ಹೂವೈ ವಿಡಿಯೋ ಕಾನ್ಫರೆನ್ಸ್

ಪುಟ್ಟ ಕೋಣೆ. ಅದನ್ನು ನೀವೇ ವಿಡಿಯೋ ಕಾನ್ಫರೆನ್ಸಿಂಗ್ ಕೊಠಡಿಯಾಗಿ ಪರಿವರ್ತಿಸಿಕೊಳ್ಳಬಹುದು. ಅದೂ ಕೇವಲ ಐದು ನಿಮಿಷದಲ್ಲಿ ಮತ್ತು ಯಾವುದೇ ತಜ್ಞರ ನೆರವಿಲ್ಲದೆ! ಇಂಥ ವಿಶಿಷ್ಟ ವಿಡಿಯೋ ಕಾನ್ಫರೆನ್ಸಿಂಗ್ ಸಿಸ್ಟಮ್ 'ಹೂವೈ ಟಿಇ30'ಯನ್ನು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರಾಗಿರುವ ಹೂವೈ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಹೂವೈ ಟಿಇ30 ಆಲ್ ಇನ್ ಒನ್ ಎಚ್‌ಡಿ ವಿಡಿಯೋ ಕಾನ್ಫರೆನ್ಸಿಂಗ್ ಸಾಧನವನ್ನು ಸುಲಭವಾಗಿ ಅಳವಡಿಸಿಕೊಳ್ಳಬಹುದು. ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ ಇದು ಹೇಳಿಮಾಡಿಸಿದಂತಿದೆ.
ವಹಿವಾಟು ಜಗತ್ತು ವಿಸ್ತರಣೆಯಾಗುತ್ತಿರುವಂತೆ, ಎಲ್ಲ ವರ್ಗದ ಉದ್ಯಮಗಳೂ ಮಾರುಕಟ್ಟೆಯನ್ನು ತಲುಪಲು ಬಹುವಾಗಿ ಪ್ರಯತ್ನಿಸುತ್ತಿವೆ. ಇದರಿಂದಾಗಿ ಎಲ್ಲ ಕಡೆಗಳಲ್ಲೂ ಗ್ರಾಹಕರು ಮತ್ತು ಸಂಸ್ಥೆಯ ತಂಡಗಳನ್ನು ಸಂಪರ್ಕಿಸುವ ಅಗತ್ಯ ಹೆಚ್ಚಾಗಿದೆ. ಮುಖಾಮುಖಿ ಸಭೆ ನಡೆಸಲು ಕಾಲಾವಕಾಶ ಕೊರತೆಯ ಜತೆಗೆ ವೆಚ್ಚವೂ ಹೆಚ್ಚು. ಈಗಾಗಲೇ ಕಷ್ಟದಲ್ಲಿರುವ ಸಂಸ್ಥೆಗಳು ಇಂಥ ಪ್ರಯತ್ನಕ್ಕೆ ಮುಂದಾಗಲಾರವು. ಹೂವೈ ಟಿಇ30 ಸಾಧನದ ಇನ್‌ಸ್ಟಾಲೇಶನ್ ಅನ್ನು ಕೇವಲ ಐದು ನಿಮಿಷಗಳಲ್ಲಿ ಮುಗಿಸಬಹುದು. 1080ಪಿ ಎಚ್‌ಡಿ ವೀಡಿಯೋ ಕಾನ್ಫರೆನ್ಸಿಂಗ್ ಅನುಭವ ಪಡೆಯಬಹುದು. ಹೊಸದಾದ ಮತ್ತು ವಾಯ್ಸ್ ಡಯಲಿಂಗ್ ಅವಕಾಶ ಹೂವೈ ಟಿಇ30 ಬಳಕೆಗೆ ಇನ್ನಷ್ಟು ಉತ್ತೇಜನ ನೀಡಲಿದೆ. ಸರಳತೆ ಇದರ ದೊಡ್ಡ ಅನುಕೂಲ. ಸಣ್ಣ ಕೊಠಡಿಯಲ್ಲಿಯೇ ವಿಡಿಯೋ ಕಾನ್ಫರೆನ್ಸಿಂಗ್ ನಡೆಸಬಹುದು. ಟಿಇ30 ಸಾಧನದಲ್ಲಿ ವಿಶಿಷ್ಟವಾದ ವೈಫೈ ಸಂಪರ್ಕವೂ ಸಾಧ್ಯ. ಮೈಕ್ರೋಫೋನ್‌ಗೂ ಕೇಬಲ್ ಬೇಕಾಗಿಲ್ಲ. ಅಂದರೆ ಐದೇ ನಿಮಿಷಗಳಲ್ಲಿ ಸಾಮಾನ್ಯವಾದ ಕೊಠಡಿಯೊಂದನ್ನು ವಿಡಿಯೋ ಕಾನ್ಫರೆನ್ಸಿಂಗ್ ಕೊಠಡಿಯಾಗಿ ಪರಿವರ್ತಿಸಬಹುದು. ಇದಕ್ಕೆ ಯಾವುದೇ ತಜ್ಞರ ಅವಶ್ಯಕತೆಯೂ ಇಲ್ಲ. ಅಲ್ಲದೇ ಇದನ್ನು ಗೋಡೆ, ಸೀಲಿಂಗ್ ಅಥವಾ ಟಿವಿಯ ಮೇಲೂ ಇನ್‌ಸ್ಟಾಲ್ ಮಾಡಬಹುದು. ಹೂವೈ ಟಿಇ30ನಲ್ಲಿ ಧ್ವನಿಯಾಧಾರಿತ ಡಯಲಿಂಗ್‌ಗೂ ಅವಕಾಶ ಇದೆ. ಕಾನ್ಫರೆನ್ಸ್ ಸ್ಥಳದಲ್ಲಿ ನೀವು ಕನೆಕ್ಟ್ ಮಾಡಬೇಕಾದ ವ್ಯಕ್ತಿಯ ಹೆಸರು ಕರೆದರೆ ಹೂವೈ ಟಿಇ30 ಅದನ್ನು ಗುರುತಿಸಿ ಆ ವ್ಯಕ್ತಿಗೆ ಕರೆ ಮಾಡುತ್ತದೆ. 'ಧ್ವನಿಯಾಧಾರಿತ ಡಯಲಿಂಗ್‌ಗೆ ನೆರವಾಗುವ ವಿಶ್ವದ ಮೊದಲ ಸಾಧನ ಇದು' ಎನ್ನುವುದು ಕಂಪನಿ ಹೇಳಿಕೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


