು ಟಿವಿಯಲ್ಲ. ಅದು ಒಂದು ಸಣ್ಣ ಪೆಟ್ಟಿಗೆ. ಅದನ್ನು ನಿಮ್ಮ ಟಿವಿಗೆ ಸಂಪರ್ಕ ಕಲ್ಪಿಸಬೇಕು. ಅದು ಎಚ್‌ಡಿ ವೀಡಿಯೋ ಪ್ಲೇ ಮಾಡುವ ಸಾಮರ್ಥ್ಯ ಹೊಂದಿದೆ. ಐಕ್ಲೌಡ್‌ನಲ್ಲಿರುವ ವೀಡಿಯೋಗಳನ್ನು ಕೂಡ ಪ್ಲೇ ಮಾಡಬಲ್ಲದು.
ಆ್ಯಪಲ್ ಟಿವಿ ಆ್ಯಪಲ್ ಎ5 ಪ್ರೊಸೆಸರ್ ಹೊಂದಿದ್ದು, ರಿಮೋಟ್ ಕೂಡ ಹೊಂದಿದೆ. ನೀವು ನಿಮ್ಮ ಐಫೋನ್, ಐಪ್ಯಾಡ್ ಅಥವಾ ಐಪಾಡ್ ಮೂಲಕ ಕೂಡ ನಿಮ್ಮ ಆ್ಯಪಲ್ ಟಿವಿಯನ್ನು ನಿಯಂತ್ರಿಸಬಹುದು. ಇದರ ದರ 8,295.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


