ಚೀಪ್ ಅನ್ನಿಸ್ಕೊಳ್ಳೋಕೆ ಇಷ್ಟವಿಲ್ಲ!

ಭಾರತದ ಪ್ರಮುಖ ಮೊಬೈಲ್ ಉತ್ಪಾದಕರಾದ ಮೈಕ್ರೋಮ್ಯಾಕ್ಸ್ ಮತ್ತು ಕಾರ್ಬನ್ ಕಂಪನಿಗಳಿಗೆ ಚೀಪ್ ಮೊಬೈಲ್ ಫೋನ್ಸ್ ಎಂಬ ಹೆಸರು ತೆಗೆದುಕೊಳ್ಳಲು ಇಷ್ಟವಿಲ್ಲವಂತೆ. ಅದಕ್ಕಾಗಿ ಎರಡೂ ಕಂಪನಿಗಳು ತಮ್ಮ ಜಾಹೀರಾತು ಯೋಜನೆ ಮತ್ತು ಮೊಬೈಲ್ ಹ್ಯಾಂಡ್‌ಸೆಟ್ ತಯಾರಿಕೆಯಲ್ಲಿ ಬದಲಾವಣೆ ಮಾಡಲಿವೆಯಂತೆ.
ಮೈಕ್ರೋಮ್ಯಾಕ್ಸ್ ಕಂಪನಿ ಈಗಾಗಲೇ ಕ್ಯಾನ್ವಾಸ್ ಹೆಸರಿನ ಸ್ಮಾರ್ಟ್‌ಫೋನ್‌ಗಳ ಮೂಲಕ ಗ್ರಾಹಕರಲ್ಲಿ ತನ್ನ ಗೌರವ ಹೆಚ್ಚಿಸಿಕೊಳ್ಳುವುದರ ಜತೆಗೆ ಕೇವಲ ಕಡಿಮೆ ದರದ ಮೊಬೈಲ್ ಕಂಪನಿ ಎಂಬ ಹೆಸರನ್ನು ಸ್ವಲ್ಪ ಮಟ್ಟಿಗೆ ತೊಡೆದು ಹಾಕಿದೆ. ಕಾರ್ಬನ್ ಕಂಪನಿ ಕೂಡ ಟಿಟಾನಿಯಮ್ ಎಸ್5 ಮೂಲಕ ಉತ್ತಮ ಮೊಬೈಲ್ ನೀಡುವ ಮೂಲಕ ಗಮನ ಸೆಳೆದಿದೆ.
ಮೈಕ್ರೋಮ್ಯಾಕ್ಸ್ ಕಂಪನಿ ರು. 12,000- 20,000ದ ದರದಲ್ಲಿ ಮೊಬೈಲ್‌ಗಳನ್ನು ಗ್ರಾಹಕರನ್ನು ಸೆಳೆಯುವುದನ್ನು ಗಮನಿಸಿದ್ದು ರು. 17,000ಕ್ಕೆ ಕ್ಯಾನ್ವಾಸ್4 ಬಿಡುಗಡೆ ಮಾಡಿದೆ. ರು. 20,000ದೊಳಗೆ ಇನ್ನೊಂದು ಸ್ಮಾರ್ಟ್‌ಪೋನ್ ಬಿಡುವ ಯೋಚನೆ ಕಂಪನಿಯದ್ದು. ಇದೇ ರೀತಿಯ ತಂತ್ರ ಬಳಸಲು ಕಾರ್ಬನ್ ಕಂಪನಿ ಕೂಡ ಯೊಚನೆ ನಡೆಸಿದೆಯಂತೆ.
ಇದರ ಮೊದಲ ಹೆಜ್ಜೆಯಾಗಿ ಎರಡೂ ಕಂಪನಿಗಳು ತಮ್ಮ ಮೊಬೈಲ್‌ನ ಜಾಹೀರಾತುಗಳಿಗೆ ಪ್ರಸಿದ್ಧ ವ್ಯಕ್ತಿಗಳನ್ನು ಮಾಡೆಲ್ ಆಗಿ ತೆಗೆದುಕೊಳ್ಳಲು ಮತ್ತು ಜಾಹೀರಾತು ನೀತಿಯನ್ನು ಬದಲಾಯಿಸಲು ನಿರ್ಧರಿಸಿವೆ.
ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಕಂಪನಿ ಶೇ.40.7ರಷ್ಟು ಪಾಲು ಹೊಂದಿದ್ದರೆ, ಮೈಕ್ರೋಮ್ಯಾಕ್ಸ್ ಸಂಸ್ಥೆ ಶೇ.19.3ರಷ್ಟು ಪಾಲು ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿದೆ. ಕಾರ್ಬನ್ ಸಂಸ್ಥೆ ಶೇ.8.6ರಷ್ಟು ಪಾಲು ಹೊಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


